Advertisement

ರಾಜ್ಯದ ಮೂವರಿಗೆ ಬಾಲ, ಯುವ ಸಾಹಿತ್ಯ ಅಕಾಡೆಮಿ ಪುರಸ್ಕಾರ

11:41 PM Jun 14, 2019 | Lakshmi GovindaRaj |

ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯು ಕರ್ನಾಟಕದ ಮೂವರು ಸೇರಿ ಒಟ್ಟು 45 ಸಾಹಿತಿಗಳಿಗೆ ಬಾಲ ಹಾಗೂ ಯುವ ಪುರಸ್ಕಾರವನ್ನು ಘೋಷಿಸಿದೆ. ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ನೇತೃತ್ವದಲ್ಲಿನ ಸಮಿತಿಯು ಅಗರ್ತಲಾದಲ್ಲಿ ಪುರಸ್ಕೃತರನ್ನು ಘೋಷಿಸಿದೆ.

Advertisement

ಬೇರು ಕಾದಂಬರಿಗಾಗಿ ಶ್ರೀಧರ ಬನವಾಸಿ ಜಿ.ಸಿ ಅವರಿಗೆ ಯುವ ಪುರಸ್ಕಾರ ಲಭಿಸಿದೆ. ಬಾಲ ಸಾಹಿತ್ಯ ಪುರಸ್ಕಾರವನ್ನು “ಕಾಡು ಕನಸಿನ ಬೀದಿಗೆ’ ಕಾದಂಬರಿಗಾಗಿ ಚಂದ್ರಕಾಂತ ಕರದಳ್ಳಿ ಅವರಿಗೆ ನೀಡಲಾಗಿದೆ. ಅಲ್ಲದೆ ಇಂಗ್ಲಿಷ್‌ ವಿಭಾಗದಲ್ಲಿ ಕರ್ನಾಟಕದ ದೇವಿಕಾ ಕಾರಿಯಪ್ಪ ಅವರಿಗೆ ಪುರಸ್ಕಾರ ಲಭಿಸಿದೆ.

ಇವರ ಇಂಡಿಯಾ ಥ್ರೂ ಆರ್ಕಿಯಾಲಜಿ: ಎಕ್ಸ್‌ಕವೇಟಿಂಗ್‌ ಹಿಸ್ಟರಿ ಎಂಬ ಇತಿಹಾಸ ಕೃತಿಗೆ ಪುರಸ್ಕರಿಸಲಾಗಿದೆ. ಪ್ರಶಸ್ತಿಯು 50 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಬಾಲ ಸಾಹಿತ್ಯ ಪುರಸ್ಕಾರವನ್ನು ಮಕ್ಕಳ ದಿನಾಚರಣೆಯಂದು ಪ್ರದಾನ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next