Advertisement

ಕದ್ದ ಸಿಂಹಾಸನವನ್ನು ಬಿಡಲೇಬೇಕಾಗುತ್ತದೆ!

06:37 AM Dec 06, 2017 | |

ಈ ನಗೆನಾಟಕದಲ್ಲಿ ಅಭ್ಯರ್ಥಿಯಾಗಿ ನಾಮನಿರ್ದೇಶಿತವಾ ಗುವುದು ನನ್ನ ಮುಂದಿನ ಗುರಿಯಾಗಿರಲೇ ಇಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಇದು ಕಾಂಗ್ರೆಸ್‌ನೊಳಗಿನ ವಂಶ ಪಾರಂಪರ್ಯದ ವಿರುದ್ಧದ ನನ್ನ ಹೋರಾಟ. ನನ್ನಂತೆಯೇ ಯೋಚಿಸುವ, ಆದರೆ ಸದ್ಯಕ್ಕೆ ಮಾತನಾಡದೇ ಸುಮ್ಮನಿರುವ ಅನೇಕ ನಾಯಕರು ಮತ್ತು ಸಾವಿರಾರು ಬೆಂಬಲಿಗರ ಸಹಾಯ ದಿಂದ ಕಾಂಗ್ರೆಸ್‌ ಪಕ್ಷವನ್ನು “ವಂಶಪಾರಂಪರ್ಯ ಮುಕ್ತ’ಗೊಳಿಸುತ್ತೇವೆ. 

Advertisement

ಇದು ಕರಾಳ ದಿನ. ರಾಹುಲ್‌ ಗಾಂಧಿಯವರನ್ನು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಂತಲ್ಲ, ಬದಲಾಗಿ ಹೇಗೆ ಹಿಂದೆ ಮೊಘಲ್‌ ರಾಜ ವಂಶದ ಕುಡಿಯನ್ನೇ ರಾಜನನ್ನಾಗಿಸಲಾಗುತ್ತಿತ್ತೋ, ಹಾಗೆಯೇ ಅವರನ್ನೂ ಪಟ್ಟಕ್ಕೇರಿಸಲಾಗಿದೆ. ಕಾಂಗ್ರೆಸ್‌ ಪಕ್ಷದ ಒಬ್ಬ ಸದಸ್ಯನಾಗಿ ನಾನು ಈ ದಿನವನ್ನು ನಮ್ಮ ಪಕ್ಷದ ಇತಿಹಾಸದಲ್ಲಿ “ಕರಾಳ ದಿನ’ವನ್ನಾಗಿ ಆಚರಿಸುತ್ತೇನೆ. 35 ವರ್ಷದ ಮೌಲಾನಾ ಆಝಾದ್‌ರನ್ನು ಅಧ್ಯಕ್ಷರನ್ನಾಗಿ ಕಂಡ ಮಹಾತ್ಮಾಗಾಂಧಿಯವರ ಕಾಂಗ್ರೆಸ್‌ ಪಕ್ಷವೀಗ ಶೆಹಝಾದಾನ(ಯುವರಾಜ) ಸ್ವತ್ತಾಗಿ ಬದಲಾಗಿದೆ. ಮೊದಲೇ ನಿಶ್ಚಿತವಾದ ಆಂತರಿಕ ಚುನಾವಣೆಯಲ್ಲಿ ಶೆಹಝಾ ದಾನ ವಿರುದ್ಧ ಬೇರಾವ ಶಹಝಾದಾಗೂ(ನಮ್ಮಂಥವರಿಗೆ) ಸ್ಪರ್ಧಿಸು ವುದಕ್ಕೆ ಸಾಧ್ಯವಿಲ್ಲ! ಇದನ್ನು ನಾನು ಕಪ್ಪು ದಿನ ಎಂದು ಕರೆಯುತ್ತಿರುವುದೇಕೆಂದರೆ, ಯಾವ ವ್ಯಕ್ತಿಗೆ ಅರ್ಹತೆಯಿಲ್ಲವೋ ಮತ್ತು ಯಾರು ನಿರಂತರವಾಗಿ ಕಳಪೆ ಪ್ರದರ್ಶನ ತೋರಿಸುತ್ತಾ ಬರುತ್ತಿದ್ದಾರೋ (2012ರ ವರೆಗೆ ಉತ್ತರ ಪ್ರದೇಶದಲ್ಲಿ ಒಂದಾದ ನಂತರ ಒಂದರಂತೆ ಚುನಾವಣೆಗಳನ್ನು ಸೋಲುವುದರಿಂದ ಹಿಡಿದು  2014ರ ಲೋಕಸಭಾ ಚುನಾವಣೆಗಳಲ್ಲಿ ಮತ್ತು 2017 ರಲ್ಲೂ ಯುಪಿಯಲ್ಲಿ ಸೋಲುನುಭವಿಸಿದವರು) ಅವರನ್ನು ಪ್ರತಿಯೊಂದು ಸೋಲಿನ ನಂತರವೂ ಉನ್ನತ  ಹುದ್ದೆಗೆ ಏರಿಸುತ್ತಾ ಬರಲಾಗುತ್ತಿದೆ. ಇದು ನಡೆಯುತ್ತಿರುವುದು ಅವರ ತಾಯಿಯ ನೇತೃತ್ವದ “ವಂಶಾಡಳಿತ ಪರಂಪರೆಯ’ ಅಣತಿಯ ಮೇರೆಗೆ. ನಾಮನಿರ್ದೇಶನ ಪ್ರಕ್ರಿಯೆ ಅಧಿಕೃತವಾಗಿ ಅಂತ್ಯವಾಗುವ ಮುನ್ನವೇ, ಅಂದರೆ ಮಧ್ಯಾಹ್ನ 3 ಗಂಟೆಗೆ ಮುನ್ನವೇ ರಾಹುಲ್‌ ಗಾಂಧಿಯವರನ್ನು ಅಧ್ಯಕ್ಷರೆನ್ನಲಾಯಿತು(ವಂಶಪಾರಂಪರ್ಯಕ್ಕೆ ಬಹುಪರಾಕು ಹಾಕುವ ಕೆಲವು ಚಿಯರ್‌ಲೀಡರ್‌ಗಳು ಘೋಷಿಸಿದ ಪ್ರಕಾರ).

ಈ ಪಟ್ಟಾಭಿಷೇಕ ಒಂದು ಫಿಕ್ಸ್‌ ಮ್ಯಾಚ್‌ ಆಗಿತ್ತು ಎನ್ನುವುದು ಇಡೀ ಜಗತ್ತಿಗೆ ತಿಳಿದಿರುವಂಥದ್ದು. ಶೆಹಜಾದಾ ರಾಹುಲ್‌ಗೆ ಕಿರೀಟವೊಂದೇ ಬಾಕಿ ಇತ್ತು! ಈ “ಏಕ ವ್ಯಕ್ತಿ ಸ್ಪರ್ಧೆ’ಯಲ್ಲಿ ರಾಹುಲ್‌ ಗೆಲ್ಲುವುದನ್ನು ಖಾತ್ರಿ ಪಡಿಸುವುದಕ್ಕಾಗಿ ಆಂತರಿಕ ಚುನಾವಣೆಗಳನ್ನು ತಿರುಚಲಾಗಿತ್ತು. ಇದನ್ನು ನಾನು ಕಳೆದ ಕೆಲವು ದಿನಗಳಿಂದಲೂ ಸಾಕ್ಷಿ ಸಮೇತ ಹೇಳುತ್ತಲೇ ಬರುತ್ತಿದ್ದೇನೆ! ನಿಯೋಗಿಗಳನ್ನು ಬೂತ್‌ಮಟ್ಟದ ಕಾರ್ಯಕರ್ತರಿಂದ ರಹಸ್ಯ ಮತದಾನದ ಮೂಲಕ ಆಯ್ಕೆ ಮಾಡಬೇಕಿತ್ತು.  ಆದರೆ ತಮಗೆ ನಿಷ್ಠರಾಗಿರುವ ನಿಯೋಗಿಗಳನ್ನು ಜೋಪಾನವಾಗಿ ಮೊದಲೇ ಆರಿಸಿಡಲಾಗಿತ್ತು. ಇನ್ನು ಪಕ್ಷದಲ್ಲಿ ಅಧ್ಯಕ್ಷೀಯ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಸಂವಿಧಾನವನ್ನು ಪರಿಪಾಲಿಸಲಾಗಿದೆ ಎನ್ನುವುದನ್ನು ಸೂಚಿಸುವ ಯಾವುದೇ ಪುರಾವೆಗಳನ್ನೂ ಇವರು ಎದುರಿಟ್ಟಿಲ್ಲ. ಈ ನಾಮನಿರ್ದೇಶನ ಪ್ರಕ್ರಿಯೆ ರಾಹುಲ್‌ ವರ್ಸಸ್‌ “ಯಾರೂ ಇಲ್ಲ’ ಎಂದು ಈಗ ಸಾಬೀತಾಗಿರುವುದರಿಂದಾಗಿ ಈ ಸ್ಪರ್ಧೆ ನಗೆನಾಟಕವಾಗಿತ್ತು ಎನ್ನುವ ಮಾತಿಗೆ ನಾನು ರುಜುವಾತಾಗಿದೆ. 

ಸತ್ಯವೇನೆಂದರೆ, ಈ ವಿಚಾರವಾಗಿ ನನ್ನ ಜೊತೆಗೆ ಮಾತನಾಡಿದ ಕೆಲವು ಹಿರಿಯ ನಾಯಕರೂ(ಮನೀಶ್‌ ತಿವಾರಿ, ಸಂದೀಪ್‌ ದೀಕ್ಷಿತ್‌ ಮತ್ತು ಇತರರು) ಕೂಡ, ಇದನ್ನೆಲ್ಲ  “ಕುಟುಂಬದ ಬ್ಯುಸಿನೆಸ್‌’ ಮತ್ತು “ಯಜಮಾನಿಕೆ’ ಎನ್ನುವು ದನ್ನು ಒಪ್ಪಿಕೊಂಡರು. ಕಾಂಗ್ರೆಸ್‌ನಲ್ಲಿ ಈ ರೀತಿಯ ವ್ಯವಸ್ಥೆಯನ್ನು ಪ್ರಶ್ನಿಸಿದರೆ ನಿಮಗೆ ಪಕ್ಷದಿಂದ ಹೊರ ನಡೆಯಲು ಒನ್‌ ವೇ ಟಿಕೆಟ್‌ ಸಿಗುತ್ತದಷ್ಟೆ. ಹಿಂದೆ ಮಣಿ ಶಂಕರ್‌ ಅಯ್ಯರ್‌ “”ಪಕ್ಷದಲ್ಲಿನ ಅತ್ಯುನ್ನತ ಸ್ಥಾನವೇನಿದ್ದರೂ ಕೇವಲ ತಾಯಿ ಮತ್ತು ಮಗನಿಗಷ್ಟೇ ಸಿಗುತ್ತದೆ” ಎಂದಿದ್ದರು. ಈ ಮಾತು ಎಲ್ಲಾ ರಾಜವಂಶಗಳಿಗೂ ಅನ್ವಯವಾಗುವಂಥದ್ದು. 

ನಾನು ಎತ್ತಿದ ಪ್ರಶ್ನೆಗಳಿಗೆ ಸೂಕ್ತ ಪುರಾವೆಗಳೊಂದಿಗೆ ಉತ್ತರಿ ಸುವ ಬದಲು, ಇವರೆಲ್ಲ ನನ್ನ ಮೇಲೆ ದಾಳಿ ನಡೆಸುತ್ತಿದ್ದಾರೆ 
ಮತ್ತು ನಾನು ಕಾಂಗ್ರೆಸ್‌ ಪಕ್ಷದ ಸದಸ್ಯನೇ ಅಲ್ಲ ಎನ್ನುತ್ತಿದ್ದಾರೆ. ಇವರ ಸುಳ್ಳುಗಳೆಲ್ಲ ತರಗೆಲೆಗಳಂತೆ ಬೀಳುತ್ತಿವೆ. ಈಗ ಇವರೆಲ್ಲ 
ನನ್ನ ಮುಂದೆ ಪ್ರಶ್ನೆಯಿಡುತ್ತಿದ್ದಾರೆ- “ಹಾಗಿದ್ದರೆ ರಾಹುಲ್‌  ಗಾಂಧಿ ವಿರುದ್ಧ ನೀನೇಕೆ ನಾಮಪತ್ರ ಸಲ್ಲಿಸಲಿಲ್ಲ?’ ಎನ್ನುವುದು ಇವರ ಪ್ರಶ್ನೆ. ಮೊದಲನೆಯದಾಗಿ ನನಗೆ ಯಾವ ಹುದ್ದೆ ಅಥವಾ ಟಿಕೆಟ್‌ನ ಮೇಲೂ ಆಸಕ್ತಿಯಿರಲಿಲ್ಲ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಪಟ್ಟದರಸನ ಅಸಂವಿಧಾನಿಕ ಆಯ್ಕೆಯನ್ನು ನ್ಯಾಯಸಮ್ಮತವೆಂದು ತೋರಿ ಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಲು ನನಗಿಷ್ಟವಿರಲಿಲ್ಲ! ನಾನು ಪಕ್ಷದಲ್ಲಿ ಸಹಜವೆನ್ನುವಂತೆ ಆಗಿರುವ ಸ್ವಜನಪಕ್ಷಪಾತ ಮತ್ತು ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಇಲ್ಲಿ ಮೆರಿಟ್‌ಗೆ ಮನ್ನಣೆ ಸಿಗುವುದೇ ಅಪರೂಪ. ಇದು ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿಯಾದದ್ದು. 

Advertisement

ಎಲ್ಲಕ್ಕಿಂತ ಅಪಾಯಕಾರಿ ಸಂಗತಿಯೆಂದರೆ, ಯಶವಂತ ಸಿನ್ಹಾ ಮತ್ತು ಅರುಣ್‌ ಶೌರಿ ಅವರ ವಾಕ್‌ ಸ್ವಾತಂತ್ರವನ್ನು ಸಂಭ್ರಮಿ ಸುವವರು ಈಗ ನನ್ನ ವಿಷಯದಲ್ಲಿ ಅಸಹಿಷ್ಣುತೆ ತೋರಿಸುತ್ತಿರು ವುದು!  ಕುಟುಂಬ ರಾಜಕಾರಣವನ್ನು ಅಂತ್ಯಗೊಳಿಸುವ, ಪ್ರಾಮಾ ಣಿಕ ಮತ್ತು ಪಾರದರ್ಶಕ ಚುನಾವಣೆಯನ್ನು ನಡೆಸುವ ವಿಚಾರ ದಲ್ಲಿ ಮಾತನಾಡುವ ಬದಲು ಇವರೆಲ್ಲ ನನ್ನ ಮೇಲೆ ದಾಳಿ ಮಾಡಿದರು!  ಇದಕ್ಕೆ ಹೋಲಿಸಿದರೆ ಪ್ರಧಾನಿ ನರೇಂದ್ರ ಮೋದಿಯವರು ನನ್ನ ವಿಚಾರವಾಗಿ ನಡೆದುಕೊಂಡ ರೀತಿಯನ್ನು  ಹೋಲಿಸಿ ನೋಡಿ…ನಾನು ನಿನ್ನೆ-ಮೊನ್ನೆಯವರೆಗೂ ಅವರ ನೀತಿಗಳನ್ನು ನಿರಂತರವಾಗಿ ಟೀಕಿಸುತ್ತಾ ಬಂದರೂ ಪ್ರಧಾನಿಗಳು ಹೇಗೆ ನನ್ನ ಹೋರಾಟವನ್ನು ಘನತೆಯಿಂದ ಒಪ್ಪಿಕೊಂಡರೋ ಗಮನಿಸಿ. ರಾಹುಲ್‌ರ ಕಾಂಗ್ರೆಸ್‌ “ತುರ್ತುಪರಿಸ್ಥಿತಿಯ ವಂಶವಾಹಿ ಯಿಂದ’ ಪೀಡಿತವಾಗಿದೆ. ಇವರೆಲ್ಲ ಅದ್ಹೇಗೆ ಪ್ರಜಾಪ್ರಭುತ್ವ ಮತ್ತು ಪ್ರಗತಿಪರ ಮೌಲ್ಯಗಳ ಪರವಾಗಿ ನಿಲ್ಲುತ್ತಾರೋ ತಿಳಿಯದು, ಏಕೆಂದರೆ ಈ ತತ್ವಗಳನ್ನು ಆಂತರಿಕವಾಗಿ ಆಚರಿಸುವುದಿಲ್ಲ.

ಈ ನಗೆನಾಟಕದಲ್ಲಿ ಅಭ್ಯರ್ಥಿಯಾಗಿ ನಾಮನಿರ್ದೇಶಿತವಾ ಗುವುದು ನನ್ನ ಮುಂದಿನ ಗುರಿಯಾಗಿರಲೇ ಇಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಇದು ಕಾಂಗ್ರೆಸ್‌ನೊಳಗಿನ ವಂಶ ಪಾರಂಪರ್ಯದ ವಿರುದ್ಧದ ನನ್ನ ಹೋರಾಟ. ನನ್ನಂತೆಯೇ ಯೋಚಿಸುವ, ಆದರೆ ಸದ್ಯಕ್ಕೆ ಮಾತನಾಡದೇ ಸುಮ್ಮನಿರುವ ಅನೇಕ ನಾಯಕರು ಮತ್ತು ಸಾವಿರಾರು ಬೆಂಬಲಿಗರ ಸಹಾಯ ದಿಂದ ಕಾಂಗ್ರೆಸ್‌ ಅನ್ನು ನಾನು “ವಂಶಪಾರಂಪರ್ಯ ಮುಕ್ತ’ ಗೊಳಿಸುತ್ತೇನೆ. ಈಗ ಮಾತನಾಡದ ನಾಯಕರು ಸರಿಯಾದ ಸಮಯ ಬಂದಾಗ ಮಾತನಾಡುತ್ತಾರೆ. ಆ ಸಮಯ ಶೀಘ್ರದಲ್ಲೇ ಬರಲಿದೆ. ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೆ, ಅದಕ್ಕಾಗಿ ದುಡಿ ಯುತ್ತೇನೆಯೇ ಹೊರತು ಯಾವುದೋ ಒಂದು ಕುಟುಂಬಕ್ಕಲ್ಲ. ವಂಶಪರಂಪರೆಯ ಕೌರವರ ವಿರುದ್ಧ ಯುದ್ಧ ಸಾರಿದ ಅರ್ಜುನ ನಂತೆ ನಾನು ಹೋರಾಡುತ್ತೇನೆ. ನನ್ನ ಸಹೋದರ ತೆಹಸೀನ್‌ ಪೂನಾವಾಲಾನ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಆದರೆ ಆತ ನಿಷ್ಠೆಯಿರುವುದು ಒಂದು ಕುಟುಂಬಕ್ಕೆ. ನನ್ನ ನಿಷ್ಠೆಯಿರುವುದು ಯಾವುದೇ ಫ್ಯಾಮಿಲಿ ಹೆಸರಿಲ್ಲದ ಲಕ್ಷಾಂತರ ಜನರಿಗೆ. 

ಕಾಂಗ್ರೆಸ್‌ನ ಅನೇಕಾನೇಕ ಕಾರ್ಯಕರ್ತರು ತಮ್ಮ ಹಕ್ಕು ಕಸಿದುಕೊಳ್ಳಲಾಗಿದೆ(ಹಿಂದೆ ಸರ್ದಾರ್‌ ಪಟೇಲ್‌ರಿಗೆ ಆದಂತೆ) ಮತ್ತು ಅವಮಾನ ಮಾಡಲಾಗಿದೆ ಎಂಬ ಭಾವನೆಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಈ ಕೆಲಸಗಾರರು ರಾಹುಲ್‌ರ ಪಟ್ಟಾಭಿಷೇಕಕ್ಕೆ ಸವಾಲೆಸೆಯಲಿದ್ದಾರೆ.  ಸಮಸ್ಯೆಯನ್ನು ಜನರ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗುವುದರಲ್ಲಿ ನನಗೆ ನಂಬಿಕೆಯಿದೆ. ದೆಹಲಿಯಿಂದ ಅಮೇಠಿಯವರೆಗೆ ಈ ಕೆಲಸವಾಗಲಿದೆ. ಕಳವು ಮಾಡಿದ ಸಿಂಹಾಸನವನ್ನು ಆದಷ್ಟು ಬೇಗನೆ ಬಿಟ್ಟುಕೊಡಬೇಕಾಗುತ್ತದೆ.

ಶೆಹಝಾದ್‌ ಪೂನಾವಾಲಾ ಮಹಾರಾಷ್ಟ್ರ ಕಾಂಗ್ರೆಸ್‌ ನಾಯಕ 

Advertisement

Udayavani is now on Telegram. Click here to join our channel and stay updated with the latest news.

Next