Advertisement

ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಟೀಕೆ ಸಲ್ಲ

11:19 AM Feb 25, 2018 | Team Udayavani |

ಆಳಂದ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವ ರಾಜ್ಯ ಸರ್ಕಾರ ಬಡವರು, ಹಿಂದುಳಿದ, ಮಕ್ಕಳು, ಮಹಿಳೆಯರಿಗಾಗಿ ಜಾರಿಗೆ ತಂದ ಹಲವು ಜನಪರ ಯೋಜನೆಗಳ ಬಗ್ಗೆ ಪ್ರತಿಪಕ್ಷಗಳ ಮುಖಂಡರು ವಿನಾಕಾರಣ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದು ಶಾಸಕ ಬಿ.ಆರ್‌.ಪಾಟೀಲ ಹೇಳಿದರು.

Advertisement

ಪಟ್ಟಣದ ಎಪಿಎಂಸಿ ನಿವೇಶನದಲ್ಲಿ ಶನಿವಾರ ಆಹಾರ ಮತ್ತು ನಾಗರಿಕ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡ ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯಲ್ಲಿ ಆಯ್ಕೆಯಾದ ಕ್ಷೇತ್ರದ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಪ್ರಮಾಣ ಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

ಗ್ರಾಮೀಣ ಭಾಗದ ಬಡ ಮಹಿಳೆಯರಿಗೆ ಹೊಗೆ ಮುಕ್ತ ಅಡುಗೆ ಮಾಡಲು ಅನಿಲ ಭಾಗ್ಯ ಯೋಜನೆ ಜಾರಿಗೆ ತಂದು ಪ್ರತಿಯೊಂದು ಕುಟುಂಬಕ್ಕೆ 4040 ರೂ. ವೆಚ್ಚದಲ್ಲಿ ಒಲೆ, ಸಿಲಿಂಡ್‌ರ ಒದಗಿಸಲಾಗುತ್ತಿದೆ. ಇವುಗಳ ಲಾಭ ಪಡೆಯಬೇಕು ಎಂದು ಹೇಳಿದರು.

ಕ್ಷೇತ್ರದಲ್ಲಿ ಆಹಾರ ಮತ್ತು ಅರಣ್ಯ ಇಲಾಖೆಯಿಂದ ಒಟ್ಟು 10766 ಜನ ಫಲಾನುಭವಿಗಳ ಪೈಕಿ ತಲಾ 4400 ರೂ.
ವೆಚ್ಚದಲ್ಲಿ ಒಟ್ಟು 4,22,826,40 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಬಿಪಿಎಲ್‌ ಹೊಂದಿರುವ ಫಲಾನುಭವಿಗಳು ಅನಿಲಭಾಗ್ಯ ಯೋಜನೆ ವಂಚಿತರಾಗಿದ್ದರೆ ಅರ್ಜಿ ಸಲ್ಲಿಸಬೇಕು. ಹೊಸ ಬಿಪಿಎಲ್‌ ಕಾರ್ಡ್‌ದಾರಿಗೂ ಸೌಲಭ್ಯ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ಬಡವರು ಅನ್ನ, ಬಟ್ಟೆ, ಮನೆ ಇಲ್ಲದೆ ಸಂಕಷ್ಟದಲ್ಲಿ ಜೀವನ ಕಳೆಯುತ್ತಿರುವುದು ಮನಗಂಡು ಮುಖ್ಯಮಂತ್ರಿಗಳು ಸಾಮಾಜಿಕ ನ್ಯಾಯದಡಿ ಯೋಜನೆಗಳು ಜಾರಿ ತಂದು ಅನುಷ್ಠಾನ ಕೈಗೊಳ್ಳುತ್ತಿದ್ದಾರೆ ಎಂದು ಹೇಳಿದರು. ಸಹಕಾರಿ ಸಂಘಗಳಲ್ಲಿನ ರೈತರ ಸಾಲಮನ್ನಾ ಮಾಡಿದರೆ, ಅದೇ ಕೇಂದ್ರ ಸರ್ಕಾರ ತನ್ನ ಪಾಲಿನ ಸಾಲಮನ್ನಾ ಮಾಡಲು ಹಿಂದೇಟು ಹಾಕಿದೆ ಎಂದು ಆರೋಪಿಸಿದರು.

Advertisement

ಮುಖಂಡ ದತ್ತಪ್ಪ ಹೊನ್ನಳ್ಳಿ, ತಹಶೀಲ್ದಾರ ಬಸವರಾಜ ಎಂ.ಬೆಣ್ಣೆಶಿರೂರ ಮಾತನಾಡಿದರು. ತಾಪಂ ಇಒ ಡಾ| ಸಂಜಯ ರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ ಪಾಟೀಲ, ಉಪಾಧ್ಯಕ್ಷ ಅಜಗರ ಅಲಿ ಹವಾಲ್ದಾರ, ಎಪಿಎಂಸಿ ಅಧ್ಯಕ್ಷ ಶರಣು ಭೂಸನೂರ, ಬಿ.ಜಿ. ಕುದರಿ, ನ್ಯಾಯ ಬೆಲೆ ಅಂಗಡಿ ಸಂಘದ ಅಧ್ಯಕ್ಷ ಮೋಹನಗೌಡ ಪಾಟೀಲ ಬೆಣ್ಣೆಶಿರೂರ, ಆಹಾರ ಶಿರಸ್ತೇದಾರ ದತ್ತಪ್ಪ, ನಿರೀಕ್ಷಿಕ ಪ್ರವೀಣ, ರವೀಂದ್ರ ಕೊರಳ್ಳಿ, ತಾಪಂ ಸದಸ್ಯ ಶಿವುತ್ರಪ್ಪ ಕೊಟ್ಟರಕಿ, ಶಿವಪ್ಪ ವಾರಿಕ ಇದ್ದರು. ಶಿಕ್ಷಕ ಕಲ್ಯಾಣಪ್ಪ ಬಿಜ್ಜರಗಿ ನಿರೂಪಿಸಿದರು. ಕಲ್ಯಾಣಿ ತುಕಾಣಿ ಗೀತೆ ಹಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next