Advertisement
ಪ್ರತಿಮೆಯ ಎತ್ತರ- 108 ಅಡಿ
ಇಂದೋರ್‌ನಿಂದ 80 ಕಿ.ಮೀ. ದೂರದಲ್ಲಿರುವ ಓಂಕಾರೇಶ್ವರವನ್ನು ಅದ್ವೆ„ತ ವೇದಾಂತ ಸಿದ್ಧಾಂತದ ತವರಾಗಿ ಮಾರ್ಪಾಟು ಮಾಡಿ, ಸುಂದರ ಅಧ್ಯಾತ್ಮ ಕೇಂದ್ರವಾಗಿ ರೂಪುಗೊಳಿಸುವುದೇ ಸರ್ಕಾರದ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಮಂಧಾತ ಪರ್ವತದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆ ನಿರ್ಮಿಸಲಾಗಿದೆ. ಈ ಪ್ರತಿಮೆಯಲ್ಲಿ 12 ವರ್ಷದ ಬಾಲಕನ ರೂಪದಲ್ಲಿ ಶಂಕರಾಚಾರ್ಯರು ಕಂಗೊಳಿಸಲಿದ್ದಾರೆ. ಇದನ್ನು “ಏಕಾತ್ಮತಾ ಕೀ ಪ್ರತಿಮಾ’ (ಏಕತ್ವದ ಪ್ರತಿಮೆ) ಎಂದು ಹೆಸರಿಸಲಾಗಿದೆ. ಓಂಕಾರೇಶ್ವರದ ವೈಶಿಷ್ಟ್ಯವೇನು?
12 ಜ್ಯೋತಿರ್ಲಿಂಗಗಳಲ್ಲಿ ಓಂಕಾರೇಶ್ವರ ಕೂಡ ಒಂದು. ಇಲ್ಲಿಗೆ ಪ್ರತಿವರ್ಷ ಕೋಟ್ಯಂತರ ಯಾತ್ರಿಗಳು ಭೇಟಿ ನೀಡುತ್ತಾರೆ. ಇಲ್ಲಿನ ನರ್ಮದಾ ನದಿಗೆ ಕಟ್ಟಲಾದ 270 ಅಡಿಯ ತೇಲುವ ಸೇತುವೆಯು ಓಂಕಾರೇಶ್ವರದ ಆಕರ್ಷಣೆಯನ್ನು ಇಮ್ಮಡಿಗೊಳಿಸಿದೆ. ಹೆಣ್ಣು ನವಿಲಿನ ಆಕಾರದಲ್ಲಿ ನಿರ್ಮಿಸಲಾದ ಮೂರು ಮಹಡಿಯ ಗೌರಿ ಸೋಮನಾಥ ದೇಗುಲವೂ ಓಂಕಾರೇಶ್ವರಕ್ಕೆ ಮೆರುಗು ತಂದುಕೊಟ್ಟಿದೆ.
Related Articles
ಆದಿಗುರು ಶಂಕರಾಚಾರ್ಯರ ಸಾಧನ ಸ್ಥಳವಾದ ಓಂಕಾರೇಶ್ವರದ ಮಂಧಾತ ಪರ್ವತದಲ್ಲಿ ದಕ್ಷಿಣಾಮ್ನಯ ಶೃಂಗೇರಿ ಶಾರದಾ ಪೀಠದ ಮಾರ್ಗದರ್ಶನದಲ್ಲಿ ಮಹರ್ಷಿ ಸಾಂದೀಪಾನಿ ರಾಷ್ಟ್ರೀಯ ವೇದ ಪ್ರತಿಷ್ಠಾನದ ಮೂಲಕ ದೇಶದ 300 ಖ್ಯಾತ ವೈದಿಕ ಅರ್ಚಕರು ವೈದಿಕ ರೀತಿಯಲ್ಲಿ ಪೂಜೆ ಮತ್ತು 21 ಕುಂಡೀಯ ಹವನವನ್ನು ನಡೆಸಿದ್ದಾರೆ. ಸೋಮವಾರ ನಡೆಯುವ ಮೂರ್ತಿಯ ಅನಾವರಣ ಹಾಗೂ ಅದ್ವೆ„ತ ಲೋಕದ ಭೂಮಿ ಪೂಜೆ ಕೂಡ ಶೃಂಗೇರಿ ಶಾರದಾ ಪೀಠದ ಮಾರ್ಗದರ್ಶನದಲ್ಲೇ ನಡೆಯಲಿದೆ.
Advertisement
ಏನೇನಿರುತ್ತದೆ?– ಆದಿ ಶಂಕರಾಚಾರ್ಯರ ಪ್ರತಿಮೆ
– ಅದ್ವೆ„ತ ಲೋಕ ಮ್ಯೂಸಿಯಂ
– ಅಂತಾರಾಷ್ಟ್ರೀಯ ವೇದಾಂತ ಸಂಸ್ತೆ
– 36 ಎಕರೆ ಪ್ರದೇಶದಲ್ಲಿ ಅದ್ವೆ„ತ ಅರಣ್ಯ