Advertisement

ಮೂಲೆಗುಂಪಾದ “ಮಿನಿ ಅರ್ಬನ್‌ ಹಟ್‌’ಯೋಜನೆ

11:29 PM May 23, 2019 | sudhir |

ಕಾಸರಗೋಡು: ಸುಮಾರು 1.40 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿ ಗುರುತಿಸಿ ಕೊಂಡಿರುವ ಬೇಕಲ ಕೋಟೆ ನೆಲೆಗೊಂಡಿರುವ ಬೇಕಲದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಜೊತೆಗೆ ಕರಕುಶಲ ವಸ್ತುಗಳ ಮತ್ತು ಕೈಮಗ್ಗ ಉತ್ಪನ್ನಗಳನ್ನು ತಯಾರಿಸುವ ಉದ್ದೇಶದಿಂದ ಆರಂಭಿಸಿದ ಯೋಜಿಸಿದ “ಮಿನಿ ಅರ್ಬನ್‌ ಹಟ್‌’ ಸಾಕಾರಗೊಳ್ಳದೆ ಮೂಲೆಗುಂಪಾಗಿದೆ.

Advertisement

ಕರಕುಶಲ ವಸ್ತುಗಳ ಹಾಗೂ ಕೈಮಗ್ಗ ಉತ್ಪನ್ನ ಗಳನ್ನು ತಯಾರಿಸುವ ಜತೆಗೆ ಇಲ್ಲಿ ಉತ್ಪಾದಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕಾಗಿ ಅರ್ಬನ್‌ ಹಟ್‌ ನಿರ್ಮಿಸಲಾಗುವುದೆಂದು ಕೇರಳ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಎಂ.ಸಿ. ಖಮರುದ್ದೀನ್‌ ವರ್ಷಗಳ ಹಿಂದೆ ತಿಳಿಸಿದ್ದರು. ಈ ಯೋಜನೆಯಲ್ಲದೆ ಇನ್ನೂ ಹಲವು ಯೋಜನೆಗಳನ್ನು ಸರಕಾರಕ್ಕೆ ಸಲ್ಲಿಸುವುದಾಗಿಯೂ ಇದೇ ಸಂದರ್ಭದಲ್ಲಿ ಹೇಳಿದ್ದರು. ಅಲ್ಲದೆ ಇದರಲ್ಲಿ “ಫುಡ್‌ ಕೋರ್ಟ್‌’ ಸಹಿತ ಸೌಕರ್ಯಗಳನ್ನು ಏರ್ಪಡಿಸಲಾಗುವುದು.

ಕಾಸರಗೋಡು ಜಿಲ್ಲೆಯಲ್ಲಿ ಕರಕುಶಲ ಎಂಪೋರಿಯಂ ತೆರೆಯಲಾಗುವುದು. ಕಾಸರಗೋಡು ಜಿಲ್ಲೆ ಸಹಿತ ರಾಜ್ಯದ ವಿವಿಧೆಡೆಗಳಲ್ಲಿ ಉತ್ಪಾದಿಸಿದ ಕರಕುಶಲ ವಸ್ತುಗಳು, ಕೈಮಗ್ಗ ಉತ್ಪನ್ನಗಳನ್ನು ಇದರಲ್ಲಿ ಸ್ಥಾನ ಪಡೆಯಲಿದೆ. ಸೂಕ್ತ ಸ್ಥಳ ಲಭಿಸಿದರೆ ಕರಕುಶಲ ಎಂಪೋರಿಯಂನ್ನು ಸ್ಥಾಪಿಸಲು ಸಾಧ್ಯವಾಗುವುದು ಎಂದು ಭರವಸೆ ನೀಡಿದ್ದರು. ಆದರೆ ವರ್ಷ ಕಳೆದರೂ ಇನ್ನೂ ಈ ಬಗ್ಗೆ ಒಂದು ಹೆಜ್ಜೆ ಮುಂದೆ ಹೋಗಿಲ್ಲ.

ಈ ಯೋಜನೆಯಲ್ಲಿ ಕರಕುಶಲ ವಸ್ತುಗಳನ್ನು ನಿರ್ಮಿಸುವವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೈಮಗ್ಗ ಮತ್ತು ಕರಕುಶಲ ವೃತ್ತಿಯಲ್ಲಿ ಏರ್ಪಟ್ಟಿರುವ ಮಹಿಳೆಯರಿಗೆ ಎರಡು ಲಕ್ಷ ರೂ. ತನಕ ಸಾಲ ಮಂಜೂರು ಮಾಡಲಾಗುವುದು. ಕೇವಲ ಶೇ. 6 ಬಡ್ಡಿ ದರದಲ್ಲಿ ಸಾಲವನ್ನು ಹಂತಹಂತವಾಗಿ ನೀಡಲಾಗುವುದು. ಶಾಲಾ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗೆ ಅನುಗುಣವಾಗಿ “ಕ್ರಾಫ್ಟ್‌’ ಸ್ಕೂಲ್‌ಗ‌ಳನ್ನು ಆರಂಭಿಸಲಾಗುವುದು. ಈಗಾಗಲೇ ಶಾಲಾ ವಿದ್ಯಾರ್ಥಿಗಳಿಗೆ “ವೃತ್ತಿ ಪರಿಚಯ’ ಸ್ಪರ್ಧೆಗಳು ರಾಜ್ಯ ಮಟ್ಟದಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕ್ರಾಫ್ಟ್‌ ಸ್ಕೂಲ್‌ ತೆರೆಯಲು ಹೆಚ್ಚಿನ ಸಮಸ್ಯೆಯಾಗದು. ವಿದ್ಯಾರ್ಥಿಗಳು ಈಗಾಗಲೇ ವೃತ್ತಿ ಪರಿಚಯದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಇಂತಹ ವಿದ್ಯಾರ್ಥಿಗಳಿಗಾಗಿ ಪ್ರೋತ್ಸಾಹ ನೀಡುವ ಉದ್ದೇಶ ಹಾಗೂ ಕ್ರಾಫ್ಟ್‌ಗಳಲ್ಲಿ ತರಬೇತಿ ನೀಡುವ ಮೂಲಕ ಸೊÌàದ್ಯೋಗ ಸೃಷ್ಟಿಸಲು ಸಾಧ್ಯವಾಗುವುದು. ಇದಕ್ಕಾಗಿ 2.5 ಕೋಟಿ ರೂ. ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದೂ ನೀಡಿದ ಭರವಸೆ ಕಡತಕ್ಕೇ ಸೀಮಿತಗೊಂಡಿದೆ.

ವೃತ್ತಿ ಪರಿಚಯ ಮೇಳಗಳಲ್ಲಿ ತಯಾರಿಸುವ ವಸ್ತುಗಳನ್ನು ಮಾರಾಟ ಮಾಡಲು ಎಕ್ಸಿಬಿಶನ್‌ (ಪ್ರದರ್ಶನ)ಗಳನ್ನು ಏರ್ಪಡಿಸಲಾಗುವುದು. ಅಲ್ಲದೆ ಶೋ ರೂಂಗಳಲ್ಲಿ ಇಂತಹ ಉತ್ಪನ್ನಗಳನ್ನು ಪ್ರದರ್ಶಿಸಲಾಗುವುದು. ಈ ವಲಯದಲ್ಲಿ ಕಾರ್ಯಚರಿಸುತ್ತಿರುವವರಿಗೆ ಕ್ಷೇಮ ಯೋಜನೆಗಳನ್ನು ಜಾರಿಗೊಳಿಸಲಾ ಗುವುದು. 100 ರೂ. ಸದಸ್ಯತ್ವ ಪಾವತಿಸಿದರೆ 30 ಸಾವಿರ ರೂ. ಸವಲತ್ತು ಲಭಿಸುವ ರೀತಿಯಲ್ಲಿ ಯೋಜನೆಯನ್ನು ಆವಿಷ್ಕರಿಸಲಾಗುವುದು.

Advertisement

ಕೇರಳದ ಕರಕುಶಲ ವಸ್ತುಗಳಿಗೆ ವಿದೇಶದಲ್ಲಿ ಉತ್ತಮ ಬೇಡಿಕೆಯಿದೆ. ಆದರೆ ವಿದೇಶಕ್ಕೆ ರಫ್ತು ಮಾಡುವ ವಿಷಯದಲ್ಲಿ ಕೇರಳ ಸಾಕಷ್ಟು ಹಿಂದಿದೆ. ಇದನ್ನು ಗಮನಿಸಿ ಕೇರಳದ ಕರಕುಶಲ ಮತ್ತು ಕೈಮಗ್ಗ ಮಸ್ತುಗಳನ್ನು ವಿದೇಶಕ್ಕೆ ರಫ್ತು ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಎಂ.ಸಿ. ಖಮರುದ್ದೀನ್‌ ಹೇಳಿದ್ದರೂ, ಇದ್ಯಾವುದೂ ಈಡೇರಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next