Advertisement

ವಿದ್ಯಾರ್ಥಿಗಳಿಂದ ಡಿಜಿಟಲ್‌ ಪರಿಹಾರ ಯತ್ನ

01:04 PM Apr 02, 2017 | Harsha Rao |

ಉಡುಪಿ: ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ನಿರ್ವಹಿಸುವ 36 ಗಂಟೆಗಳ ದಿನಪೂರ್ತಿ ಕಾರ್ಯಕ್ರಮ ಸ್ಮಾರ್ಟ್‌ ಇಂಡಿಯ ಹ್ಯಾಕಥಾನ್‌ ಮಣಿಪಾಲದ ಎಂಐಟಿಯಲ್ಲಿ ಶನಿವಾರ ಬೆಳಗ್ಗೆ 8.30ಕ್ಕೆ ಆರಂಭಗೊಂಡಿದ್ದು ರವಿವಾರ ರಾತ್ರಿ 8.30ರ ವರೆಗೆ ನಡೆಯಲಿದೆ. ಜಗತ್ತಿನ ಅತಿ ದೊಡ್ಡ ಡಿಜಿಟಲ್‌ ಉತ್ಪನ್ನ ಅಭಿವೃದ್ಧಿ ಹ್ಯಾಕಥಾನ್‌ ಇದು ಎಂದು ಬಣ್ಣಿಸಲಾಗಿದೆ.

Advertisement

ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ 598 ಡಿಜಿಟಲ್‌ ಸಮಸ್ಯೆಗಳಿದ್ದು ಅವುಗಳಿಗೆ ಪರಿಹಾರ ಸೂಚಿಸಲು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ವಿದ್ಯಾರ್ಥಿಗಳು ರೂಪಿಸಿದ ಪರಿಹಾರವನ್ನು ಎಐಸಿಟಿಇ ರಚಿಸಿದ ಸಮಿತಿ ಪರಿಶೀಲಿಸಿ ಅದರಲ್ಲಿ ಆಯ್ಕೆ ಮಾಡಿದ ತಂಡಗಳಿಗೆ ಹ್ಯಾಕಥಾನ್‌ ಕಾರ್ಯಕ್ರಮ ಆಯೋಜಿಸಲಾಗಿದೆ.

ಮಣಿಪಾಲದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದ ಒಟ್ಟು 42 ತಂಡಗಳು ಕಾರ್ಯಾಚರಿಸುತ್ತಿವೆ. ಒಂದು ತಂಡದಲ್ಲಿ ಆರು ವಿದ್ಯಾರ್ಥಿ ಗಳು, ಇಬ್ಬರು ಮಾರ್ಗದರ್ಶಕರು ಇದ್ದಾರೆ. ಮಣಿಪಾಲಕ್ಕೆ ವಿವಿಧ ಕಾಲೇಜುಗಳ ತಂಡಗಳು ಬಂದರೆ ಮಣಿಪಾಲ ಎಂಐಟಿಯ ಎರಡು ತಂಡಗಳು ಉದಯಪುರ ಮತ್ತು ಕೊಚ್ಚಿ ನೋಡಲ್‌ ಕೇಂದ್ರಕ್ಕೆ ಸ್ಪರ್ಧೆಗೆ ತೆರಳಿವೆ.

ನಗದು ಬಹುಮಾನ
ಕಂಪ್ಯೂಟರ್‌ ಸೈನ್ಸ್‌, ಇ ಆ್ಯಂಡ್‌ ಸಿ ಮೊದಲಾದ ವಿಭಾಗಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಮೊದಲ ಮೂರು ಸ್ಥಾನ ಗಳಿಸಿದ ತಂಡಗಳಿಗೆ 1 ಲ.ರೂ., 75,000 ರೂ., 50,000 ರೂ. ನಗದು ಬಹುಮಾನ ನೀಡಲಾಗುವುದು.
ಮಣಿಪಾಲದಲ್ಲಿ ವಿ.ವಿ. ಧನಸಹಾಯ ಆಯೋಗದ (ಯುಜಿಸಿ) ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ. ಯುಜಿಸಿ ಅನುದಾನ ಮಾಹಿತಿ ಕುರಿತಂತೆ ತನ್ನ ತಂಡ ಪರಿಹಾರ ರೂಪಿಸುತ್ತಿದೆ ಎಂದು ಹಿಮಾಚಲಧಿಪ್ರದೇಶದಿಂದ ಬಂದ ವಿದ್ಯಾರ್ಥಿ ಮಣಿಂದರ್‌ ಸುದ್ದಿಗಾರರಿಗೆ ತಿಳಿಸಿದರು.

ಉಡುಪಿ ಜಿಲ್ಲೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಥಳೀಯ ಎಂಜಿನಿಯರಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳನ್ನು ಒಳಗೊಂಡ ಹ್ಯಾಕಥಾನ್‌ ನಡೆಸಬೇಕೆಂಬ ಇರಾದೆ ಇದೆ ಎಂದು ಕಾರ್ಯಕ್ರಮ ಉದ್ಘಾಧಿಟಿಸಿದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಹೇಳಿದರು.

Advertisement

ಮಣಿಪಾಲ ವಿ.ವಿ. ಕುಲಸಚಿವ ಡಾ| ನಾರಾಯಣ ಸಭಾಹಿತ್‌, ಸಹಕುಲಪತಿ, ಎಂಐಟಿ ನಿರ್ದೇಶಕ ಡಾ| ಗೋಪಾಲಕೃಷ್ಣ ಪ್ರಭು, ಯುಜಿಸಿ ಅಧಿಕಾರಿ ಡಾ| ಎನ್‌. ಗೋಪುಕುಮಾರ್‌ ಉಪಸ್ಥಿತರಿದ್ದರು.

ನೋಡಲ್‌ ಕೇಂದ್ರ: ಎಂಐಟಿಗೆ ಹೆಮ್ಮೆ
ದೇಶದಲ್ಲಿ 26 ಎಂಜಿನಿಯರಿಂಗ್‌ ಕಾಲೇಜುಗಳನ್ನು ನೋಡಲ್‌ ಕೇಂದ್ರಗಳಾಗಿ ರೂಪಿಸಲಾಗಿದೆ. ಇದರಲ್ಲಿ ರಾಜ್ಯದಲ್ಲಿ ಮೂರು ಕಾಲೇಜುಗಳಿದ್ದು ಮಣಿಪಾಲ ಎಂಐಟಿಯೂ ಒಂದು. “ವಜ್ರಧಿಮಹೋತ್ಸವ ಆಚರಿಸುಧಿತ್ತಿರುವ ಎಂಐಟಿಗೆ ಇದೊಂದು ಹೆಮ್ಮೆ’ ಎಂದು ಕಾರ್ಯಕ್ರಮದ ಸಂಘಟಕ, ವಿ.ವಿ. ಉಪಕುಲಸಚಿವ (ತಾಂತ್ರಿಕ ಶಿಕ್ಷಣ) ಡಾ| ಪ್ರೀತಮ್‌ ಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next