Advertisement
ಅಚಲಾದೇವಿಯ ಕೀರ್ತಿಯನ್ನು ಕೇಳಿ ದೂರ ದೂರದ ಊರುಗಳಿಂದ ಸ್ವಯಂವರದಲ್ಲಿ ಭಾಗವಹಿಸಲು ಬಂದವರಲ್ಲಿ ನಾನೂ ಒಬ್ಬ . ಸ್ವಯಂವರ ಏರ್ಪಡಿಸಿದ್ದ ಭವನದ ಒಳಗೆ ನೋಡುತ್ತೇನೆ ಯುವಕರು ಕಿಕ್ಕಿರಿದು ತುಂಬಿದ್ದಾರೆ. ಗದ್ದಲವೋ ಗದ್ದಲ. ನಾನು ಒಂದು ಆಸನದಲ್ಲಿ ಕುಳಿತೆ. ಸ್ವಲ್ಪ ಸಮಯದ ನಂತರ ರಾಜಕುಮಾರಿ ಅಚಲಾ ದೇವಿ ತನ್ನ ತಂದೆ, ತಾಯಿ, ಸಹೋದರರು ಮತ್ತು ಮಂತ್ರಿಗಳೊಂದಿಗೆ ವೇದಿಕೆಯತ್ತ ನಡೆದು ಬಂದಳು. ಸಭಾಂಗಣದ ತುಂಬಾ ಮಿಂಚಿನ ಸಂಚಾರವಾದಂತಾಯಿತು. ಎಲ್ಲರೂ ಮೌನವಾಗಿ ಮಂತ್ರಮುಗ್ಧರಾಗಿ ಅವಳನ್ನೇ ಗಮನಿಸಲಾರಂಭಿಸಿದರು. ಮಂತ್ರಿಯು, “”ರಾಜಕುಮಾರಿ ಅಚಲಾದೇವಿ ಈಗ ತಮ್ಮನ್ನು ವಿವಾಹವಾಗುವ ಆಕಾಂಕ್ಷೆಯಿಂದ ಬಂದಿರುವ ಯುವಕರಿಗೆ ಕೆಲವು ಶರತ್ತುಗಳನ್ನು ತಿಳಿಸಲಿದ್ದಾರೆ” ಎಂದು ಹೇಳಿ ತನ್ನ ಆಸನದಲ್ಲಿ ಕುಳಿತನು. ಸುಕುಮಾರಿ ಅಚಲಾದೇವಿ ನಸು ನಾಚುತ್ತ ಮುಂದೆ ಬಂದು ತನ್ನ ಮಾತನ್ನು ಆರಂಭಿಸಿದಳು.
Related Articles
.
ಅಚಲಾದೇವಿಯನ್ನು ಪಡೆಯಲೇಬೇಕೆಂಬ ದೃಢ ನಿರ್ಧಾರ ಮಾಡಿ, ಆ ರಾಜಕುಮಾರನಿಗಿಂತ ಮೊದಲೇ ಶರತ್ತುಗಳನ್ನು ಪೂರೈಸಬೇಕೆಂದು ಈಶಾನ್ಯ ದಿಕ್ಕಿನತ್ತ ಹೊರಟೆ. ಬಹಳ ಕಷ್ಟದಿಂದ ಪರ್ವತಗಳನ್ನು ಹತ್ತಿ ಇಳಿಯುತ್ತ ಕೊನೆಗೂ ಏಳನೇ ಬೆಟ್ಟದಾಚೆಗಿನ ಕಣಿವೆಯನ್ನು ತಲುಪಿದೆ. ಬಣ್ಣ ಬಣ್ಣದ ಹೂಗಳಿಂದ ತುಂಬಿದ್ದ ಕಣಿವೆ ಸುವಾಸನೆಯಿಂದ ಆಹ್ಲಾದಕರವಾಗಿದೆ. ಅಲ್ಲಲ್ಲಿ ಅಚಲಾದೇವಿ ಕೇಳಿದ್ದ ಸುಂದರವಾದ ಕಡು ನೀಲಿ ಬಣ್ಣದ ಹೂಗಳೂ ಇವೆ, ಒಂದೆರಡು ನೀಲಿ ಹೂಗಳನ್ನು ಕಿತ್ತುಕೊಂಡು ಮತ್ತೆ ಪರ್ವತ ಪಂಕ್ತಿಗಳನ್ನು ಕಣಿವೆಗಳನ್ನು ದಾಟುತ್ತ¤, ಆಯಾಸದಿಂದ ಉಸಿರುಗರೆಯುತ್ತ ಹಿಂದಿರುಗಿದೆ. ಅರಮನೆಗೆ ಹೋಗಿ ರಾಜಕುಮಾರಿಯ ಕೈಗೆ ಹೂವನ್ನು ನೀಡಿದೆ. ಅವಳೂ ಮುಗುಳ್ನಗುತ್ತ ಮೆಚ್ಚುಗೆಯಿಂದ ಹೂವನ್ನು ಪಡೆದಳು.
ಅಲ್ಲಿಂದ ನೇರವಾಗಿ ದಕ್ಷಿಣ ದಿಕ್ಕಿನತ್ತ ನಡೆದು ಸಮುದ್ರ ತೀರವನ್ನು ತಲುಪಿದೆ. ಸಮುದ್ರದೇವನನ್ನು ಮನಸ್ಸಿನಲ್ಲಿಯೇ ಪ್ರಾರ್ಥಿಸುತ್ತ ನೀರಿನಲ್ಲಿ ಈಜುತ್ತ¤ ಸ್ವಲ್ಪ ದೂರ ಹೋಗಿ ನಂತರ ಮುಳುಗಿ ದೊಡ್ಡ ಗಾತ್ರದ ಮುತ್ತಿನ ಚಿಪ್ಪನ್ನು ಹುಡುಕಲಾರಂಭಿಸಿದೆ. ಅಬ್ಟಾ! ಏನಾಶ್ಚರ್ಯ. ಮೊದಲ ಬಾರಿ ಮುಳುಗಿದಾಗಲೇ ಬೃಹತ್ ಗಾತ್ರದ ಚಿಪ್ಪು ಕಂಡಿತು. ಅದು ಅಂಟಿಕೊಂಡಿದ್ದ ಬಂಡೆಯಿಂದ ಕತ್ತರಿಸಿ ಮೇಲೆ ತಂದು ಅದರೊಳಗಿನ ದೊಡ್ಡದಾಗಿದ್ದ ಸುಂದರವಾದ ಮುತ್ತನ್ನು ತೆಗೆದುಕೊಂಡೆ. ಅಚಲಾದೇವಿಯ ಬಳಿ ಹೋಗಿ ಅಮೂಲ್ಯವಾದ ದೊಡ್ಡ ಗಾತ್ರದ ಮುತ್ತನ್ನು ಅವಳ ಕಿರೀಟದಲ್ಲಿ ಅಲಂಕರಿಸಲು ನೀಡಿದೆ. ಹೊರ ಬರುವಾಗ ನೋಡುತ್ತೇನೆ ನನ್ನ ಪ್ರತಿಸ್ಫರ್ಧಿ ರಾಜಕುಮಾರನೂ ಮುತ್ತನ್ನು ತೆಗೆದುಕೊಂಡು ಅರಮನೆಯತ್ತ ಹೋಗುತ್ತಿದ್ದಾನೆ. “”ಅಯ್ಯೋ, ಇವನೂ ನನ್ನ ಸಮ ಸಮಕ್ಕೆ ಶರತ್ತುಗಳನ್ನು ಪೂರೈಸುತ್ತಿರುವುದನ್ನು ನೋಡಿ ಸ್ವಲ್ಪ ಆತಂಕವಾಗುತ್ತಿದೆ. ಆದರೆ, ಅವನು ನನ್ನನ್ನು ನೋಡಿಯೂ ನೋಡದಂತೆ ಜಂಭದಿಂದ ಹೋಗುತ್ತಿದ್ದಾನೆ, ಎಲಾ ಇವನ ಸೊಕ್ಕೆ!”
ಅಚಲಾ ದೇವಿಯ ಕೊನೆಯ ಶರತ್ತನ್ನು ಪೂರ್ಣಗೊಳಿಸಲು ನನ್ನ ಗುರುಗಳು ಹೇಳಿಕೊಟ್ಟಿರುವ ಮಂತ್ರಗಳ ನೆರವಿನಿಂದ ಗಾಳಿಯಲ್ಲಿ ಮೇಲೆ ಹಾರುತ್ತ ದೇವಲೋಕಕ್ಕೆ ತಲುಪಿದೆ. ಹೇಗಾದರೂ ಚಂದ್ರನ ಮನವೊಲಿಸಿ ಒಂದು ಪುಟ್ಟ ನಕ್ಷತ್ರವನ್ನು ಪಡೆಯಲು ಅವನ ಅರಮನೆಗೆ ಬಂದೆ. ಅಚಲಾದೇವಿಯ ಮೇಲಿನ ನನ್ನ ಪ್ರೀತಿಯನ್ನು ಮೆಚ್ಚಿದ ಚಂದ್ರ ನನಗಾಗಿ ಒಂದು ಪುಟ್ಟದಾದ ಸುಂದರ ನಕ್ಷತ್ರವನ್ನು ಸೃಷ್ಟಿಸಿಕೊಡಲು ಒಪ್ಪಿದ. ಅಚಲಾದೇವಿಯ ಎಲ್ಲಾ ಶರತ್ತುಗಳನ್ನೂ ಪೂರೈಸಿದ ಸಂಭ್ರಮದಲ್ಲಿ ವಜ್ರಕ್ಕಿಂತ ಪ್ರಕಾಶಮಾನವಾಗಿ ಹೊಳೆಯುತ್ತಿದ್ದ ಪುಟ್ಟ ನಕ್ಷತ್ರವನ್ನು ಪಡೆದು ಹಿಂದಿರುಗುತ್ತಿದ್ದೆ. ಏಕೋ ಬಹಳ ಆಯಾಸವಾಗುತ್ತಿದೆ, ತುಂಬಾ ಬಾಯಾರಿಕೆ ಎನಿಸುತ್ತಿದೆ, ಸ್ವಲ್ಪ ದೂರದಲ್ಲೆ ಒಂದು ತೊರೆ ಕಾಣಿಸುತ್ತಿದೆ, ನೀರು ಕುಡಿದು ಸ್ವಲ್ಪ ದಣಿವಾರಿಸಿಕೊಂಡು ಅಚಲಾದೇವಿಯ ಬಳಿ ಹೋಗಬಹುದೆನಿಸುತ್ತಿದೆ. ಪ್ರಕಾಶನಮಾನವಾಗಿ ಹೊಳೆಯುತ್ತಿದ್ದ ಮುದ್ದಾದ ಪುಟ್ಟ ನಕ್ಷತ್ರವನ್ನು ದಡದಲ್ಲಿರುವ ಮರದ ಬಳಿ ಇಟ್ಟು ತೊರೆಯ ಬಳಿ ಹೋಗಿ ಬೊಗಸೆಯಲ್ಲಿ ತುಂಬಿ ತುಂಬಿ ನೀರು ಕುಡಿದೆ. ಸ್ವಲ್ಪ ದಣಿವು ಕಡಿಮೆಯಾದಂತೆನಿಸಿತು. ಮುಖಕ್ಕಷ್ಟು ನೀರು ಹಾಕಿಕೊಂಡು ಹಿಂದಿರುಗಿ ನೋಡುತ್ತೇನೆ, ಅಯ್ಯೋ! ಆ ರಾಜಕುಮಾರ ನನ್ನ ನಕ್ಷತ್ರವನ್ನು ಕದ್ದು ಕುದುರೆ ಮೇಲೇರಿ ಹೋಗುತ್ತಿದ್ದಾನೆ. ನನ್ನ ಹೃದಯವೇ ನಿಂತು ಹೋದಂತಾಗುತ್ತಿದೆ. ಅವನ ಹಿಂದೆ ಓದುತ್ತಿದ್ದೇನೆ, ಆ ಪಾಪಿ ವೇಗವಾಗಿ ಕುದುರೆ ಓಡಿಸಿಕೊಂಡು ಮರೆಯಾಗುತ್ತಿದ್ದಾನೆ. “ಅಯ್ಯೋ! ಅಮ್ಮಾ! ಮೋಸ, ಮೋಸ, ಕಳ್ಳ ಕಳ್ಳ’ ಎಂದು ಜೋರಾಗಿ ಚೀರಿದೆ.
Advertisement
“ಮೋಸ, ಮೋಸ, ಕಳ್ಳ, ಕಳ್ಳಾ’ ಎಂದು ಚೀರಿದ ನಾನು ಬೆಚ್ಚಿ ಬಿದ್ದು ಹಾಸಿಗೆಯಿಂದ ಎದ್ದು ಕುಳಿತೆ. ಆಘಾತದಿಂದ ನನ್ನೆದೆ ಏರಿಳಿಯುತ್ತಿದೆ, ಮೈಯೆಲ್ಲಾ ಬೆವರುತ್ತಿದೆ. ಇದುವರೆಗೆ ನಡೆದದ್ದೆಲ್ಲ ಕನಸು ಎಂದು ಅರಿವಾದ ಮೇಲೆ, ನಿಧಾನವಾಗಿ ದಿಂಬಿನ ಪಕ್ಕದಲ್ಲಿದ್ದ ಮೊಬೈಲ್‌ನಲ್ಲಿ ಟೈಮ್ ನೋಡಿದೆ. ಇನ್ನೂ ಬೆಳಗಿನ ಜಾವ ನಾಲ್ಕೂ ಹತ್ತು. ನಿಧಾನವಾಗಿ ಯೋಚಿಸಿದಾಗಲೂ ಕನಸನ್ನು ನೆನೆದು ಆತಂಕವೆನಿಸಿ ಮತ್ತೆ ನಿದ್ದೆ ಬಾರದೆ ಎದ್ದು ಬಾಲ್ಕನಿಯಲ್ಲಿ ಕುಳಿತೆ. ಈ ಕನಸೆಲ್ಲÉ ನಾನು ರಾತ್ರಿ ಮಲಗುವ ಮುಂಚೆ ಓದುತ್ತಿದ್ದ ಫ್ಯಾಂಟಸಿ ಕತೆಗಳ ದೆಸೆಯಿಂದ ಇರಬೇಕು.
“ಕ್ಷಮಿಸಪ್ಪ! ನಮ್ಮ ಕೆಲಸದವಳು ಮನೆಯಲ್ಲಿದ್ದ ಕಸವನ್ನೆಲ್ಲ ಗುಡಿಸಿ ಸುಡುವ ಭರದಲ್ಲಿ !’ ಈಗ ಜ್ವರ ಬಂದಂತೆ ಗರಬಡಿದು ಕೂರುವ ಸ್ಥಿತಿ ಥಾಮಸ್‌ನದಾಗಿತ್ತು. ಆದರೆ, ಆತ ಅದನ್ನು ಸವಾಲಾಗಿ ಸ್ವೀಕರಿಸಿ ಇಡೀ ಪುಸ್ತಕವನ್ನು ಮತ್ತೂಮ್ಮೆ ಬರೆದ. ಇದರ ಒಂದೊಂದು ಸಾಲೂ ಹೃದಯದಿಂದ ಧಗಧಗಿಸುತ್ತ ಬಂದು ನನ್ನ ಕೈಯಲ್ಲಿ ಬರೆಯಲ್ಪಟ್ಟಿತು ಎಂದು ಆತ ಆ ಕೃತಿಯಲ್ಲಿ ಹೇಳಿಕೊಂಡಿ¨ªಾನೆ.
ಲಾರ್ಡ್ ಬೈರಾನ್ ಎಂಬ ಇಂಗ್ಲಿಶ್ ಕವಿಯ ಕತೆಯೇ ಬೇರೆ. ಈತ ಸುರಸುಂದರಾಂಗ; ಜೊತೆಗೆ ಅಷ್ಟೇ ಶೃಂಗಾರರಾಜನೂ ಹೌದು. ತನ್ನ ಹದಿಹರೆಯದಲ್ಲೆ ಹಲವು ಅದ್ಭುತ ಕವಿತೆಗಳಿಂದ ಇಂಗ್ಲೆಂಡ್ ದೇಶದಲ್ಲಿ ಪ್ರಸಿದ್ಧಿಗೆ ಬಂದ ಬೈರಾನ್ ಒಂದೆರಡಲ್ಲ ಹತ್ತುಹಲವು ಅಕ್ರಮ ಸಂಬಂಧಗಳನ್ನು ಇಟ್ಟುಕೊಂಡಿದ್ದವನು.
ಆದರೂ ಏಕೋ ಮನಸ್ಸಿಗೆ ಸ್ವಲ್ಪವೂ ಸಮಾಧಾನವೆನಿಸುತ್ತಿಲ್ಲ. ಅಚಲಾ ನನ್ನ ಕಲೀಗ್, ಹೀಗೆ ಎರಡು ವರ್ಷಗಳಿಂದ ನನ್ನ ಟೀಮ್‌ನಲ್ಲೇ ಕೆಲಸ ಮಾಡುತ್ತಿರುವ ಧಾರವಾಡದ ಹುಡುಗಿ. ಮೊದಲಿನಿಂದಲೂ ನನಗೆ ಅವಳೆಂದರೆ ಒಂದು ಬಗೆಯ ಆಕರ್ಷಣೆ. ಅದು ಪ್ರೀತಿ ಇರಬಹುದು ಅಂತ ನನಗೆ ಇತ್ತೀಚೆಗೆ ಅನ್ನಿಸ್ತಾ ಇದೆ. ಒಂದೇ ಪ್ರಾಜೆಕ್ಟ್‌ನಲ್ಲಿ ಇರುವುದರಿಂದ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೇವೆ. ಆದರೆ, ಇದುವರೆಗೂ ನನ್ನ ಮನಸ್ಸನ್ನು ಅವಳೆದುರು ತೆರೆದಿಡಲಾಗಿಲ್ಲ. ಅಚಲಾನ ಕಳ್ಕೊàಳ್ಳೋಕೆ ನಾನು ತಯಾರಿಲ್ಲ. ಇವತ್ತು ಪ್ರಪೋಸ್ ಮಾಡಿಯೇಬಿಡುತ್ತೇನೆ. ಅವಳಿಗೆ ರಿಜೆಕ್ಟ್ ಮಾಡೋಕೆ ಯಾವ ಕಾರಣವೂ ಇಲ್ಲ. ಈಗ ಆ ಕನಸನ್ನು ಮತ್ತೆ ಮತ್ತೆ ನೆನೆದು ನಗು ಬರುತ್ತಿದೆ. ಎಂಥ ಬಕ್ವಾಸ್ ಕನಸು, ಚಂದ್ರಲೋಕಕ್ಕೆ ಹೋಗಿ ಬಂದ್ನಲ್ಲಾ ನಾನು.
ಬೆಳಗ್ಗೆ ಬೇಗ ರೆಡಿಯಾಗಿ ಕಂಪೆನಿಗೆ ಹೋದ. ಅಚಲಾ ಇನ್ನೂ ಬಂದಿರಲಿಲ್ಲ. ನನಗೆ ಇವತ್ತು ಖಂಡಿತಾ ಕೆಲಸದ ಮೇಲೆ ಗಮನ ಹರಿಸೋದು ಸಾಧ್ಯನೇ ಇಲ್ಲ ಅನಿಸುತ್ತಿದೆ. ಒಬ್ಬೊಬ್ಬರಾಗಿ ನನ್ನ ಟೀಮ್‌ಮೇಟ್‌ಗಳು ಬಂದರೂ ಅಚಲಾ ಇನ್ನೂ ಬಂದಿಲ್ಲ. ಅವಳಿಗೆ ಫೋನ್ ಮಾಡಿದರೆ ನಾಟ್ ರೀಚೆಬಲ್ ಬರ್ತಾ ಇದೆ. ಇದೇನು ಕತೆಯೋ. ಇವಳದ್ದು ಹೋಗಲಿ, ಅವಳ ಗೆಳತಿಯನ್ನಾದರೂ ವಿಚಾರಿಸಬೇಕು. ವೀಕೆಂಡ್ ಅಂತ ಮನೆಗೇನಾದರೂ ಹೋಗಿದ್ದಾಳ್ಳೋ, ಕಾವ್ಯಾಳ ಡೆಸ್ಕಿಗೆ ಹೋಗಿ, “ಅಚಲಾ ಯಾಕೆ ಬಂದಿಲ್ಲ ಇನ್ನೂ ಅಂತ’ ಕೇಳಿದ್ದಕ್ಕೆ, “ಸಮರ್ಥ್, ನೀನಿನ್ನೂ ಫೇಸ್‌ಬುಕ್ ನೋಡಿಲ್ವಾ? ಸರ್‌ಪ್ರೈಸ್ ಇದೆ’ ಎಂದಳು. ಇವಳಿಗೆ ಯಾವಾಗಲೂ ಹುಡುಗಾಟಿಕೆ ನನ್ನ ಪ್ರಶ್ನೆಗೆ ಉತ್ತರ ಹೇಳೆª ಏನೋ ಮಾತಾಡ್ತಾಳೆ ಅಂತ. ನನಗೆ ಸ್ವಲ್ಪ ಕೋಪ ಬಂತು. ಆದರೂ ಸಹಿಸುತ್ತ¤, “ಏನದು ಸರ್‌ಪ್ರೈಸ್’ ಎಂದೆ. “ಅಚಲಾ ಎಂಗೇಜ್‌ಮೆಂಟ್ ಆಗಿದೆ ನಿನ್ನೆ. ನೋಡು ಅವಳು ನಮ್ಗೆ ಕ್ಲೂನೂ ಕೊಟ್ಟಿಲ್ಲ , ವೆರಿಬ್ಯಾಡ್, ನಂಗೂ ಎಫ್ಬಿ ನೋಡಿದಾಗ್ಲೆ ಬೆಳಿಗ್ಗೆ ಗೊತ್ತಾಗಿದ್ದು, ಬರ್ಲಿ ಅವಳು, ಮಾಡ್ತೀನಿ’ ಅಂದಳು. ಇಲ್ಲ , ಇದೇನೋ ತಮಾಷೆ ಇರಬಹುದು, ಅಚಲಾ ನನಗೂ ಹೇಳದೆ ಹೀಗೆ ಮಾಡಲಾರಳು ಎನಿಸುತ್ತಿದೆ.
ನಿಧಾನವಾಗಿ ನನ್ನ ಜಾಗಕ್ಕೆ ಬಂದು ಮೊಬೈಲ್ ತೆಗೆದು ಫೇಸ್‌ಬುಕ್ ತೆರೆದೆ. ಅಚಲಾಳ ಸ್ಟೇಟಸ್- ಗಾಟ್ ಎಂಗೇಜ್x ಕಣ್ಣಿಗೆ ರಾಚುತ್ತಿದೆ ! ಅದ್ಯಾವನೋ ವಿನಯ್ ಅಂತೆ. ಥೂ! ನನ್ನ ಬ್ಯಾಡ್‌ಲಕ್. ನೋಡೋಣ ಅವನ್ ಮೂತಿ ಹೇಗಿದೆ ಅಂತ ವಿನಯ್ ವಿನು ಪ್ರೊಫೈಲ್ ಓಪನ್ ಮಾಡಿದೆ. ಏನಿದು ನಾನು ಮತ್ತೆ ಕನಸು ಕಾಣಾ¤ ಇಲ್ಲ ತಾನೆ. ಇವನು ಅವನೇ… ಅವನೇ ನನ್ನ ಕನಸಲ್ಲಿ ಸ್ವಯಂವರದಲ್ಲಿದ್ದ ರಾಜಕುಮಾರ. ಇದೇನಾಗುತ್ತಿದೆ ನನ್ನ ನಕ್ಷತ್ರ ಕದ್ದುಕೊಂಡು ಹೋದ ಇವನೇ ಅಚಲಾಳನ್ನು ಮದುವೆ ಆಗ್ತಾ ಇದ್ದಾನೆ.
ಅಚಲಾಗೆ ಪ್ರಪೋಸ್ ಮಾಡಲಾಗದೇ ಅವಳನ್ನು ಕಳೆದುಕೊಂಡಿದ್ದ ಬೇಸರವನ್ನೂ ಮೀರಿ ವಿಚಿತ್ರವೆನಿಸುತ್ತಿದೆ. ಅದು ಹೇಗೆ, ಎಂದಿಗೂ ನಾನು ನೋಡದೇ ಇದ್ದ ವ್ಯಕ್ತಿ ಕನಸಿನಲ್ಲಿ ಬಂದು ನನ್ನ ಜೊತೆ ಸ್ವಯಂವರದಲ್ಲಿ ಭಾಗವಹಿಸಿದ, ನನ್ನ ನಕ್ಷತ್ರವನ್ನೂ ಕದ್ದ , ಅಚಲಾ ಅವನೊಂದಿಗೆ ಎಂಗೇಜ್ , ಇದು ಹೇಗೆ ಸಾಧ್ಯ? ಎಂಬ ಸೋಜಿಗವೇ ನನ್ನನ್ನು ಆವರಿಸುತ್ತಿದೆ. ನನ್ನ ಕನಸಿನಲ್ಲಿ ಅವನ ಹೆಸರೇನಿತ್ತೆಂದು ತೀವ್ರವಾಗಿ ಯೋಚಿಸುತ್ತಿದ್ದೇನೆ. ಹೂವು, ಮುತ್ತು, ನಕ್ಷತ್ರ , ಚಂದ್ರ, ಅರಮನೆ, ಸಮುದ್ರ, ರಾಜ, ಪರ್ವತ, ಏನೇನೋ ನೆನಪಾಗುತ್ತಿದೆ.
ಛೇ! ಅವನ ಹೆಸರು ನೆನಪಾಗುತ್ತಲೇ ಇಲ್ಲ.
ಶ್ರುತಿ ಬಿ. ಆರ್.