Advertisement

ಅಶ್ವಾರೂಢ ಬಸವಣ್ಣ-ರಾಯಣ್ಣ ಪ್ರತಿಮೆ ಲೋಕಾರ್ಪಣೆ

05:18 PM May 04, 2022 | Team Udayavani |

ಮೂಡಲಗಿ: ಭಕ್ತಿಯ ಮೂಲಕ ಮನುಕುಲ ಉದ್ಧರಿಸಿದ, ವೀರ ಶೂರತನದಿಂದ ದೇಶಾಭಿಮಾನ ಮೆರೆದ ಬಸವಣ್ಣ-ರಾಯಣ್ಣ ಮಾನವೀಯತೆಯ ಪ್ರತೀಕ ಎಂದು ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.

Advertisement

ಸಮೀಪದ ರಡ್ಡೇರಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಅಶ್ವಾರೂಢ ಬಸವೇಶ್ವರ ಮತ್ತು ಸಂಗೊಳ್ಳಿರಾಯಣ್ಣರ ಕಂಚಿನ ಪ್ರತಿಮೆ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಭಕ್ತಿಯ ಮೂಲಕ ಬಸವಣ್ಣ ಮನುಕುಲದ ಉದ್ಧಾರಕ್ಕೆ, ವೀರತನದಿಂದ ಸಂಗೊಳ್ಳಿ ರಾಯಣ್ಣ ಸ್ವಾಭಿಮಾನದ ಶಕ್ತಿಯಾಗಿ ಯುವ ಸಮುದಾಯಕ್ಕೆ ಆದರ್ಶವಾಗಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ತನ್ನ ದೇಶ ಮತ್ತು ಧರ್ಮ ಮುಖ್ಯ. ದೇಶ-ಧರ್ಮದ ಉಳಿವಿಗೆ ದುಡಿಯಬೇಕೆಂದು ಹೇಳಿದರು.

ಹುಲಸೂರದ ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ಪ್ರೀತಿ-ಪ್ರೇಮದಿಂದ ಬದುಕುವ ಕಲೆಯನ್ನು ಮನುಜರು ಕಲಿಯಬೇಕು. ಸಾಮರಸ್ಯ ತೆಯೇ ಜೀವನದ ಮಂತ್ರವಾಗಬೇಕು ಎಂದರು. ಉಪ್ಪಿನ ಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ, ಕೌಜಲಗಿ ಜಿಪಂ ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ, ಯುವ ಮುಖಂಡರಾದ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ರಾಹುಲ ಜಾರಕಿಹೊಳಿ ಮಾತನಾಡಿದರು. ಕಪರಟ್ಟಿ ಕಳ್ಳಿಗುದ್ದಿಯ ಬಸವರಾಜ ಹಿರೇಮಠ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಪೂರ್ವದಲ್ಲಿ ನಂದಗಡದಿಂದ ಬಂದ ಸಂಗೊಳ್ಳಿ ರಾಯಣ್ಣ ದಿವ್ಯಜ್ಯೋತಿಯನ್ನು ಗ್ರಾಮಸ್ಥರು ಸ್ವಾಗತಿಸಿ ಕೊಂಡರು.

ಇದೇ ಸಂದರ್ಭದಲ್ಲಿ ಸ್ವಾಮೀಜಿಯವರಿಂದ ಬಸವೇಶ್ವರ ಸೊಸೈಟಿಯನ್ನು ಸಾಂಕೇತಿಕವಾಗಿ ಉದ್ಘಾಟಿಸಲಾಯಿತು. ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ದಾನಿಗಳನ್ನು, ಕಾರ್ಯಕರ್ತರನ್ನು, ಪತ್ರಕರ್ತರನ್ನು ಸ್ವಾಮೀಜಿ ಸತ್ಕರಿಸಿದರು.

Advertisement

ಪ್ರಭಾ ಶುಗರ್‌ ಉಪಾಧ್ಯಕ್ಷ ರಾಮಣ್ಣ ಮಹಾರಡ್ಡಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಭಾಷ ಪಾಟೀಲ, ರವಿ ಪರುಶೆಟ್ಟಿ, ಶಿವಾನಂದ ಲೋಕಣ್ಣವರ, ಶಿವು ಪಾಟೀಲ, ಮಹೇಶ ಪಟ್ಟಣಶೆಟ್ಟಿ, ಕರೆಪ್ಪ ಬಿಜಗುಪ್ಪಿ, ಅಡಿವೆಪ್ಪ ಅಳಗೋಡಿ,ಬಾಳಪ್ಪ ಗೌಡರ, ಬಸವರಾಜ ನಾಯ್ಕರ, ಶಿವಬಸಯ್ಯ ಹಿರೇಮಠ, ಬರಮಪ್ಪ ಪಾಶ್ಚಾಪುರ ಶಿವಲಿಂಗ ಕುದರಿ, ಮಹಾದೇವ ಮಳಲಿ, ಮುತ್ತಪ್ಪ ಬಿಜಗುಪ್ಪಿ ಹಾಗೂ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next