Advertisement
ಸಕಲ ಮರಾಠಾ ಸಮಾಜ ವತಿಯಿಂದ ನಗರದ ವಿದ್ಯಾ ಮಂದಿರ ಪ್ರೌಢಶಾಲೆ ಆವರಣದಲ್ಲಿ ರವಿವಾರ ನಡೆದ ಗುರುವಂದನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
Related Articles
Advertisement
ಮರಾಠಾ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ಜಿ. ಮುಳೆ ಮಾತನಾಡಿ, ಕರ್ನಾಟಕ ಸರ್ಕಾರ ಮರಾಠಾ ಅಭಿವೃದ್ಧಿ ನಿಗಮದಲ್ಲಿ 50 ಕೋಟಿ ರೂ. ಮೀಸಲಿಟ್ಟಿದೆ. ಇದರಲ್ಲಿ 20 ಕೋಟಿ ರೂ. ಗಂಗಾ ಕಲ್ಯಾಣ ಯೋಜನೆಗೆ ಬಳಸುತ್ತಿದ್ದೇವೆ. ಇದಕ್ಕೆ ಜೀಜಾವು ಜಲ ಭಾಗ್ಯ ಎಂದು ನಾಮಕರಣ ಮಾಡಿದ್ದೇವೆ. ಕೆಳದಿ ಚನ್ನಮ್ಮ ಸುರಭಿ ಯೋಜನೆಯಡಿ ಮಹಿಳೆಯರಿಗೆ 500 ಆಕಳು ನೀಡುವುದು, ನಿರುದ್ಯೋಗಿಗಳಿಗೆ ಶ್ರೀ ಶಹಾಜಿ ರಾಜೆ ಸ್ವ ಉದ್ಯೋಗ ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.
ಖಾನಾಪುರ ಶಾಸಕಿ ಡಾ| ಅಂಜಲಿ ನಿಂಬಾಳಕರ ಮಾತನಾಡಿ, ಮರಾಠಾ ಸಮಾಜ ಎಲ್ಲೆಡೆ ನಿರ್ಲಕ್ಷéಕ್ಕೆ ಒಳಗಾಗಿದೆ. ಸಣ್ಣ ಸಣ್ಣ ಗುಂಪುಗಳಾಗಿ ವಿಭಜನೆಯಾಗಿದೆ. ಇಡೀ ಮರಾಠಾ ಸಮಾಜ ಒಗ್ಗೂಡಿಸುವ ಅಗತ್ಯವಿದೆ. ಸಮಾಜದ ಮಕ್ಕಳ ಶಿಕ್ಷಣಕ್ಕಾಗಿ ಧಾರವಾಡ ಸಮಾವೇಶದಲ್ಲಿ ಒತ್ತಾಯಿಸಿದ್ದೆ. ಬಳಿಕ ಮರಾಠಾ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆ ಆಯಿತು. ಈಗಿರುವ 50 ಕೋಟಿ ರೂ. ಯಾವುದಕ್ಕೂ ಸಾಲುವುದಿಲ್ಲ. ಶೈಕ್ಷಣಿಕ ದೃಷ್ಟಿಯಿಂದ ಹೆಚ್ಚಿನ ಅನುದಾನ ಅಗತ್ಯವಿದೆ ಎಂದು ಆಗ್ರಹಿಸಿದರು.
ಕಾರ್ಯಕ್ರಮದ ಆಯೋಜಕ ಕಿರಣ ಜಾಧವ ಮಾತನಾಡಿ, ಮರಾಠಾ ಸಮಾಜವನ್ನು ಒಗ್ಗೂಡಿಸುವ ಸಲುವಾಗಿ ಸಕಲ ಮರಾಠಾ ಸಮಾಜ ಸ್ಥಾಪನೆ ಮಾಡಿ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾಜದ ಏಳ್ಗೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಶ್ರೀರಾಮಸೇನಾ ಹಿಂದೂಸ್ಥಾನ ಅಧ್ಯಕ್ಷ ರಮಾಕಾಂತ ಕೊಂಡೂಸ್ಕರ ಮಾತನಾಡಿ, ಮರಾಠಾ ಸಮಾಜದವರು ಒಂದಾಗಿ ಶಕ್ತಿ ಪ್ರದರ್ಶಿಸಬೇಕು. ನಮ್ಮ ಸಮಾಜದವರ ಮೇಲೆ ಅನ್ಯಾಯ ಮಾಡಿದವರಿಗೆ ತಕ್ಕ ಉತ್ತರ ನೀಡುತ್ತೇವೆ. ಅತ್ಯಾಚಾರ ಎಸಗಿದರೆ ಅವರಿಗೆ ಶಿವಾಜಿ ಮಹಾರಾಜರ ತಲವಾರ್ ತೋರಿಸುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಗಡಹಿಂಗ್ಲಜ್ ರಾಮನಾಥ ಗಿರಿ ಮಠದ ಭಗವಾನಗಿರಿ ಮಹಾರಾಜ, ರುದ್ರ ಕೇಸರಿ ಮಠದ ಸ್ವಾಮೀಜಿ, ಪಾಯೋನಿಯರ್ ಬ್ಯಾಂಕ್ ಉಪಾಧ್ಯಕ್ಷ ರಣಜಿತ್ ಚವ್ಹಾಣ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಶಾಮಸುಂದರ ಗಾಯಕವಾಡ, ನಿಪ್ಪಾಣಿಕರ ಸರ್ಕಾರ, ಶಿವಾಜಿ ಸುಂಠಕರ, ಅನಂತ ಲಾಡ, ರಮೇಶ ಗೋರಲ್ ಸೇರಿದಂತೆ ಇತರರು ಇದ್ದರು.
70 ಲಕ್ಷ ಮರಾಠಾ ಸಮಾಜ ಬಾಂಧವರು ಮರಾಠಿ ಜತೆಗೆ ಕನ್ನಡ ಭಾಷೆಯನ್ನೂ ಮಾತಾಡುತ್ತೇವೆ. ಸಮಾಜ ಒಡೆದು ಹೋಗಿದ್ದು, ಅದನ್ನು ಒಗ್ಗೂಡಿಸುವ ಕೆಲಸ ಮಾಡಬೇಕಿದೆ. ಏಕ ಮರಾಠಾ, ಲಾಖ್ ಮರಾಠಾ ಹೋರಾಟದಲ್ಲಿ ನಾವೆಲ್ಲರೂ ಕೂಡಿ ಒಕ್ಕಟ್ಟು ಪ್ರದರ್ಶಿಸಿದ್ದು ಮರೆತಿಲ್ಲ. ಇನ್ನೂ ಕಾಲ ಮಿಂಚಿಲ್ಲ, ಒಂದಾಗಬೇಕಿದೆ. –ಅಂಜಲಿ ನಿಂಬಾಳಕರ, ಶಾಸಕರು, ಖಾನಾಪುರ