Advertisement

ಕಾಗೆಯ ಕತೆ

06:00 AM Dec 06, 2018 | |

ಒಂದು ಗಂಡು ಮತ್ತು ಒಂದು ಹೆಣ್ಣು ಕಾಗೆ ದೊಡ್ಡ ಆಲದ ಮರವೊಂದರ ತುದಿಯಲ್ಲಿ ವಾಸವಾಗಿದ್ದವು. ಅದೇ ಮರದ ಪೊಟರೆಯಲ್ಲಿ ಒಂದು ಹಾವು ಕೂಡ ಸೇರಿ ಕೊಂಡಿತ್ತು. ಈ ಹೆಣ್ಣು ಕಾಗೆ ಮೊಟ್ಟೆ ಇಟ್ಟಾಗಲೆಲ್ಲ ಹಾವು ಅವನ್ನು ನುಂಗಿ ಹಾಕಿ ಬಿಡುತ್ತಿತ್ತು. ಕೊನೆಗೆ, ಕಾಗೆಗಳು ಗೆಳೆಯ ನರಿಯಣ್ಣನ ಬಳಿಗೆ ಹೋಗಿ, ತಮ್ಮ ಸಂಕಟವನ್ನು ಹೇಳಿಕೊಡವು.

Advertisement

“ಈ ಹಾವು ತುಂಬಾ ಕೆಟ್ಟ ಪ್ರಾಣಿ. ಆದರೂ ನೀವು ಧೈರ್ಯಗೆಡಬೇಡಿ. ಕೆಲವು ಸಾರಿ, ಕಡಿಮೆ ಬಲಶಾಲಿಗಳು ಕೂಡ ಉಪಾಯದಿಂದ, ಹೆಚ್ಚು ಬಲದವರನ್ನು ಸೋಲಿಸಬಹುದು’ ಎಂದು ನರಿಯಣ್ಣ ಧೈರ್ಯ ಹೇಳಿ, ಒಂದು ಉಪಾಯವನ್ನೂ ಸೂಚಿಸಿತು. “ಎಲ್ಲಿಂದಾದರೂ ಒಂದು ಚಿನ್ನದ ಸರವನ್ನು ತಂದು ಹಾವಿನ ಪೊಟರೆಯೊಳಗೆ ಹಾಕಿಬಿಡು. ಸರದ ಒಡೆಯ, ಆ ಪೊಟರೆಗೆ ಬರುವಂತೆ ಮಾಡಿದರೆ, ಅವನು ಸರವನ್ನು ಹೊರಗೆ ತೆಗೆಯಲು ಹಾವನ್ನು ಕೊಂದುಹಾಕುತ್ತಾನೆ’ ಎಂದಿತು ನರಿ.

ಆ ಕಾಗೆಗಳು ಚಿನ್ನದ ಸರ ಹುಡುಕಿಕೊಂಡು ಹೊರಟವು. ಆಗ, ಒಂದು ಕೊಳದಲ್ಲಿ ರಾಜ ಕನ್ಯೆಯರು ಸ್ನಾನ ಮಾಡುತ್ತಿದ್ದುದು ಕಾಣಿಸಿತು. ಅವರು  ನೀರಿಗಿಳಿಯುವ ಮೊದಲು ತಮ್ಮ ಆಭರಣಗಳನ್ನು ತೆಗೆದು ಒಂದು ಕಡೆ ಇಟ್ಟಿದ್ದರು. ಇದನ್ನು ಕಂಡ ಹೆಣ್ಣುಕಾಗೆ, ಚಿನ್ನದ ಸರವನ್ನು ತನ್ನ ಕೊಕ್ಕಿನಲ್ಲಿ ಕಚ್ಚಿಕೊಂಡು ಹಾರಿಹೋಯಿತು. ಅದನ್ನು ಕಂಡ ರಾಜನ ಕಾವಲುಭಟರು, ತಮ್ಮ ಬಡಿಗೆಗಳನ್ನು ಎತ್ತಿಕೊಂಡು ಕಾಗೆಯನ್ನು ಅಟ್ಟಿಸಿಕೊಂಡು ಓಡಿದರು. 

ಕಾಗೆ ಹಾರುತ್ತಾ ಬಂದು, ಆಲದ ಮರದ ಒಂದು ಪೊಟರೆಯೊಳಗೆ ಆ ಸರವನ್ನು ಹಾಕಿದ್ದನ್ನು ರಾಜಭಟರು ನೋಡಿಬಿಟ್ಟರು. ಕೂಡಲೇ, ಅವರು ಮರ ಹತ್ತಿ, ಆ ಪೊಟರೆಯನ್ನು ಕೆದಕಿದರು. ಆಗ ಪೊಟರೆಯಿಂದ ಹಾವು ಬುಸುಗುಡುತ್ತ ಹೊರ ಬಂತು. ಕೂಡಲೇ ರಾಜಭಟರು ತಮ್ಮ ಬಡಿಗೆಗಳಿಂದ ಹಾವನ್ನು ಬಡಿದು ಕೊಂದುಹಾಕಿ, ಚಿನ್ನದ ಸರವನ್ನು ತೆಗೆದುಕೊಂಡು ಹೋದರು. ಹೀಗೆ, ಆ ಕಾಗೆಗಳಿಗೆ ಹಾವಿನ ಕಾಟ ತಪ್ಪಿತು. 

(ಕೃಪೆ: ಓರಿಯೆಂಟಲ್‌ ಲಾಂಗ್‌ಮನ್‌)

Advertisement
Advertisement

Udayavani is now on Telegram. Click here to join our channel and stay updated with the latest news.

Next