Advertisement

ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಕೆ

01:38 PM Mar 03, 2017 | Team Udayavani |

ಜಗಳೂರು: ಅಂತರ್ಜಲ ಪಾತಾಳ ಸೇರಿ ತೀರಾ ಗಂಭೀರ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಲ್ಲಿ ಮಾತ್ರ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಧಿಕಾರಿ ಡಿ.ಎಸ್‌.ರಮೇಶ್‌ ತಿಳಿಸಿದರು. 

Advertisement

ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಬರನಿರ್ವಹಣೆ ಕಾಮಗಾರಿಗಳನ್ನು ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಜ್ಜಪ್ಪ ಒಡೆಯರಹಳ್ಳಿ, ತುಪ್ಪದಹಳ್ಳಿ ಸೇರಿದಂತೆ ಇತರೇ ಗ್ರಾಮಗಳಲ್ಲಿ ಮಾತ್ರ ಟ್ಯಾಂಕ್‌ರ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ.

ಸದ್ಯದ ಮಟ್ಟಿಗೆ ಜಗಳೂರು ಪಟ್ಟಣಕ್ಕೆ ಶಾಂತಿಸಾಗರದಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆ ಎಂದು ಮಾಹಿತಿ ನೀಡಿದರು.  ಸುಮಾರು 10 ಗ್ರಾಮಗಳಿಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಅಂತಹ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಇನ್ನೇರಡು ತಿಂಗಳ ನಂತರ ಬಿಗಡಾಯಿಸುವ ಸಾಧ್ಯತೆ ಇದೆ.

ಕುಡಿಯುವ ನೀರಿಗೆ ಅನುದಾನದ ಕೊರೆತೆಯಿಲ್ಲ. ಟ್ಯಾಂಕರ್‌ರ ಮೂಲಕ ಪೂರೈಕೆ ಮಾಡಿದ ಸಂಬಂಧ ದಾಖಲೆಗಳನ್ನು ಸಲ್ಲಿಸಿ ಅನುದಾನ ಪಡೆದುಕೊಳ್ಳಬಹುದು. ಆದರೆ ಅದು ವಿಳಂಬವಾಗುವುಂತಿಲ್ಲ. ಜಗಳೂರು ತಾಲೂಕಿನ ಗುರುಸಿದ್ದಾಪುರ ದೇವಸ್ಥಾನದ ಬಳಿ ಪಿಸಲಾಗಿರುವ ಮೇವು ಬ್ಯಾಂಕ್‌ನಲ್ಲಿ 40 ಟನ್‌ ಮೇವು ದಾಸ್ತಾನು ಮಾಡಲಾಗಿದೆ.

ಅಗತ್ಯವುಳ್ಳ ರೈತರು 2 ಕೆ.ಜಿ.ಯಂತೆ ಖರೀದಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಪ್ರಚಾರ ಪಡೆಸುವಂತೆ ತಹಶೀಲ್ದಾರ್‌ ಅವರಿಗೆ ತಾಕೀತು ಮಾಡಿದರು. ಜಗಳೂರು ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಪದೇ ಪದೇ ದೂರು ಕೇಳಿಬರುತ್ತಿದೆ.

Advertisement

ಮನೆ ನಿರ್ಮಾಣಕ್ಕೆ ಒಂದೆರಡು ಲೋಡ್‌ ಮರಳು ತೆಗೆದುಕೊಂಡರೆ ಪರವಾಗಿಲ್ಲ. ಆದರೆ ಅದನ್ನೇ ವ್ಯಾಪಾರ ದಂಧೆ ಮಾಡಿಕೊಂಡುವರ ಮೇಲೆ ನಿರ್ದಾಕ್ಷಿಣವಾಗಿ ಕ್ರಮ ಕೈಗೊಳ್ಳಬೇಕು. ಕೇವಲ ದಂಡ ಹಾಕಿದರೆ ಸಾಲದು ವಾಹನಗಳನ್ನು ಸೀಜ್‌ ಮಾಡುವಂತೆ ತಹಶೀಲ್ದಾರರಿಗೆ ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು. 

ರೈತರ ಬೆಳೆಹಾನಿ ಪರಿಹಾರ ಹಣ ವರ್ಗಾವಣೆಗೆ ಅಪಡೇಟ್‌ ಮಾಡಲಾಗುತ್ತಿದ್ದು, ಪೂರ್ಣ ಪ್ರಮಾಣದಲ್ಲಿ ರೈತರು ಬ್ಯಾಂಕ್‌ ಖಾತೆಯ ನಂಬರ್‌ ನೀಡಿಲ್ಲ ಹೀಗಾಗಿ ವಿಳಂಬವಾಗಿದೆ. ಸದ್ಯದಲ್ಲಿ ಅದು ಪೂರ್ಣಗೊಳ್ಳಲಿದೆ. ಜಗಳೂರು ತಾಲೂಕಿನ 40 ಸಾವಿರ ರೈತರ ಪೈಕಿ 32 ಸಾವಿರ ರೈತರ ಡಾಟಾ ಅಪ್‌ಡೇಟ್‌ ಮಾಡಲಾಗಿದ್ದು, ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡ ನಂತರ ರೈತರ ಖಾತೆಗಳಿಗೆ ಪರಿಹಾರ ಹಣ ವರ್ಗಾವಣೆಯಾಗಲಿದೆ ಎಂದು ತಿಳಿಸಿದರು.

ತಹಶೀಲ್ದಾರ್‌ ಶ್ರೀಧರಮೂರ್ತಿ, ತಾಪಂ ಇಒ ಬಿ.ಲಕ್ಷಿಪತಿ, ಪಪಂ ಉಪಾಧ್ಯಕ್ಷ ಹಾಲಸ್ವಾಮಿ, ಕುಡಿಯುವ ನೀರು ನೈರ್ಮಲ್ಯ ಎಇಇ ರವಿಚಂದ್ರ, ಕೃಷಿ ಸಹಾಯಕ ನಿರ್ದೇಶಕ ಕೆ.ಟಿ.ಬಸಣ್ಣ, ಮುಖ್ಯಾಧಿಧಿಕಾರಿ ಬಿ.ಕಂಪಳಮ್ಮ ಇತರರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next