Advertisement
ಹುಡುಗಿ ,ನಿನ್ನಿಂದ ತುಂಬ ದೂರ ಬಂದಿದ್ದೇನೆ. ಇಬ್ಬರ ನಡುವಿನ ಬಾಂಧವ್ಯದ ಸೇತುವೆ ಕುಸಿದು ಬಿದ್ದಿದೆ. ನಿತ್ತರಿಸಿಕೊಳ್ಳಲಾಗದ ದುಃಖದಿಂದ ತತ್ತರಿಸಿ ಹೋಗಿದ್ದೇನೆ. ಎತ್ತ ನೋಡಿದರೂ ಕಾಣುವುದು ನಿನ್ನದೇ ಮುಖ. ನಾವಿಬ್ಬರೂ ಸಂಭ್ರಮದಲ್ಲಿ ಸುತ್ತಾಡಿದ್ದ, ಖುಷಿಯಲ್ಲಿ ಓಡಾಡಿದ್ದ, ಸಡಗರದಲ್ಲಿ ಹೆಜ್ಜೆಗೆ ಹೆಜ್ಜೆ ಇಟ್ಟಿದ್ದ,ಪ್ರಶಾಂತವಾಗಿ ಹರಿವ ನದಿಗೆ ಅಡ್ಡವಾಗಿ ಕಟ್ಟಿದ ಸೇತುವೆಯ ಮೇಲೆ, ನಿನ್ನೆದುರು ಮೊಣಕಾಲೂರಿ ನಿಂತು ನನ್ನೆದೆಯಾಳದ ಒಲವನ್ನೆÇÉಾ ನಿವೇದಿಸಿದ್ದ ನಮ್ಮಿಬ್ಬರ ಇಷ್ಟದ ಜಾಗ. ಎಲ್ಲವನ್ನೂ ತೊರೆದು ಬಂದಿದ್ದೇನೆ. ಆದರೆ ಈ ನೆರಳಿನಂಥ ನೆನಪುಗಳನ್ನು ಏನು ಮಾಡೋದು ಹೇಳು? ಸದಾ ಬೆನ್ನತ್ತಿ ಕಾಡುವ, ಅರೆ ಕ್ಷಣವೂ ಬಿಡದೆ ಉಸಿರಿನಂತೆ ಬೆರೆಯುವ, ಈ ನೆನಪುಗಳಿಂದ ಹೇಗೆ ತಪ್ಪಿಸಿಕೊಳ್ಳಲಿ ಹೇಳು? ದೂರವೆನ್ನುವುದು ಎಂಥ ಸುಳ್ಳು! ಎದೆಯೊಳಗೇ
ಇದು ಕೊನೆಯ ಪತ್ರ. ನನ್ನ ಎದೆಯಾಳದ ನೋವನ್ನು ಯಾವ ಅಕ್ಷರಗಳಿಂದಲೂ ಭರಿಸಲಾಗದು. ಆದರೂ ಬರೆಯುತ್ತಿದ್ದೇನೆ. ನಿನ್ನ ನಿರಾಕರಣೆಗೆ ಕಾರಣ ಕೇಳುವುದಿಲ್ಲ. ನಿನ್ನೊಳಗೆ ಉದಾಸೀನ ಹುಟ್ಟಿತಾದರೂ ಯಾಕೆಂದು ಪ್ರಶ್ನೆ ಹಾಕುವುದಿಲ್ಲ. ಮತ್ತೆ ನನ್ನ ಬದುಕಿನೊಳಕ್ಕೆ ಬಾ ಎಂದು ದಮ್ಮಯ್ಯ ಗುಡ್ಡೆ ಹಾಕುವುದಿಲ್ಲ. ನೀ ಬರುವ ಹಾದಿಯಲಿ ಶತಪಥ ಹಾಕಿ ಕಾಯುತ್ತಾ ನಿಲ್ಲುವುದೂ ಇಲ್ಲ. ನಿನ್ನ ಬದುಕಿನ ಹೊಸ ಬೆಳಕಿನ ಹಾದಿಗೆ ನನ್ನ ಕರಿ ನೆರಳು ತಾಕುವುದಿಲ್ಲ. ಆದರೆ ಹೇಳು ಹುಡುಗೀ, ನಮ್ಮ ಪ್ರೀತಿ ಸುಳ್ಳಾ? ನಿನ್ನ ಮೊದಲ ನೋಟದ ಹಚ್ಚಿಟ್ಟ ಹಣತೆಯಂತಾ ಬೆಳಕಿನಲ್ಲಿ ಕಪಟವಿತ್ತಾ? ಮುಂಜಾನೆ ಮಿಂದ ಹೂ ಎಸಳಿನಂಥಾ ನಿನ್ನ ಪರಿಶುದ್ಧ ಮಾತುಗಳಲ್ಲಿ ಮೋಸವಿತ್ತಾ? ಸಂತಸದ ಸಂತೆಯೇ ನೆರೆದಂತಿದ್ದ ನಿನ್ನ ಕೋಮಲ ಮುಖಭಾವ ಮುಖವಾಡ ಧರಿಸಿತ್ತಾ? ಎಲ್ಲವೂ ಗಾಯಕ್ಕೆ ಮತ್ತುವ ನೊಣಗಳಂತೆ ಮುತ್ತುತ್ತಿವೆ. ನನ್ನಂಥ ನಿಷ್ಪಾಪಿ ಹುಡುಗನ ಬದುಕನ್ನು ಯಾಕಿಷ್ಟು ದಾರುಣಗೊಳಿಸಿದೆ? ನನ್ನ ಈ ಪ್ರಶ್ನೆಗಳಿಗೆ ಯಾವತ್ತಾದರೂ ನಿನ್ನಿಂದ ಉತ್ತರಿಸಲು ಸಾಧ್ಯವಾ ಹುಡುಗಿ? ನೆನಪಿರಲಿ: ನನ್ನ ನಿಟ್ಟುಸಿರು ಯಾವತ್ತೂ ನಿನ್ನನ್ನು ಶಪಿಸುವುದಿಲ್ಲ. ಯಾಕೆಂದರೆ ಪ್ರೀತಿಯ ಹೊರತು ಮತ್ತೂಂದು ಭಾವ ನನ್ನೆದೆಯೊಳಗಿಲ್ಲ.
Related Articles
Advertisement