Advertisement

ಜನವರಿ 24 ರಂದು ರಾಜ್ಯಾದ್ಯಂತ ಕೇಬಲ್‌ ಸೇವೆ ಸ್ಥಗಿತ 

03:56 PM Jan 16, 2019 | |

ಬೆಂಗಳೂರು: ಜನವರಿ 24 ರಂದು ರಾಜ್ಯಾದ್ಯಂತ ಕೇಬಲ್‌ ಟಿವಿ ಸ್ಥಗಿತಗೊಳಿಸಲು ಕೇಬಲ್‌ ಆಪರೇಟರ್‌ಗಳು ನಿರ್ಧರಿಸಿದ್ದಾರೆ. ಟ್ರಾಯ್‌ ಹೊಸ ದರ ನಿಗದಿ ನಿಯಮವನ್ನು ಖಂಡಿಸಿ ರಾಜ್ಯ ಕೇಬಲ್‌ ಆಪರೇಟರ್ಸ್‌ ಅಸೋಸಿಯೇಷನ್‌ ಈ ನಿರ್ಧಾರ ಕೈಗೊಂಡಿದೆ.

Advertisement

ಖಾಸಗಿ ಹೊಟೇಲ್‌ನಲ್ಲಿ ಸಭೆ ಸೇರಿದ ಅಸೋಸಿಯೇಷನ್‌ ರಾಜ್ಯಾಧ್ಯಕ್ಷ ಪ್ಯಾಟ್ರಿಕ್‌ ರಾಜು ಅವರು ನಾವು 24 ರಂದು ಬೆಳಗ್ಗೆ 6 ರಿಂದ ಸಂಜೆ 10 ಗಂಟೆಯ ವರೆಗೆ ಕೆಬಲ್‌ ಸ್ಥಗಿತಗೊಳಿಸಲು ಒಮ್ಮತದ ತೀರ್ಮಾನ ಕೈಗೊಂಡಿದ್ದೇವೆ ಎಂದರು. 

ಏನಿದು ಹೊಸ ಟ್ರಾಯ್‌ ನಿಯಮ?
ಜಿಎಸ್‌ಟಿ ಸೇರಿದಂತೆ ಮಾಸಿಕ 153.40 ರೂ.ಗೆ ಜನರು 100 ಚಾನೆಲ್‌ಗ‌ಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಈ 100 ಚಾನೆಲ್‌ಗ‌ಳಲ್ಲಿ ಪಾವತಿ ಚಾನೆಲ್‌ ಗಳೂ ಇರಬಹುದು. ಆದರೆ ಆಯ್ಕೆ ಮಾಡಿದ ಚಾನೆಲ್‌ಗ‌ಳ ದರವು 130 ರೂ. ಅನ್ನು ಮೀರುವಂತಿಲ್ಲ. ಅಂದರೆ 13 ರೂ. ಬೆಲೆಯ 10 ಚಾನೆಲ್‌ಗ‌ಳನ್ನಷ್ಟೇ ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದು.

ಇದೇ 130 ರೂ.ಗಳಲ್ಲಿ ಗ್ರಾಹ ಕರು ತಮಗೆ ಇಷ್ಟವಾದ ಪ್ಯಾಕ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಎಚ್‌ಡಿ ಚಾನೆಲ್‌ಗ‌ಳ ಬಗ್ಗೆ ಟ್ರಾಯ್‌ ತನ್ನ ಪ್ರಕಟಣೆಯಲ್ಲಿ ಯಾವುದೇ ಮಾಹಿತಿ ನೀಡಿಲ್ಲ. ಒಂದು ಮೂಲದ ಪ್ರಕಾರ ಒಂದು ಎಚ್‌ಡಿ ಚಾನೆಲ್‌ ಅನ್ನು ಎರಡು ಎಸ್‌ಡಿ ಚಾನೆಲ್‌ ಎಂದು ಸಂಖ್ಯೆಯ
ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ.

ಆದರೆ ಇನ್ನೊಂದು ಮೂಲದ ಪ್ರಕಾರ ಈ 130 ರೂ. ಒಳಗೆ ಕೇವಲ ಎಸ್‌ಡಿ ಚಾನೆಲ್‌ ಮಾತ್ರ ಆಯ್ಕೆ ಮಾಡಿ ಕೊಳ್ಳಬಹುದಾಗಿದ್ದು, ಎಚ್‌ಡಿ ಚಾನೆಲ್‌ಗೆ ಹೆಚ್ಚುವರಿ ಪಾವತಿ ಮಾಡಬೇಕಿರುತ್ತದೆ. ಸದ್ಯ ಕನ್ನಡದ ಎಚ್‌ಡಿ ಚಾನೆಲ್‌ ಗಳನ್ನು ಹೊರತುಪಡಿಸಿ ಎಲ್ಲ ಪಾವತಿ ಚಾನೆಲ್‌ಗ‌ಳನ್ನು ಲೆಕ್ಕ ಹಾಕಿದರೆ 137 ರೂ. ಆಗಲಿದ್ದು, 15 ಚಾನೆಲ್‌ಗ‌ಳು ಲಭ್ಯವಾಗಲಿವೆ. ಉಳಿದ 85 ಉಚಿತ ಚಾನೆಲ್‌ಗ‌ಳನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next