Advertisement
ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಈ ನಿಟ್ಟಿನಲ್ಲಿ ಪ್ರಖರವಾದ ದೃಷ್ಟಾಂತ. ಜೋಡೆತ್ತು, ದನಕರು, ಈಗ ಕೈ. ಸಂಸ್ಥ ಕಾಂಗ್ರೆಸ್ ನಲ್ಲಿ ಚರಕದಲ್ಲಿ ನೂಲುವ ಮಹಿಳೆ. ಇನ್ನೊಂದು ಬಣಕ್ಕೆ ನೇಗಿಲು ಹೊತ್ತ ರೈತ; ಮತ್ತೂಂದು ವಿಲೀನ ಬಣಕ್ಕೆ ಚರಕ. ಭಾರತೀಯ ಜನತಾ ಸಂಘಕ್ಕೆ ಮೊದಲಾಗಿ ದೀಪ. ಜನತಾ ಪಕ್ಷದಲ್ಲಿ ಬೆರೆತಾಗ ನೇಗಿಲು ಹೊತ್ತ ರೈತ. ಈಗ ತಾವರೆ. ಕತ್ತಿ ಮತ್ತು ತೆನೆ ಭಾರತೀಯ ಕಮ್ಯುನಿಸ್ಟ್ ಪಕ್ಷದ ಚಿನ್ಹೆ. ಕತ್ತಿ ಸುತ್ತಿಗೆ ನಕ್ಷತ್ರ ಭಾರತೀಯ ಮಾರ್ಕ್ಸ್ ವಾದೀ ಕಮ್ಯೂನಿಸ್ಟ್ ಪಕ್ಷದ ಚಿನ್ಹೆ. ಈಗ ಜಾತ್ಯತೀತ ಪಕ್ಷದ ಚಿನ್ಹೆ ತೆನೆ ಹೊತ್ತ ಮಹಿಳೆ. ಮೂಲ ಚಿನ್ಹೆ ನೇಗಿಲು ಹೊತ್ತ ರೈತ ಮೂಲ ಜನತಾ ಪಕ್ಷದಲ್ಲಿದೆ.
1952ರ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಕೇಂದ್ರ ಚುನಾವಣಾ ಆಯೋಗವು 14 ರಾಷ್ಟ್ರೀಯ ಪಕ್ಷಗಳನ್ನು ಮತ್ತು 60 ರಾಜ್ಯ ಪಕ್ಷಗಳನ್ನು ಮಾನ್ಯ ಮಾಡಿತ್ತು. ವಿವಿಧ ರಾಜಕೀಯ ಪಕ್ಷಗಳ ಕೇಳಿಕೆಯ ಆಧಾರದಲ್ಲಿ ಈ ಮಾನ್ಯತೆಯನ್ನು ನೀಡಲಾಗಿತ್ತೇ ಹೊರತು ಯಾವುದೇ ನಿರ್ದಿಷ್ಟ ಮಾನದಂಡಗಳಿರಲಿಲ್ಲ.
Related Articles
ಭಾರತೀಯ ಚುನಾವಣಾ ಇತಿಹಾಸದ ಕೆಲವು ಚಿನ್ಹೆಗಳು: ಜೋಡೆತ್ತು, ದೀಪ, ಕುಡುಗೋಲು ತೆನೆ, ಕುಡುಗೋಲು ಸುತ್ತಿಗೆ ನಕ್ಷತ್ರ, ದನಕರು, ನೂಲುವ ಮಹಿಳೆ, ನೇಗಿಲು ಹೊತ್ತ ರೈತ, ಹಸ್ತ, ಚರಕ, ಕಮಲ, ಉಳುವ ರೈತ, ತೆನೆ ಹೊತ್ತ ಮಹಿಳೆ, ಬಿಲ್ಲು ಬಾಣ, ಸೈಕಲ್, ಜೋಡಿ ಎಲೆ, ಉದಯ ಸೂರ್ಯ, ಆನೆ, ಲಾಟಾನು, ನಕ್ಷತ್ರ, ಸಿಂಹ, ಮನೆ, ತಕ್ಕಡಿ, ಗುಲಾಬಿ, ಹುಂಜ, ಕೈಗಾಡಿ, ಏಣಿ, ದೋಣಿ, ವೃಷಭ, ರೈಲು, ಒಂಟೆ, ಕುದುರೆ, ಸ್ವಸ್ತಿಕ, ತೆಂಗಿನಮರ, ಮಡಿಕೆ, ಹಾರೆ ಇತ್ಯಾದಿ… (ಪಶು ಪಕ್ಷಿಗಳ ಚಿನ್ಹೆ ಈಗಿಲ್ಲ) ಕೆಲವೆಡೆ ನೂರಿನ್ನೂರು ಸ್ಪರ್ಧಿಗಳಿದ್ದ ಕ್ಷೇತ್ರಗಳಲ್ಲಿ ಮೇಜು, ಕುರ್ಚಿ, ಪೆನ್ನು, ಪಿನ್ನು, ಬ್ಯಾಟು, ಚೆಂಡು, ಕುಪ್ಪಿ, ಟೊಪ್ಪಿ ಇತ್ಯಾದಿ ಚಿನ್ಹೆ ನೀಡುವ ಪರಿಸ್ಥಿತಿ ಉಂಟಾಗಿತ್ತು.
Advertisement
ಮನೋಹರ ಪ್ರಸಾದ್