Advertisement
ಒಂದು ವೇಳೆ ಗ್ರಾಪಂಗಳಲ್ಲಿ ನಾಯಿಗಳನ್ನು ಕೊಲ್ಲುವುದು ಅಥವಾ ಅವುಗಳ ಸಾಮೂಹಿಕ ಹತ್ಯೆ ನಡೆಸಿದ್ದಲ್ಲಿ ದಂಡ ವಿಧಿಸುವುದರ ಜತೆಗೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
ಸೂಚಿಸಿದೆ. ಕಾನೂನು: ರಾಜ್ಯದ ಕೆಲವು ಗ್ರಾಪಂಗಳಲ್ಲಿ ನಾಯಿಗಳನ್ನು ಕೊಲ್ಲಲು ನಿರ್ಣಯಿಸಿದ್ದು, ಈ ಸಂಬಂಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಆದರೆ, ವಿಶ್ವ ಆರೋಗ್ಯ ಸಂಘಟನೆಯಿಂದ ಪ್ರಾಣಿಗಳ ಜನನ ನಿಯಂತ್ರಣ ಕಾರ್ಯಕ್ರಮ ರೀತಿ ಕೇಂದ್ರ ಸರ್ಕಾರದಿಂದ ರೂಪಿಸಲಾದ “ದಿ ಅನಿಮಲ್ ಬರ್ತ್ ಕಂಟ್ರೋಲ್ (ಡಾಗ್ಸ್) ರೂಲ್ಸ್ -2001ರ ಪ್ರಕಾರ ಪ್ರಾಣಿಗಳನ್ನು ಕೊಲ್ಲುವ ಬದಲು ಬಂಜೆ ಮಾಡಿ ಸಂತತಿ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಅದೇ ರೀತಿ “ದಿ ಪ್ರಿವೆನÒನ್ ಆಫ್ ಕ್ರೂಯೆಲ್ಟಿ ಟು ಅನಿಮಲ್ಸ್ ಆ್ಯಕ್ಟ್-160 ಪ್ರಕಾರ ಪ್ರಾಣಿಗಳನ್ನು ಕೊಲ್ಲವವರಿಗೆ ದಂಡ ವಿಧಿಸುವ ಅವಕಾಶವಿದೆ.
Related Articles
Advertisement
ಈ ಬಗ್ಗೆ ಪ್ರಾಣಿ ದಯಾ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ಇತ್ತೀಚೆಗೆ ರಾಜ್ಯದ ಕೆಲವು ಗ್ರಾಪಂಗಳಲ್ಲಿ ಇಂತದ್ದೇ ನಿರ್ಣಯ ಕೈಗೊಂಡ ಪರಿಣಾಮ ಗ್ರಾಮೀಣಾಭಿವೃದ್ಧಿ ಇಲಾಖೆ ಈ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
12 ಲಕ್ಷ ನಾಯಿಗಳು: ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ಮಾದರಿ ಪ್ರತಿ ಐದು ವರ್ಷಕ್ಕೊಮ್ಮೆ ಜಾನುವಾರು ಗಣತಿ ನಡೆಯುತ್ತದೆ. ಅದರಂತೆ 2012ರ ಗಣತಿ ಪ್ರಕಾರ ರಾಜ್ಯದಲ್ಲಿ 9.41ಲಕ್ಷ ಗಂಡು ಮತ್ತು 3.33 ಲಕ್ಷ ಹೆಣ್ಣು ಸೇರಿ ಒಟ್ಟು 12.75 ಲಕ್ಷ ನಾಯಿಗಳಿವೆ. 2007ರ ಸಂಖ್ಯೆಗೆ ಹೊಲಿಸಿದರೆ ನಾಯಿಗಳ ಸಂಖ್ಯೆ ಶೇ.36 ಕಡಿಮೆ ಆಗಿದೆ. ಒಟ್ಟು ಜಾನುವಾರು ಸಂತತಿಯಲ್ಲಿ (ಲೈವ್‌ಸ್ಟಾಕ್) ನಾಯಿಗಳ ಪ್ರಮಾಣ ಕೇವಲ ಶೇ.4.40 ಮಾತ್ರ. 2017ರಲ್ಲಿ ಹೊಸ ಸಮೀಕ್ಷೆ ನಡೆಯಬೇಕಿತ್ತು. ಅದು ಈ ವರ್ಷ ನಡೆಯಬಹುದುಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅತಿ ಹೆಚ್ಚು ನಾಯಿಗಳು ಇರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. 2012ರ ಜಾನುವಾರು ಗಣತಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ
1.17 ಲಕ್ಷ ಗಂಡು ಮತ್ತು 28 ಸಾವಿರ ಹೆಣ್ಣು ಸೇರಿ ಒಟ್ಟು 1.46 ಲಕ್ಷ ನಾಯಿಗಳಿವೆ. ನಂತರದ ಸ್ಥಾನದಲ್ಲಿ ಬೆಂಗಳೂರು ನಗರ ಜಿಲ್ಲೆ ಇದ್ದು, ಇಲ್ಲಿ 9 ಲಕ್ಷ ಗಂಡು ಮತ್ತು 36 ಸಾವಿರ ಹೆಣ್ಣು ಸೇರಿ 1.27 ಲಕ್ಷ ನಾಯಿಗಳು ಇವೆ. ವಿಶ್ವ ಆರೋಗ್ಯ ಸಂಘಟನೆ ಮಾರ್ಗಸೂಚಿ ಮತ್ತು ಕೇಂದ್ರ ಸರ್ಕಾರದ ಕಾಯ್ದೆ ಪ್ರಕಾರ ನಾಯಿಗಳನ್ನು ಕೊಲ್ಲುವಂತಿಲ್ಲ. ಆದರೆ, ಕೆಲವು ಗ್ರಾಪಂಗಳು ಈ ರೀತಿಯ ನಿರ್ಣಯ ಕೈಗೊಂಡಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಗ್ರಾಪಂಗಳಿಗೆ ಅನ್ವಯವಾಗುವಂತೆ ಸುತ್ತೋಲೆ ಹೊರಡಿಸಲಾಗಿದೆ.
– ಎಂ.ಕೆ. ಕೆಂಪೇಗೌಡ,
ಪಂಚಾಯತ್‌ರಾಜ್ ಇಲಾಖೆ ನಿರ್ದೇಶಕ. – ರಫೀಕ್ ಆಹ್ಮದ್