Advertisement

ಅರ್ಜಿದಾರನಿಗೆ 5 ಲಕ್ಷ ದಂಡ ವಿಧಿಸಿದ ಸುಪ್ರೀಂ

07:51 AM Jun 13, 2020 | mahesh |

ಹೊಸದಿಲ್ಲಿ: ದೇಶದಲ್ಲಿ ಕೋಕಕೋಲಾ, ಥಮ್ಸ್‌ ಅಪ್‌ಗಳ ಮಾರಾಟದ ಮೇಲೆ ನಿಷೇಧ ಹೇರಬೇಕು ಎಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದೆ. ಇಷ್ಟು ಮಾತ್ರವಲ್ಲದೆ ಇಂಥ ಅರ್ಜಿ ಸಲ್ಲಿಸಿದ “ಸಾಮಾಜಿಕ ಕಾರ್ಯಕರ್ತ’ ಉಮೇದ್‌ಸಿನ್‌ ಪಿ. ಚಾವ್ದಾ ಎಂಬವರಿಗೆ 5 ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿದೆ. ತಂಪು ಪಾನಿಯಗಳ ಎರಡು ಬ್ರಾಂಡ್‌ಗಳನ್ನು ಯಾವ ಕಾರಣಕ್ಕಾಗಿ ನಿಷೇಧಿಸಬೇಕು ಎಂಬುದರ ಬಗ್ಗೆ ಅರ್ಜಿದಾ ರರ ಪರ ವಕೀಲರು ಸಮರ್ಥವಾಗಿ ಕಾರಣ ಮಂಡಿಸುವಲ್ಲಿ ವಿಫ‌ಲರಾಗಿದ್ದಾರೆ. ಅವರು ಯಾವುದೋ ಒಂದು ಉದ್ದೇಶವನ್ನು ಇರಿಸಿಕೊಂಡು ಇಂಥ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಕೋರ್ಟ್‌ನ ಸಮಯ ವ್ಯರ್ಥಗೊಳಿಸಿದ್ದಾರೆ ಎಂದು ನ್ಯಾ.ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟು ಅರ್ಜಿಯನ್ನು ತಿರಸ್ಕರಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next