Advertisement

ಐಎಎಸ್‌ ಅಧಿಕಾರಿಗಳ ವರ್ಗ ಮಾಡಿ ಆದೇಶಿಸಿದ ರಾಜ್ಯ ಸರ್ಕಾರ

11:38 PM Oct 21, 2022 | Team Udayavani |

ಬೆಂಗಳೂರು: ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕಪಿಲ್‌ ಮೋಹನ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ ಕುಮಾರ್‌, ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ| ಎನ್‌.ವಿ. ಪ್ರಸಾದ್‌ ಸೇರಿ 21 ಮಂದಿ ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ.

Advertisement

ಕಪಿಲ್‌ ಮೋಹನ್‌-ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆ; ಟಿ.ಕೆ. ಅನಿಲ್‌ ಕುಮಾರ್‌-ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ, ಭೂಮಿ ಮತ್ತು ಯುಪಿಒಆರ್‌); ಡಾ| ಎನ್‌.ವಿ. ಪ್ರಸಾದ್‌-ಕಾರ್ಯದರ್ಶಿ, ಕಾರ್ಮಿಕ ಇಲಾಖೆ; ಎನ್‌. ಜಯರಾಮ್‌-ಕಾರ್ಯದರ್ಶಿ, ಕಂದಾಯ ಇಲಾಖೆ; ಡಾ| ಬಗಾದಿ ಗೌತಮ್‌-ನಿರ್ದೇಶಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ; ಪಿ.ಐ. ಶ್ರೀವಿದ್ಯಾ-ಸಿಇಒ, ಇ-ಆಡಳಿತ ಕೇಂದ್ರ; ಡಿ.ಎಸ್‌. ರಮೇಶ್‌-ಚಾಮರಾಜನಗರ ಜಿಲ್ಲಾಧಿಕಾರಿ; ಡಾ| ಎನ್‌.ಎನ್‌. ಗೋಪಾಲಕೃಷ್ಣ-ಮಂಡ್ಯ ಜಿಲ್ಲಾಧಿಕಾರಿ; ಕೆ.ಎಂ. ಜಾನಕಿ-ಹೆಚ್ಚುವರಿ ನಿರ್ದೇಶಕಿ-ಸಕಾಲ; ಡಾ| ಕೆ.ವಿ. ರಾಜೆಂದ್ರ-ಮೈಸೂರು ಜಿಲ್ಲಾಧಿಕಾರಿ; ಎಸ್‌. ಅಶ್ವಥಿ-ಆಯುಕ್ತರು, ಪಶುಸಂಗೋಪನ ಇಲಾಖೆ; ಎಂ.ಪಿ. ಮುಲ್ಲೆ„ ಮುಹಿಲನ್‌-ಆಯುಕ್ತರು, ಕ್ರೀಡಾ ಇಲಾಖೆ.

ಪ್ರಭುಲಿಂಗ ಕವಳಿಕಟ್ಟಿ-ಉತ್ತರ ಕನ್ನಡ ಜಿಲ್ಲಾಧಿಕಾರಿ; ಎಂ.ಎಸ್‌. ದಿವಾಕರ-ಜಿ.ಪಂ. ಸಿಇಒ, ಚಿತ್ರದುರ್ಗ; ಜಿಆರ್‌ಜೆ ದಿವ್ಯಾ ಪ್ರಭು-ಚಿತ್ರದುರ್ಗ ಜಿಲ್ಲಾಧಿಕಾರಿ; ನಳಿನಿ ಅತುಲ್‌-ಚೇರ್ಮನ್‌, ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ; ರಘುನಂದನ್‌ ಮೂರ್ತಿ- ಹಾವೇರಿ ಜಿಲ್ಲಾಧಿಕಾರಿ.

ದಕ್ಷಿಣ ಕನ್ನಡ: ಹೆಚ್ಚುವರಿ ಹೊಣೆ
ಡಾ| ಕುಮಾರ್‌-ದಕ್ಷಿಣ ಕನ್ನಡ ಜಿಲ್ಲಾ ಧಿಕಾರಿ (ಹೆಚ್ಚುವರಿ ಹೊಣೆ); ಭನ್ವರ್‌ ಸಿಂಗ್‌ ಮೀನಾ-ಪರೀಕ್ಷಾ ನಿಯಂತ್ರಕರು, ಕರ್ನಾಟಕ ಲೋಕಸೇವಾ ಆಯೋಗ; ಪ್ರಕಾಶ್‌ ಜಿ.ಟಿ. ನಿಟ್ಟಾಲಿ-ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ; ಡಾ| ಎಸ್‌. ಆಕಾಶ್‌-ಜಿ.ಪಂ. ಸಿಇಒ, ಕೊಡಗು.

Advertisement

Udayavani is now on Telegram. Click here to join our channel and stay updated with the latest news.

Next