Advertisement
“”ಸಾರ್, ಯಾವು… ಸರಿಯಾಗಿ ಕೇಳಸ್ತಿಲ್ಲಾ. ಸಾರ್ ಯಾವುದೋ. ಇಲ್ಲಾ ಏನೂ ಸರಿಯಾಗಿ ಕೇಳಲ್ಲಾ, ನಾಳೆ ಸಿಗ್ನಲ್ ಸರಿಯಾಗಿ ಸಿಕ್ಕರೆ ಫೋನ್ ಮಾಡ್ತೀನಿ” ಅಂತ ಹೇಳಿ ನನ್ನ ಸಹೋದ್ಯೋಗಿಯೊಡನೆ ದೂರವಾಣಿ ಸಂಭಾಷಣೆ ಮುಗಿಸಿದೆ. ಕಾವೇರಿ ವನ್ಯಜೀವಿಧಾಮದ ಮಧ್ಯಭಾಗದಲ್ಲಿರುವ ಅರಣ್ಯ ಇಲಾಖೆಯ ಉಗನಿಯ ಕಳ್ಳಬೇಟೆ ಶಿಬಿರದಲ್ಲಿ ನಾನು ಉಳಿದು ಕೊಂಡಿ¨ªೆ. ಅದೊಂದು ಸುಂದರ ತಾಣ. ಕಾವೇರಿ ನದಿ ತಟದಲ್ಲಿ, ತಮಿಳುನಾಡು ಗಡಿಯಲ್ಲಿರುವ ಈ ಕಳ್ಳಬೇಟೆ ಶಿಬಿರದಲ್ಲಿ
ವೆಲ್ಲ ಕಪ್ಪು ಬಣ್ಣ, ಬೆನ್ನು ಬೂದು ಬಣ್ಣ, ಸಣ್ಣ ನಾಯಿಯ ಹಾಗೆ ಚೂಪು ಮೂತಿ, ಹರಿತ ಹಲ್ಲುಗಳು, ಮೋಟು ಬಾಲ ಮತ್ತು ಅಗಿಯಲು ಸಹಕಾರಿಯಾದ ಉದ್ದುದ್ದದ ಉಗುರುಗಳು. ನೋಡಿದೊಡನೆ ತಿಳಿಯಿತು ಇದು ತರಕರಡಿ ಎಂದು.
Related Articles
Advertisement
ಇದಾದ ಕೆಲ ತಿಂಗಳುಗಳ ನಂತರ ಚಾಮರಾಜನಗರದ ಜಿಲ್ಲಾ ಪೊಲೀಸ್ ಅಧೀಕ್ಷಕರೊಂದಿಗೆ ವನ್ಯಜೀವಿ ಸಂರಕ್ಷಣೆಯ ಬಗ್ಗೆ ಕೆಲ ವಿಚಾರಗಳನ್ನು ಚರ್ಚಿಸಲು ಹೋಗಿದ್ದೆ. ಯುವ ಅಧೀಕ್ಷಕರು ಬಹು ಆಸಕ್ತಿಯಿಂದ “”ಸ್ವಲ್ಪ ತಡೆಯಿರಿ. ಇತರ ಹಿರಿಯ ಅಧಿಕಾರಿಗಳನ್ನು ಸಹ ಕರೆಯುತ್ತೇನೆ. ಆಮೇಲೆ ವಿಚಾರ ಚರ್ಚಿಸುವ” ಎಂದರು. ಇತರರು ಬಂದ ನಂತರ ಜಿಲ್ಲೆಯ ಕಾಡಿನ ಮಹತ್ವ, ವಿಶೇಷವಾದ ವನ್ಯಜೀವಿಗಳ ಇರುವಿಕೆಯ ದಾಖಲೆಗಳು, ವನ್ಯಜೀವಿ ಸಂರಕ್ಷಣೆಯಲ್ಲಿ ಪೊಲೀಸ್ ಅಧಿಕಾರಿಗಳ ಪಾತ್ರ ಎಲ್ಲವನ್ನೂ ವಿಚಾರ ವಿನಿಮಯ ಮಾಡಿಕೊಂಡೆವು.
ಭೇಟಿ ಮುಗಿಸಿ ಅಧೀಕ್ಷಕರ ಕಛೇರಿಯಿಂದ ಆಚೆ ಬಂದರೆ ಬಾಗಿಲಲ್ಲಿ ಕಾಯುತ್ತ ನಿಂತಿದ್ದ ಪೇದೆಯೊಬ್ಬ “”ಸಾರ್ ಎ.ಎಸ್.ಪಿ. ಸಾಹೇಬ್ರು ಕರೀತಾವ್ರೆ ಬಬೇìಕಂತೆ” ಎಂದು ಮನವಿ ಮಾಡಿದ. ಒಳಗೆ ಹೋದರೆ “”ಬನ್ನಿ ಗುಬ್ಬಿಯವರೇ. ನೀವು ಸಾಯೇಬ್ರಿಗೆ ತೋರಿಸಿದ ಚಿತ್ರಗಳನ್ನು ನೋಡಿದೆ. ನಮ್ಮೂರು ಕನಕಪುರ ತಾಲೂಕಿನ ದೊಡ್ಡಾಲಳ್ಳಿ ಹತ್ರ. ನಮ್ ತಾತ ಈ ಪ್ರಾಣಿ ವಿಷ್ಯ ಹೇಳವ್ರು, ಇದಕ್ಕೆ ಜೇನ್ ಹೀರ್ಕ ಅಂತಾರೆ” ಎಂದರು ಎಎಸ್‌ಪಿ ಮುತ್ತುರಾಜ್. ಅವರು ಹೇಳಿದ ಮಾತು ನನ್ನನ್ನು ಚಕಿತಗೊಳಿಸಿತು. ಎಂತಹ ಸುಂದರ ಹೆಸರು! ತರಕರಡಿ ರೈತರು ಸಾಕುವ ಜೇನು ಗೂಡುಗಳ ಮೇಲೆ ದಾಳಿಮಾಡುವುದು ತಿಳಿದ ವಿಚಾರ. ಆದರೆ ಭಾರತದಲ್ಲಿ ಈ ವಿಚಾರ ಪ್ರಚಲಿತವಲ್ಲ. ಆದರೂ ಅದಕ್ಕೆ ಬಹು ಉಚಿತವಾದ ಹೆಸರು ಮುತ್ತುರಾಜುರವರ ತಾತನವರಿಗೆ ತಿಳಿದಿತ್ತು. ವನ್ಯಜೀವಿಯ ಬಗ್ಗೆ ಕನ್ನಡದಲ್ಲಿ ಹೊಸ ಹೆಸರೊಂದು ತಿಳಿದಿಕೊಂಡದ್ದು ನನಗೆ ಬಹು ಸಂತೋಷವಾಯಿತು.
ತದ ನಂತರ ನಮ್ಮ ಕ್ಯಾಮರಾ ಟ್ರಾಪ್‌ಗ್ಳಲ್ಲಿ ಕಾವೇರಿ ವನ್ಯ ಜೀವಿಧಾಮದ ಪಕ್ಕದ ಮಲೈ ಮಹದೇಶ್ವರ ವನ್ಯಜೀವಿಧಾಮದಲ್ಲಿ ಕೂಡ ಜೇನ್ ಹೀರ್ಕ ದಾಖಲಾಯಿತು. ಕಾವೇರಿಗೆ ಉತ್ತರ ದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತು ಮಲೈ ಮಹದೇಶ್ವರ ವನ್ಯಜೀವಿಧಾಮದ ದಕ್ಷಿಣದಲ್ಲಿ, ತಮಿಳು ನಾಡಿನಲ್ಲಿರುವ ಸತ್ಯಮಂಗಲ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಕೂಡ ಅರಣ್ಯ ಇಲಾಖೆಯ ಕ್ಯಾಮರಾ ಟ್ರಾಪ್‌ಗ್ಳಲ್ಲಿ ಈ ಪ್ರಾಣಿ ದಾಖಲಾಗಿದೆ. ನಿಗೂಢತೆಯೆಂದರೆ ಮಲೈ ಮಹದೇಶ್ವರ ವನ್ಯಜೀವಿಧಾಮಕ್ಕೆ ಹೊಂದಿಕೊಂಡಿರುವ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಜೇನ್ ಹೀರ್ಕ ದಾಖಲಾಗಿಲ್ಲ. ಬಿಳಿಗಿರಿರಂಗನಬೆಟ್ಟದ ಕೊಳ್ಳೇಗಾಲ ಮತ್ತು ಯಳಂದೂರು ವಲಯಗಳ ಕೆಲ ಕಾಡುಪ್ರದೇಶಗಳು ಜೇನ್ ಹೀರ್ಕಕ್ಕೆ ಸೂಕ್ತ ವೆನಿಸಿದರೂ ಅದು ಅಲ್ಲಿ ಕಂಡುಬಂದೇ ಇಲ್ಲ. ಇದು ನಿಸರ್ಗದ ನಿಗೂಢಗಳಲ್ಲೊಂದು! ಹೆಚ್ಚಾಗಿ ಒಣ ಪ್ರದೇಶಗಳಲ್ಲಿ ಮಾತ್ರ ಕಂಡುಬರುವ ಜೇನ್ ಹೀರ್ಕ ಆಫ್ರಿಕಾದ ಹಲವಾರು ದೇಶಗಳಲ್ಲದೆ ಪೂರ್ವ ಏಷ್ಯಾ, ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಭಾರತಗಳಲ್ಲಿ ಕಂಡುಬರುತ್ತವೆ. ನಮ್ಮ ದೇಶದಲ್ಲಿ ಗುಜರಾತ್, ರಾಜಸ್ಥಾನ, ಮಹರಾಷ್ಟ್ರ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಛತ್ತೀಸ್‌ಗಢ, ಆಂಧ್ರಪ್ರದೇಶ, ತಮಿಳು ನಾಡು ರಾಜ್ಯಗಳಿಂದ ದಾಖಲಾಗಿದೆ. ತನ್ನ ಗಾತ್ರಕ್ಕಿಂತ ಚಿಕ್ಕದಿರುವ ಎಲ್ಲಾ ಪ್ರಾಣಿಗಳನ್ನು ಜೇನ್ ಹೀರ್ಕ ತಿನ್ನುತ್ತದೆ ಎಂಬ ಹೇಳಿಕೆಯಿದೆ. ಹಾವು, ಸಣ್ಣಪುಟ್ಟ ಪ್ರಾಣಿಪಕ್ಷಿಗಳು, ಹಲ್ಲಿಗಳು, ಚೇಳು, ಇಲಿ, ಗುಗ್ಗೆ ಹುಳ ಹೀಗೆ ಮಾಂಸಾಹಾರದ ಮೇಲೆ ಅವಲಂಬಿತವಾಗಿರುವ ಜೇನ್ ಹೀರ್ಕ ಕೆಲವೊಮ್ಮೆ ಜೇನು ತಿನ್ನುವುದನ್ನು ರೂಢಿಸಿಕೊಂಡಿದೆ ಎನ್ನುವ ಪ್ರತೀತಿಯಿದೆ. ಆದರೆ ಅದು ಬಹುಶಃ ತಿನ್ನುವುದು ಪೌಷ್ಟಿಕವಾದ ಜೇನುಹುಳದ ಮರಿಗಳನ್ನು. ಇದರಿಂದಾಗಿಯೇ ಇದಕ್ಕೆ ಆಂಗ್ಲ ಭಾಷೆಯಲ್ಲಿ ಹನಿ ಬ್ಯಾಡ್ಜರ್ ಎಂಬ ಹೆಸರು ಬಂದಿರುವುದು. ಆಂಗ್ಲದಲ್ಲಿ ಇದಕ್ಕೆ ರಾಟೆಲ್ ಎಂದು ಸಹ ಕರೆಯುತ್ತಾರೆ. ಆದರೆ ತನ್ನ ಗಾತ್ರಕ್ಕಿಂತ ದೊಡ್ಡದಾದ ಕೆಲ ಪ್ರಾಣಿಗಳನ್ನು ಬೇಟೆಯಾಡು ವುದು ಮತ್ತು ಕೆಲವೊಮ್ಮೆ ಇವುಗಳು ಹಣ್ಣುಗಳನ್ನು ತಿನ್ನುವುದನ್ನು ಗಮನಿಸಲಾಗಿದೆ. ಅತೀ ಸೂಕ್ಷ್ಮ ವಾಸನಾಗ್ರಹಣ ಶಕ್ತಿಯಿರುವು ದರಿಂದ ನೆಲದಲ್ಲಿ, ಪೊಟರೆಗಳಲ್ಲಿ ಅಡಗಿರುವ ಹಾವು, ಇಲಿ, ಜೇನುಹುಳ ಮುಂತಾದ ಪ್ರಾಣಿಗಳನ್ನು ತನ್ನ ಚೂಪಾದ, ಉದ್ದವಾದ ಉಗುರುಗಳಿಂದ ಪೊಟರೆ ಬಗಿದು ಪ್ರಾಣಿಯನ್ನು ಆಚೆ ತೆಗೆಯಬಲ್ಲ ಸಾಮರ್ಥ್ಯವಿದೆ. ಆಫ್ರಿಕಾ ಖಂಡದ ನಮೀಬಿಯಾ ಮತ್ತು ಸೌತ್ ಆಫ್ರಿಕಾ ದೇಶ ಗಳಲ್ಲಿ ಇವುಗಳ ಹಲವಾರು ಕುತೂಹಲಕಾರಿ ವಿಡಿಯೋಗಳು ಯುಟ್ಯೂಬ್‌ನಲ್ಲಿ ಕಂಡುಬರುತ್ತವೆ. ಅವುಗಳಲ್ಲಿ ಹೆಚ್ಚಾಗಿ ಜೇನ್ ಹೀರ್ಕಗಳು ವಿಷಪೂರಿತ ಹಾವುಗಳನ್ನು ಸೌತೆ ಕಾಯಿ ತಿನ್ನುವ ಹಾಗೆ ಕಚಕಚನೆ ಭಕ್ಷಿಸುವ ವಿಡಿಯೋಗಳು, ತನಗಿಂತ ಹತ್ತಾರು ಪಟ್ಟು ದೊಡ್ಡದಿರುವ ಸಿಂಹ, ಚಿರತೆ, ಕತ್ತೆಕಿರುಬಗಳನ್ನು ಎದುರಿಸಿ ಓಡಿಸುವ ಚಿತ್ರಗಳು ಹೀಗೆ ಹಲವಾರು ರೋಚಕ ಸನ್ನಿವೇಶಗಳ ತುಣುಕುಗಳಿವೆ. ಆದರೆ ನನಗೆ ಬಹು ಇಷ್ಟವಾದುದು ಸ್ಟೋಫೆಲ್ ಎಂಬ ಜೇನ್ ಹೀರ್ಕದ ಬಗ್ಗೆ ಬಿಬಿಸಿಯ ನಾಲ್ಕು ನಿಮಿಷದ ವಿಡಿಯೋ. ಜೇನ್ ಹೀರ್ಕಗಳು ಎಷ್ಟು ಬದ್ಧಿವಂತ ಪ್ರಾಣಿಗಳೆಂದು ಈ ವಿಡಿಯೋ ಬಹು ಅದ್ಭುತವಾಗಿ ತೋರಿಸಿದೆ. ದುರದೃಷ್ಟವಶಾತ್ ಆಫ್ರಿಕಾದ ಕೆಲ ಭಾಗಗಳಲ್ಲಿ ಇವುಗಳನ್ನು ಪಾರಂಪರಿಕ ವೈದ್ಯಕೀಯ ಚಿಕಿತ್ಸೆಗಳಿಗಾಗಿ ಅಥವಾ ಇದರ ಮಾಂಸಕ್ಕಾಗಿ ಕೊಲ್ಲಲಾಗುತ್ತದೆ. ಇದರೊಡನೆ ಇವುಗಳಿಂದ ಜೇನು ಸಾಕಣೆದಾರರಿಗೆ ತೊಂದರೆಯಾಗುತ್ತದೆಂದು ಪ್ರತೀಕಾರ ದಿಂದ ಕೂಡ ಕೊಲ್ಲಲಾಗುತ್ತದೆ. ಈ ಕಾರಣದಿಂದ ಜೇನ್ ಹೀರ್ಕ ಆಫ್ರಿಕಾ ಖಂಡದ ಹಲವು ದೇಶಗಳಿಂದ ಕಣ್ಮರೆಯಾಗಿದೆ. ಇವುಗಳು ಸಿಗುವ ಪ್ರದೇಶಗಳಲ್ಲಿ ವಿರಳವಾಗಿರುತ್ತವೆಂದು ಮತ್ತು ಇವುಗಳ ನೆಲಹರವು ಬಹು ವಿಸ್ತಾರವಾಗಿರುತ್ತದೆಂದು ವೈಜ್ಞಾನಿಕ ಅಧ್ಯಯನಗಳು ತಿಳಿಸುತ್ತವೆ. ನಮೀಬಿಯಾ ದೇಶದಲ್ಲಿ ಇವುಗಳಿಗೆ ರೇಡಿಯೋ ಕಾಲರ್ ಹಾಕಿದ ಅಧ್ಯಯನದಲ್ಲಿ ಗಂಡು ಜೇನ್ ಹೀರ್ಕವೊಂದು ಸುಮಾರು 500 ಚದರ ಕಿಲೋ ಮೀಟರು ಪ್ರದೇಶದ ನೆಲಹರುವನ್ನು (ಹೋಂ ರೇಂಜ್) ಹೊಂದಿತ್ತು. ಬೆಂಗಳೂರು ಮಹಾನಗರದ ಅರ್ಧದಷ್ಟು ಪ್ರದೇಶ ದಲ್ಲಿ ಕೇವಲ ಒಂದು ಜೇನ್ ಹೀರ್ಕ ವಾಸವಿದ್ದಂತೆ! ಕಾವೇರಿ ಮತ್ತು ಮಲೈ ಮಹದೇಶ್ವರ ವನ್ಯಜೀವಿಧಾಮಗಳಲ್ಲಿ ನಾವು ಕೈಗೊಂಡಿರುವ ನಾಲ್ಕು ವರ್ಷದ ಕ್ಯಾಮರಾ ಟ್ರಾಪ್ ಕೆಲಸದಲ್ಲಿ ಜೇನ್ ಹೀರ್ಕ 179 ಬಾರಿ ದಾಖಲಾದರೂ ದಿನದ ವೇಳೆ ದಾಖಲಾಗಿರುವುದು ಒಂದು ಬಾರಿ ಮಾತ್ರ. ಇದು ಸಂಪೂರ್ಣವಾಗಿ ನಿಶಾಚರಿ ಪ್ರಾಣಿ ಎಂಬುವುದನ್ನು ಇದು ಎತ್ತಿ ತೋರುತ್ತದೆ. ಆದರೆ ಆಫ್ರಿಕಾದಲ್ಲಿ ಇದು ಬೆಳಗಿನ ವೇಳೆ ಸಹ ಸಕ್ರಿಯವಾಗಿರುವುದು ಸಾಮಾನ್ಯ. ಸಾಮಾನ್ಯವಾಗಿ ಒಂಟಿಯಾಗಿ ಓಡಾಡುವ ಜೇನ್ ಹೀರ್ಕ ಕೆಲವೊಮ್ಮೆ ಜೊತೆಯಾಗಿ ನಮ್ಮ ಕ್ಯಾಮರಾ ಟ್ರಾಪ್‌ಗ್ಳಲ್ಲಿ ಕಂಡುಬಂದಿವೆ. ಇವು ಬಹುಶಃ ಗಂಡು ಹೆಣ್ಣು ಜೋಡಿಯಿರ ಬಹುದೆಂದು ನಾವು ಊಹಿಸಿದರೆ ತಪ್ಪಾಗಬಹುದು. ಕೆಲವೊಮ್ಮೆ ತಾಯಿಯನ್ನೇ ಮೀರಿ ಬೆಳೆದ ಗಂಡು ಮರಿ ಇನ್ನೂ ತನ್ನ ಅವ್ವನ ಮೇಲೆ ಅವಲಂಬಿತವಾಗಿ ಜೊತೆಯಾಗಿ ಓಡಾಡು ತ್ತಿರುತ್ತದೆ. ಈ ತರಹದ ಹಲವಾರು ಕುತೂಹಲಕಾರಿ ವಿಚಾರಗಳನ್ನು ಹೊಂದಿರುವ ಜೇನ್ ಹೀರ್ಕವನ್ನು ನಮ್ಮ ಸಮಾಜಕ್ಕೆ ತೋರಿಸಿಕೊಟ್ಟ ಕಾವೇರಿ ವನ್ಯಜೀವಿಧಾಮಕ್ಕೆ ಬಹು ದೊಡ್ಡ ಕೃತಜ್ಞತೆಗಳು. ಈಗ ಜೇನ್ ಹೀರ್ಕ ಕಾವೇರಿ ವನ್ಯಜೀವಿಧಾಮದ ಹೆಮ್ಮೆಯ ಕೂಸಾ ಗಿದೆ, ಮತ್ತು ಇದನ್ನು ಕಾವೇರಿ ವನ್ಯಜೀವಿಧಾಮದ ಲಾಂಛನದ ಭಾಗವಾಗಿ ಕೂಡ ಉಪಯೋಗಿಸಲಾಗುತ್ತಿದೆ. ಸದ್ಯಕ್ಕೆ ಚಾಮರಾಜನಗರ, ರಾಮನಗರ ಮತ್ತು ಮಂಡ್ಯ ಜಿಲ್ಲೆಯ ಚಿಕ್ಕ ಭಾಗದಲ್ಲಿ ಮಾತ್ರ ದಾಖಲಾಗಿರುವ ಜೇನ್ ಹೀರ್ಕ ರಾಜ್ಯದ ಇತರ ಕೆಲ ಒಣ ಜಿಲ್ಲೆಗಳಲ್ಲೂ ಇರುವ ಸಾಧ್ಯತೆಗಳಿವೆ. ನಮ್ಮ ವನ್ಯಜೀವಿ ಕೌತುಕತೆ ಮತ್ತು ವಿಜ್ಞಾನವನ್ನು ಕೇವಲ ಜನಪ್ರಿಯ ವನ್ಯಜೀವಿತಾಣಗಳಾದ ನಾಗರಹೊಳೆ ಬಂಡೀಪುರ ದಂತಹ ಪ್ರದೇಶಗಳಿಗೆ ಮಾತ್ರ ಸೀಮಿತಗೊಳಿಸಿದರೆ ಜೇನ್ ಹೀರ್ಕ ದಂತಹ ಕುತೂಹಲಕಾರಿ ವನ್ಯಜೀವಿಯನ್ನು ದಾಖಲು ಮಾಡಲು ಆಗುತ್ತಲೇ ಇರಲಿಲ್ಲ. ಆದರೆ ಇಂದಿಗೂ ಕೂಡ ನಾನು ಈ ನಿಶಾಚರಿ, ನಿಗೂಢ ಪ್ರಾಣಿಯನ್ನು ಭಾರತದ ಕಾಡುಗಳಲ್ಲಿ ನೋಡಿಯೇ ಇಲ್ಲ (ನೋಡಿರುವ ಎರಡು ಬಾರಿಯೂ ಆಫ್ರಿಕಾದಲ್ಲಿ ಮಾತ್ರ). ಎಂದಾದರೂ ಒಂದು ದಿನ ನೋಡೇ ನೋಡುತ್ತೇನೆಂದು ತವಕಿಸುತ್ತಿದ್ದೇನೆ. ಆ ಸುದಿನ ಬೇಗ ಬರಲೆಂದು ಉದಯವಾಣಿ ವಾಚಕರೆಲ್ಲರೂ ಹರಸಲಿ. ಲೇಖನ ಸಂಬಂಧಿ ವಿಡಿಯೋ ನೋಡಲು ಈ ಲಿಂಕ್ ಟೈಪ್ ಮಾಡಿ: ಚಿಜಿಠಿ.ly/2lಜcಎಖೀ5 ಚಿತ್ರಗಳು: ಸಂಜಯ್ ಗುಬ್ಬಿ/ಎನ್.ಸಿ.ಎಫ್.