Advertisement

ರಾಜ್ಯಕ್ಕೆ ಒಕ್ಕಲಿಗರ ಕೊಡುಗೆ ಅಪಾರ

12:10 PM Jul 26, 2017 | |

ಎಚ್‌.ಡಿ.ಕೋಟೆ: ಇಂದು ದೇಶದ ಖಜಾನೆ ತುಂಬಿಸುವಲ್ಲಿ ಬೆಂಗಳೂರು 2ನೇ ಸ್ಥಾನದಲ್ಲಿದ್ದು, ಇಷ್ಟು ಮಟ್ಟಕ್ಕೆ ಬೆಂಗಳೂರು ಬೆಳೆಯಲು ನಾಡಪ್ರಭು ಕೆಂಪೇಗೌಡರ ತ್ಯಾಗ ಮತ್ತು ಹಾಕಿರುವ ಭದ್ರ ಭೂನಾದಿಯೇ ಕಾರಣವಾಗಿದ್ದು, ರಾಜ್ಯಕ್ಕೆ ಒಕ್ಕಲಿಗರ ಕೊಡುಗೆ ಅಪಾರ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಪಟ್ಟಣದಲ್ಲಿ ಡಾ.ಬಿ.ಆರ್‌.ಸಮುದಾಯ ಭವನ ಮುಂಭಾಗದಲ್ಲಿ ತಾಲೂಕು ಆಡಳಿತ ಸಮಿತಿ ಮತ್ತು ತಾ. ಒಕ್ಕಲಿಗರ ಸಂಘದಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

Advertisement

ದೇಶದಲ್ಲಿ ಹೆಚ್ಚಿನ ತೆರಿಗೆ ಸಂದಾಯವಾಗುತ್ತಿರುವ ಶ್ರೇಯ ಬೆಂಗಳೂರಿನದ್ದಾಗಿದೆ. ಬೆಂಗಳೂರು ನಿರ್ಮಾಣಕ್ಕೆ ಒಕ್ಕಲಿಗ ಸಮುದಾಯದ ಕೆಂಪೇಗೌಡರಂತೆ ಪ್ರಜಾವ್ಯವಸ್ಥೆ ಬಂದ ನಂತರ ಮಾಜಿ ಮುಖ್ಯಮಂತ್ರಿಗಳಾದ ಕೆಂಗಲ್‌ ಹನುಮಂತಯ್ಯ, ಎಚ್‌.ಡಿ.ದೇವೆಗೌಡ, ಎಸ್‌.ಎಂ.ಕೃಷ್ಣ ರಂತಹ ಹಲವು ನಾಯಕರ ಪರಿಶ್ರಮದಿಂದ ಇಂದು ಬೆಂಗಳೂರು ಬೃಹದಾಕಾರವಾಗಿದೆ ಎಂದರು.

ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಮಾತನಾಡಿ, ನಾವು ಯಾರು ಜಾತಿವಾದಿಗಳಲ್ಲ ಬೆಂಗಳೂರನ್ನು ಕಟ್ಟಿದ ಕೆಂಪೇಗೌಡರು ಕೂಡ ಜಾತಿಯಿಂದ ಗುರುತಿಸಿಕೊಂಡವರಲ್ಲ ಅವರು ಎಲ್ಲ ಸಮಾಜದವರ ಒಳಿತಿಗಾಗಿ ತ್ಯಾಗ ಬಲಿದಾನ ಮಾಡಿದ ಮಹಾಪುರುಷ, ಅವರ ಆದರ್ಶ ಆಚಾರ ವಿಚಾರ ನಡೆದು ಬಂದ ದಾರಿಯ ಕಲ್ಪನೆ ತಿಳಿಸುವ ನಿಟ್ಟಿನಲ್ಲಿ ಸರ್ಕಾರ ಕೆಂಪೇಗೌಡರ ಜಯಂತಿ ಆಚರಿಸಲು ನಿರ್ಧಾರಿಸಲಾಗಿದೆ ಎಂದು ಹೇಳಿದರು.

ಭವನ ನಿರ್ಮಾಣಕ್ಕೆ ಅನುದಾನ ಭರವಸೆ ನೀಡಿದ ಗಣ್ಯರು: ತಾಲೂಕು ಒಕ್ಕಲಿಗರ ಸಮುದಾಯ ಭವನ ನಿರ್ಮಾಣಕ್ಕೆ ವೇದಿಕೆಯಲ್ಲಿದ್ದ ಗಣ್ಯರು ನೀಡುವುದಾಗಿ ಹೇಳಿದ ಅನುದಾನಗಳು, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಇಂಧನ ಸಚಿವ ಡಿ.ಕೆ.ಶಿವಕುಮಾರ್‌, ಶಾಸಕರಾದ ಎಸ್‌.ಚಿಕ್ಕಮಾದು, ಸಾ.ರಾ.ಮಹೇಶ್‌, ತಲಾ 10 ಲಕ್ಷ ಮತ್ತು ವಿಧಾನ ಪರಿಷತ್‌ ಸದಸ್ಯ ಶ್ರೀಕಂಠಯ್ಯ ನೀಡುವುದಾಗಿ ತಿಳಿಸಿದರು.

ಪ್ರತಿಭಾ ಪುರಸ್ಕಾರ: ಸಮಾಜದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ  ಪಟ್ಟಣದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಿಂದ ವಿವಿಧ ಕಲಾತಂಡಗಳು, ಸ್ತಬ್ದ ಚಿತ್ರಗಳು, ಸತ್ತಗೆ, ನಂದಿಕಂಬ ಜೊತೆಗೆ ಬೆಳ್ಳಿ ರಥದಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

Advertisement

ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಶಾಸಕ ಎಸ್‌.ಚಿಕ್ಕಮಾದು, ಮಾನಸ ಗಂಗೋತ್ರಿಯ ಪೊ›.ಸಿ.ನಾಗಣ್ಣ ,  ಶಾಸಕರಾದ ವಾಸು, ಸಾ.ರಾ.ಮಹೇಶ್‌, ವಿಧಾನ ಪರಿಷತ್‌ ಸದಸ್ಯ ಶ್ರೀಕಂಠೇಗೌಡ, ಮಾಜಿ ಸಚಿವ ಎಂ.ಶಿವಣ್ಣ, ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್‌.ನರಸಿಂಹೇಗೌಡ, ಎಂ.ಸಿ.ದೊಡ್ಡನಾಯಕ, ಸಿ.ವಿ.ನಾಗರಾಜು, ಜಿಪಂ ಅಧ್ಯಕ್ಷೆ ನಯಿಮಾಸುಲ್ತಾನ್‌,

-ಸದಸ್ಯರಾದ ಶ್ರೀಕೃಷ್ಣ, ಎಂ.ಪಿ.ನಾಗರಾಜು, ಪರಿಮಳಾ, ನಂದಿನಿ, ತಾಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ಶಂಭೇಗೌಡ, ಮೂರ್ತಿ, ಸದಸ್ಯರಾದ ಗಿರಿಗೌಡ, ಟಿ.ವೆಂಕಟೇಶ್‌, ನಂಜೇಗೌಡ, ಗೀತಾ ವಿಜಯಲಕ್ಷ್ಮೀ, ಪುರಸಭೆ ಅಧ್ಯಕ್ಷೆ ಮಂಜುಳಾ ಗೋವಿಂದಚಾರಿ, ರಾಜಣ್ಣ, ಎಪಿಎಂಸಿ ಉಪಾಧ್ಯಕ್ಷ ಮಹೇಶ್‌, ಸದಸ್ಯರಾದ ಹೂ.ಕೆ. ಮಹೇಂದ್ರ, ಬೊಪ್ಪನಹಳ್ಳಿ ಭಾಸ್ಕರ್‌, ಚಿಕ್ಕಕೆರೆಯೂರು ಮಂಜು, ತಾಲೂಕು ಜೆಡಿಎಸ್‌ ಅಧ್ಯಕ್ಷ ಸುರೇಂದ್ರ ಡಿ.ಗೌಡ ಇತರರು ಇದ್ದರು.

ಅಭಿಮಾನಿಗಳಿಂದ ಸನ್ಮಾನ: ವೇದಿಕೆಯಲ್ಲಿ ಅನೇಕ ಗಣ್ಯರು ಮತ್ತು ಸ್ವಾಮೀಜಿಗಳು ಮಾತನಾಡುತ್ತಿದ್ದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು, ಮುಖಂಡರು ಮತ್ತು ಅಭಿಮಾನಿಗಳು ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್‌ ಅವರಿಗೆ ಸನ್ಮಾನ ಮಾಡಲು ಮುಗಿಲು ಬಿದ್ದು, ವೇದಿಕೆಯಲ್ಲಿ ಗದ್ದಲವುಂಟಾಗಿ ಪೊಲೀಸರು ಮತ್ತು ಸಂಘದ ಮುಖಂಡರು ನಿಯಂತ್ರಿಸಲು ಹರಸಹಾಸಪಟ್ಟರು.

ಪ್ರತಿಯೊಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ನಿಮಗೇ ಎಂದಾದರೂ ಸಮಸ್ಯೆಯಾದಲ್ಲಿ ನಮ್ಮ ಮನೆ ಬಾಗಿಲು ದಿನದ 24 ಗಂಟೆಯೂ ತೆರೆದಿರುತ್ತದೆ, ಅದು ನಿಮ್ಮ ಮನೆ ಇದ್ದಂತೆ.
-ಹೆಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next