Advertisement
ಕ್ರಿಕೆಟ್ ಚೆಂಡಿನ ವಿಧ, ವೈಶಿಷ್ಟ್ಯ?ಕೆಂಪು: ಕೆಂಪು ಚೆಂಡಿನ ಬಳಕೆ ಟೆಸ್ಟ್ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಾತ್ರ. ಇಲ್ಲಿ ಒಂದು ಚೆಂಡಿನಲ್ಲಿ 80 ಓವರ್ ತನಕ ಆಡಬಹುದು. ಅಂದರೆ ಒಂದು ದಿನದ ಸಂಪೂರ್ಣ ಆಟ ಎಂದು ಪರಿಗಣಿಸಬಹುದು. ಕೆಂಪು ಚೆಂಡು ಏಕದಿನ, ಟಿ20ಯಲ್ಲಿ ಬಳಸುವ ಬಿಳಿ ಚೆಂಡಿಗಿಂತ ಹೆಚ್ಚು ಗಟ್ಟಿಯಾಗಿದೆ. ಕೆಂಪು ಚೆಂಡಿನಲ್ಲಿ ಸ್ವಿಂಗ್ ಮಾಡುವುದು ಕಷ್ಟ ಎನ್ನುವುದು ಹಿಂದೆ ಸಂಶೋಧನೆಗಳಿಂದ ಬಹಿರಂಗಗೊಂಡಿದೆ. ಗಾಳಿಯ ಒತ್ತಡವು ಚೆಂಡಿನ ಪ್ರತಿ ಬದಿಯ ಮೇಲಿರುವ ಗಾಳಿಯ ಹರಿವನ್ನು ಆಧರಿಸುತ್ತದೆ. ಚೆಂಡಿನ ಒಂದು ಬದಿಯ ಮೇಲೆ ಗಾಳಿಯ ಹರಿವು ತಡೆದಾಗ ಚೆಂಡು ಸ್ವಿಂಗ್ ಆಗುತ್ತದೆ.
Related Articles
Advertisement
ಅಪಾಯಕಾರಿ ಚೆಂಡುಗಳಿವು: ಟೆನಿಸ್ ಬಾಲ್ ಮೆದುವಾಗಿರುತ್ತದೆ. ಲೆದರ್ ಚೆಂಡುಗಳು ಗಡುಸಾಗಿರುತ್ತವೆ. ಹೀಗಾಗಿ ಬ್ಯಾಟ್ಸ್‌ಮನ್‌ಗಳು ತಲೆಗೆ ಹೆಲ್ಮೆಟ್, ಕೈಗೆ ಗ್ಲೌಸ್, ಪ್ಯಾಡ್ ಮತ್ತಿತರ ರಕ್ಷಣಾ ಕವಚಗಳನ್ನು ಧರಿಸಿಯೇ ಆಡಬೇಕು. ಚೆಂಡಿನೇಟಿಗೆ ಆಸೀಸ್ ಕ್ರಿಕೆಟಿಗ ಫಿಲಿಪ್ ಹ್ಯೂಸ್, ಭಾರತದ ಕ್ರಿಕೆಟಿಗ ರಮಣ್ ಲಾಂಬಾ ಸೇರಿದಂತೆ ಹಲವಾರು ಕ್ರಿಕೆಟಿಗರು ಸಾವಿಗೀಡಾಗಿದ್ದಾರೆ. ಮತ್ತೆ ಕೆಲವರು ಗಂಭೀರ ಗಾಯಗೊಂಡಿರುವ ಘಟನೆ ಕಣ್ಣೆದುರಿದೆ. ತಲೆ, ಮುಖದ ಭಾಗಕ್ಕೆ ಈ ಚೆಂಡು ಜೋರಾಗಿ ಬಡಿದರೆ ಪ್ರಾಣಾಪಾಯ ಸಂಭವಿಸಬಹುದು. ಹೀಗಾಗಿ ಐಸಿಸಿ ಮಾನ್ಯತೆ ಪಡೆದ ಕಂಪೆನಿಗಳು ಮಾತ್ರ ವೃತ್ತಿಪರ ಕ್ರಿಕೆಟಿಗರ ಕ್ರಿಕೆಟ್ ಕಿಟ್ ತಯಾರಿಸುತ್ತವೆ.
ಹೊಸ ಚೆಂಡು ಬಳಕೆಗೆ ಒಂದೇ ಸಲ ಅವಕಾಶ: ಅಂತಾರಾಷ್ಟ್ರೀಯ ಪಂದ್ಯವೊಂದು ಆರಂಭವಾದ ಶುರುವಾತಿನಲ್ಲಿ ತಂಡವೊಂದಕ್ಕೆ ಎಸೆಯಲು ಹೊಸ ಚೆಂಡು ನೀಡಲಾಗುತ್ತದೆ. ಮತ್ತೊಂದು ಇನಿಂಗ್ಸ್ ಆರಂಭವಾದಾಗಲೂ ಇದೇ ನಿಯಮ ಅನ್ವಯವಾಗುತ್ತದೆ. ಇದಾದ ಬಳಿಕ ಪಂದ್ಯದ ನಡುವಿನಲ್ಲಿ ಎಲ್ಲಿಯೂ ಹೊಸ ಚೆಂಡು ಬಳಕೆಗೆ ಅವಕಾಶವಿಲ್ಲ. ಒಂದು ವೇಳೆ ಚೆಂಡು ಕಾಣೆಯಾದರೆ ಅಥವಾ ಚೆಂಡು ವಿರೂಪಗೊಂಡರೆ ಮಾತ್ರ ಹೊಸ ಚೆಂಡು ಕೊಡಲಾಗುತ್ತದೆ. ಟೆಸ್ಟ್ ಕ್ರಿಕೆಟ್‌ನಲ್ಲಿ 80 ಓವರ್ ಮುಗಿದ ಬಳಿಕ ಹೊಸ ಚೆಂಡನ್ನು ಪಡೆಯಲು ಅವಕಾಶವಿರುತ್ತದೆ. ಕ್ರೀಡಾಂಗಣಕ್ಕೆ ಚೆಂಡನ್ನು ಉಜ್ಜುವುದು, ಚೆಂಡನ್ನು ಸ್ಯಾಂಡ್‌ಪೇಪರ್ ಬಳಸಿ ತಿಕ್ಕುವುದು, ಚೆಂಡಿನ ಮೂಲ ಸ್ವರೂಪಕ್ಕೆ ಹಾನಿ ಮಾಡುವುದು ಕ್ರಿಕೆಟ್ ನಿಯಮಗಳಿಗೆ ವಿರುದ್ಧವಾಗಿದೆ.
ಪ್ರಮುಖ ಚೆಂಡು ಉತ್ಪಾದಕ ಸಂಸ್ಥೆಗಳು-ಗನ್ ಅಂಡ್ ಮೋರ್ ಕ್ರಿಕೆಟ್ ಬಾಲ್ಸ್
-ಕೊಕಬುರ್ರಾ ಕ್ರಿಕೆಟ್ ಬಾಲ್ಸ್
-ಸ್ಲಂಜರ್ ಕ್ರಿಕೆಟ್ ಬಾಲ್ಸ್
-ಸಿಎ ಕ್ರಿಕೆಟ್ ಬಾಲ್ಸ್
-ಎಸ್‌ಜಿ ಕ್ರಿಕೆಟ್ ಬಾಲ್ಸ್