Advertisement
ಕರ್ನಾಟಕದ ಒಂದು ಭಾಗವೇ ಆಗಿದ್ದ ಅಚ್ಚಗನ್ನಡ ನೆಲ ಕಾಸರಗೋಡು ಎಂಬ ಮುದ್ದಾದ ಜಿಲ್ಲೆ ಇಂದು ಏಕೀಕರಣದ ವ್ಯವಸ್ಥೆಯ ಪರಿಣಾಮ ಕೇರಳ ರಾಜ್ಯಕ್ಕೆ ಸೇರಿ ಹೋಗಿದೆ. ಆದರೆ ಅಲ್ಲಿ ಇನ್ನೂ ಕನ್ನಡದ ಹೂಗಳು ಅರಳುತ್ತಲೇ ಇವೆ. ಮಲಯಾಳಿ ಮತ್ತು ಕನ್ನಡ ಭಾಷೆಯ ಬಾಂಧವ್ಯ ಕೂಡ ಅಷ್ಟೇ ಸುಮಧುರವಾಗಿವೆ. ಜೊತೆ ಜೊತೆಗೆ ಸಂಪಿಗೆ ಮೊಗ್ಗುಗಳಂತೆ ತುಳು, ಕೊಂಕಣಿ, ಬ್ಯಾರಿ ಬಾಷೆಗಳೂ ಕಂಪು ಸೂಸುತ್ತಿವೆ. ಇದು ಅಲ್ಲಿಯ ಎಲ್ಲ ಭಾಷಿಕರ ಹೂ ಮನಸುಗಳ ದ್ಯೋತಕವಾಗಿದ್ದುದು ಅಷ್ಟೇ ಸ್ಪಷ್ಟ.
Related Articles
ಪೈಗಳ ಮನೆಯೊಳಗೆ ಶ್ರಾವಣ ಕುಶಲೋಪರಿ ಹಮ್ಮಿಕೊಳ್ಳಲಾಗಿತ್ತು.
Advertisement
ಕಾಸರಗೋಡು ಚಿನ್ನಾ ಅವರು ಎರಡು ಜಿಲ್ಲೆಗಳ ಸಾಂಸ್ಕೃತಿಕ ಕೊಡುಕೊಳ್ಳುವಿಕೆಯ ತುರ್ತಿನ ಬಗ್ಗೆ ಮಾತನಾಡಿದರು. ಸರಳ ಸುಂದರ ಕಾರ್ಯಕ್ರಮ. ಜೊತೆಗೆ ಅರ್ಥಪೂರ್ಣ ಕ್ಷಣ. ಅಲ್ಲಿ ನಾಡಿನ ಹಿರಿಯ ಕವಿಗಳ ಗೀತೆಯನ್ನು ಎರಡೂ ಜಿಲ್ಲೆಗಳ ಗಾಯಕರು ಹಾಡಿದರು.
ಅನಂತರ ನಮ್ಮನ್ನು ಗಡಿನಾಡ ಕವಿ ಕಯ್ನಾರ ಕಿಞ್ಞಣ್ಣ ರೈ ಗಳ ಮನೆಗೆ ಕರೆದು ಕೊಂಡು ಹೋದದ್ದು ಒಂದು ಅಪೂರ್ವ ಅನುಭವ. ರೈಗಳ ಮನೆ ಕವಿತಾ ಕುಟೀರ ದಲ್ಲಿ ಅವರ ಮಗ ಪ್ರಸನ್ನ ರೈ ತಂದೆ ಬರೆದ ಗೀತೆಯೊಂದನ್ನು ಹಾಡಿದರು. ರೈಗಳ ಪ್ರಶಸ್ತಿ ಫಲಕ, ಅವರ ಗ್ರಂಥಾಲಯ, ಅವರು ಓಡಾಡಿದ ಸ್ಥಳ ಎಲ್ಲವನ್ನೂ ತೋರಿಸಿದರು. ಇದು ಉತ್ತರ ಕನ್ನಡ ಜಿಲ್ಲಾ ಕ.ಸಾ.ಪ. ತಂಡಕ್ಕೆ ಅಪರೂಪದ ಅನುಭವ. ಅಲ್ಲಿಯೂ ಕೇರಳ ಸರಕಾರ ರೈಗಳ ಸ್ಮಾರಕ ಭವನವನ್ನು ನಿರ್ಮಿಸಲು ಮುಂದಾಗಿದೆ. ಅಲ್ಲಿಂದ ಹೊರಟು ಚಂದ್ರಗಿರಿ ನದಿ ತೀರ, ಬೇಕಲ್ ಕೋಟೆ ಮತ್ತಿತರ ಕಡೆ ಸುತ್ತಾಡಿ ಬರುವಷ್ಟರಲ್ಲಿ ಸೂರ್ಯ ಮುಳುಗಿದ್ದ. ರಾತ್ರಿ ಬಹುಹೊತ್ತಿನವರೆಗೂ ಕಾಸರಗೋಡು ಚಿನ್ನಾ ಅವರ ಮನೆಯಲ್ಲಿ ಗೀತಗಾಯನ, ಸಂಸ್ಕೃತಿ ಪರಿಚಯ, ಊಟ ಇತ್ಯಾದಿಗಳು ನಡೆದವು.
ಮರುದಿನ ಕಾಸರಗೋಡಿನ ಕರೆಂದ ಕ್ಕಾಡಿನ ಪದ್ಮಗಿರಿ ಕುಟೀರದಲ್ಲಿ ಹಿರಿಯ ಸಾಹಿತಿ ಡಾ| ನಾ. ದಾಮೋದರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಂಸ್ಕೃತಿ ಕುಶಲೋಪರಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರವåವನ್ನು ಉದ್ಘಾಟಿಸಿ ಮಾತನಾಡಿದ ನಾನು, ಇಲ್ಲಿ ಕನ್ನಡ ಮಾಧ್ಯಮಕ್ಕಾಗಿ ಹೋರಾಡುವುದಕ್ಕಿಂತ ಇಲ್ಲಿನ ಕನ್ನಡತನವನ್ನು ಇದ್ದಂತೆ ಇರುವಂತೆ ಮಾಡಲು ಕಾಳಜಿ ವಹಿಸಬೇಕಾಗಿದೆ. ಅದು ಇಂದಿನ ಸವಾಲು ಎಂದರು.ಇಲ್ಲಿಯ ಜನರ ಮಾತೃಬಾಷೆ ಬೇರೆಯಾದರೂ ಕನ್ನಡಕ್ಕೆ ಮಿಡಿಯುವ ಪರಿ ಹೃದ್ಯವಾಗಿದೆ. ಕಾಸರಗೋಡಿನ ಸಾಹಿತ್ಯಾಸಕ್ತರನ್ನೂ ಸದ್ಯದಲ್ಲಿಯೇ ಉತ್ತರ ಕನ್ನಡ ಜಿಲ್ಲೆಗೆ ಕರೆಸಿಕೊಳ್ಳುತ್ತೇವೆ ಎಂದು ಅನಿಸಿಕೆ ಹಂಚಿಕೊಂಡೆ. ಇದೇ ಸಂದರ್ಭದಲ್ಲಿ ಸಂತ ಶಿಶುನಾಳ ಷರೀಫ ಪ್ರಶಸ್ತಿ ಪುರಸ್ಕೃತ ವೈ. ಕೆ.ಮುದ್ದುಕೃಷ್ಣ ಅವರನ್ನು ಸಮ್ಮಾನಿಸಲಾಯಿತು. ಡಾ| ನಾ. ದಾಮೋದರ ಶೆಟ್ಟಿ ಅವರು ಭಾಷೆಗೆ ಪ್ರತಿಷ್ಠೆಯ ಹಂಗು ಇರುವುದಿಲ್ಲ ಎಂದರು.
ಅದು ನದಿಯಂತೆ ಸದಾ ನಿರ್ಮಲ ವಾಗಿ ಹರಿಯುತ್ತದೆ. ಹಾಗೆಯೇ ಕಾಸರಗೋಡಿನ ಜನ ಆ ಬದ್ಧತೆಯನ್ನು ಉಳಿಸಿಕೊಂಡಿದ್ದಾರೆ. ಎರಡೂ ಜಿಲ್ಲೆಯ ಜನ ಕಾಳಿ, ಚಂದ್ರಗಿರಿ ನದಿಯಂತೆ ಸದಾ ಜೀವಂತಿಕೆ ಉಳಿಸಿಕೊಂಡು ಹರಿಸುತ್ತಿರೋಣ ಅಂದರು.
ಉತ್ತರ ಕನ್ನಡ ಸಾಹಿತ್ಯ-ಸಂಸ್ಕೃತಿಯ ಕುರಿತು ಕವಿ ನಾಗರಾಜ ಹರಪನಹಳ್ಳಿ, ಕಾಸರಗೋಡು ಸಾಹಿತ್ಯ-ಸಂಸ್ಕೃತಿಯ ಬಗ್ಗೆ ಕವಿ ರಾಧಾಕೃಷ್ಣ ಉಳಿಯತ್ತಡ್ಕ ಮಾತನಾಡಿದರು. ಮಂಜೇಶ್ವರ ಮತ್ತು ಕರಂದಕ್ಕಾಡು ಈ ಎರಡೂ ಸ್ಥಳಗಳಲ್ಲಿ ನಡೆದ ಭಾವ ಲಹರಿ ಕಾರ್ಯಕ್ರಮದಲ್ಲಿ ವೈ.ಕೆ. ಮುದ್ದುಕೃಷ್ಣ, ಸೀಮಾ ರಾಯ್ಕರ್, ರವೀಂದ್ರ ಪ್ರಭು, ಉಮೇಶ ಮುಂಡಳ್ಳಿ, ಕಿಶೋರ ಪೆರ್ಲ ಮುಂತಾದವರು ತಮ್ಮ ಗಾನಸುಧೆಯ ಸಿಂಚನಗೈದರು. ಕಾಳಿ ನದಿ ತೀರದಿಂದ ಚಂದ್ರಗಿರಿ ನದಿ ತೀರದವರೆಗಿನ ಸಂಸ್ಕೃತಿ ಕುಶ ಲೋಪರಿ ಪಯಣದಲ್ಲಿ ಉತ್ತರ ಕನ್ನಡದಿಂದ ಉಮೇಶ ಮುಂಡಳ್ಳಿ, ನಾಗರಾಜ ಹರಪನಹಳ್ಳಿ, ಡಾ| ಶ್ರೀಧರ ಉಪ್ಪಿನ ಗಣಪತಿ, ಡಾ.ಪ್ರಕಾಶ ನಾಯಕ, ಡಾ| ಸುರೇಶ ಎನ್. ನಾಯ್ಕ, ಎಂ.ಜಿ. ನಾಯ್ಕ, ಜನಾರ್ದನ ಹರನೀರು, ಪ್ರಶಾಂತ ಹೆಗಡೆ ಮೂಡಲಮನೆ, ರೇಷ್ಮಾ ಉಮೇಶ್, ಕಲ್ಪನಾ ಹೆಗಡೆ, ಚಿದಾನಂದ ಭಂಡಾರಿ, ತಿಲೋತ್ತಮೆ ಗೊಂಡ, ಕೃತಿ ಹೆಗಡೆ ಮುಂತಾದವರು ತೆರಳಿದ್ದರು.