Advertisement
ಗರಡಿಮನೆಯ ನಿವಾಸಿ ಪ್ರೀತೇಶ್ (24) ಹಾಗೂ ಆತನ ಆತ್ತೆಯ ಮಗ ನವೀನ್ ಪೂಜಾರಿ (28) ಮೃತಪಟ್ಟವರು. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರೀತೇಶ್ ಉಡುಪಿಯ ಹೊಟೇಲ್‌ನಲ್ಲಿ ರಿಸೆಪ್ಶನಿಸ್ಟ್ ಹಾಗೂ ನವೀನ್ ಪೂಜಾರಿ ಫ್ಯಾಕ್ಟರಿಯೊಂದರ ಅಕೌಂಟ್ಸ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಒಂದೇ ಮನೆಯಲ್ಲಿರುವ ಇವರು ಸಂಬಂಧಿಗಿಂತ ಹೆಚ್ಚಾ ಗಿ ಗೆಳೆಯರಂತಿದ್ದರು. ಪ್ರತಿದಿನ ಒಟ್ಟಿಗೆ ಊಟ, ಒಂದೇ ಕೋಣೆಯಲ್ಲಿ ನಿದ್ರೆ ಮಾಡುತ್ತಿದ್ದರು. ಜೂ. 15ರಂದು ರಾತ್ರಿಯೂ ಒಟ್ಟಿಗೆ ಊಟ ಮುಗಿಸಿ ಮಲಗಲೆಂದು ಕೋಣೆಗೆ ತೆರಳಿದ್ದು, ಸ್ವಲ್ಪ ಹೊತ್ತಿನಲ್ಲೇ ಅಲ್ಲಿಂದ ಹೊರ ಬಂದಿದ್ದಾರೆ. ತತ್‌ಕ್ಷಣ ಕುಸಿದು ಬಿದ್ದ ಅವರನ್ನು ಮನೆಯವರು ಆಸ್ಪತ್ರೆಗೆ ಕೊಂಡೊ ಯ್ದರೂ ಜೀವ ಉಳಿಸಲಾಗಲಿಲ್ಲ. ಸ್ಥಳದಲ್ಲಿ ಆಲ್ಕೋಹಾಲ್ ಬಾಟಲ್ ಪತ್ತೆಯಾಗಿದೆ. ರಾತ್ರಿ ಊಟ ಮುಗಿಸಿ ಮಲಗುವ ಹೊತ್ತಿನಲ್ಲಿ ಆಲ್ಕೋಹಾಲ್‌ಗೆ ವಿಷ ಬೆರೆಸಿ ಸೇವಿಸಿರಬಹುದು. ಆದರೆ ನವೀನ್ ಪೂಜಾರಿ ಎಂದೂ ಆಲ್ಕೋಹಾಲ್ ಸೇವಿಸುತ್ತಿರಲಿಲ್ಲ ಎಂದು ಮನೆಯವರು ತಿಳಿಸಿದ್ದಾರೆ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
ಉಡುಪಿ: ಮಣಿಪಾಲದ ಸ್ಕೆಚರ್ ಸ್ಟೋರ್‌ನ ಮ್ಯಾನೇಜರ್ ಕಂಪೆನಿಯ ಸ್ವೆ„ಪ್ ಮೆಷಿನ್ ಜತೆಗೆ ಇನ್ನೊಂದು ಮೆಷಿನ್ ಬಳಸಿ ಗ್ರಾಹಕರು ಮತ್ತು ಕಂಪೆನಿಗೆ ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
Advertisement
ಇಲ್ಲಿ 2018ರ ಜೂ.9ರಿಂದ 2018ರ ಜು.26ರ ವರೆಗೆ ಮ್ಯಾನೇಜರ್ ಆಗಿದ್ದ ಕಾರ್ತಿಕ್, ಗ್ರಾಹಕರಿಂದ ಮೊದಲು ಬೇರೆ ಮೆಷಿನ್‌ನಲ್ಲಿ ಸ್ವೆ„ಪ್ ಮಾಡಿಸುತ್ತಾನೆ. ಬಳಿಕ ಅದು ಸರಿಯಿಲ್ಲ ಎಂದು ಹೇಳಿ ಕಂಪೆನಿಯ ಮೆಷಿನ್‌ನಲ್ಲಿ ಸ್ವೆ„ಪ್ ಮಾಡಿಸಿ ಬಿಲ್ ನೀಡುತ್ತಿದ್ದ.
ತನ್ನ ಮೆಷಿನ್‌ನಲ್ಲಿ ಶೇಖರಣೆಯಾದ ಗ್ರಾಹಕರ ಎಟಿಎಂ ಕಾರ್ಡ್, ಪಿನ್ ನಂಬರ್ ವಿವರಗಳನ್ನು ಐಸಿಕ್ಯು ಎಂಬ ಸಾಫ್ಟ್ವೇರ್‌ನಲ್ಲಿ ಡ್ನೂಡ್ ಎಂಬ ವ್ಯಕ್ತಿಗೆ ಕಳುಹಿಸಿ ಆನ್‌ಲೈನ್ ಮೂಲಕ ಹಣ ವಿದ್‌ಡ್ರಾ ಮಾಡುತ್ತಿದ್ದ. ಕಂಪೆನಿಗೂ 83,249 ರೂ. ನಷ್ಟ ಉಂಟು ಮಾಡಿ ದ್ದಾನೆ. ಕಿರಣ್ ಎಂಬಾತ ಮೆಷಿನ್ ಅನ್ನು ಸ್ಥಳಾಂತರಿಸಿದ್ದಾನೆ ಎಂದು ಪೊಲೀಸ್ ದೂರು ನೀಡಲಾಗಿದೆ.