Advertisement

ಮಲ್ಲಿಕಾರ್ಜುನ ಖರ್ಗೆಗೆ ರಾಜ್ಯ ಸರ್ಕಾರದ “ಅರಸು’ಪ್ರಶಸ್ತಿ

07:30 AM Aug 19, 2017 | |

ಬೆಂಗಳೂರು: ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕರಾಗಿರುವ ಎಂ.ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಲಾಗಿದೆ.

Advertisement

ಸಾಹಿತಿ ಹಂ.ಪ.ನಾಗರಾಜಯ್ಯ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯು ಎಂ.ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಶಿಫಾರಸು ಮಾಡಿದ್ದು, ರಾಜ್ಯ ಸರ್ಕಾರ ಒಪ್ಪಿಕೊಂಡಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ತಿಳಿಸಿದ್ದಾರೆ.

ಆಗಸ್ಟ್‌ 20ರಂದು ಭಾನುವಾರ ವಿಧಾನಸೌಧ ಬಾಂಕ್ವೆಟ್‌ ಸಭಾಂಗಣದಲ್ಲಿ ನಡೆಯಲಿರುವ ಡಿ.ದೇವರಾಜ ಅರಸು ಅವರ 102 ನೇ ಜನ್ಮದಿನಾಚಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಎರಡು ಲಕ್ಷ ರೂ. ನಗದು ಹಾಗೂ ಫ‌ಲಕ ಒಳಗೊಂಡಿದೆ.

ಸರ್ವಸಮ್ಮತ ಎಂದ ಹಂಪನ: ಡಿ.ದೇವರಾಜ ಅರಸು ಪ್ರಶಸ್ತಿಗೆ ಹಲವಾರು ಹೆಸರು ಪ್ರಸ್ತಾಪಗೊಂಡವು. ಆದರೆ, ಅರಸು ಗರಡಿಯಲ್ಲಿ ರಾಜಕಾರಣ ಮಾಡಿದ ಹಾಗೂ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ, ಸಮಾಜ ಸೇವೆಯಲ್ಲೂ ನಿರತರಾಗಿರುವ ಖರ್ಗೆ ಅವರನ್ನು ಸರ್ವಸಮ್ಮತವಾಗಿ ಸಮಿತಿ ಆಯ್ಕೆ ಮಾಡಿತು ಎಂದು ಸಮಿತಿ ಅಧ್ಯಕ್ಷ ಹಂ.ಪ.ನಾಗರಾಜಯ್ಯ ತಿಳಿಸಿದರು. ಪ್ರಶಸ್ತಿಗಾಗಿ ಪರಿಶೀಲನೆ ನಡೆಸಿದ ಇತರೆ ಹೆಸರುಗಳನ್ನು ಹೇಳಲು ನಿರಾಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next