Advertisement

“ಜನರಿಗೆ ಮೂಲಸೌಕರ್ಯ ಒದಗಿಸುವ ಕನಸು ರಾಜ್ಯ ಸರಕಾರದ್ದು’

06:10 AM Jul 21, 2017 | Team Udayavani |

ಬಡಗನ್ನೂರು: ಜನರಿಗೆ ಮೂಲಭೂತ ಸೌಕರ್ಯ ಒದಗಿಸುವುದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಲ್ಪನೆ ಎಂದು ಪುತ್ತೂರು ವಿಧಾನ ಸಭಾ ಕ್ಷೇತ್ರ ಶಾಸಕಿ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ. ಶೆಟ್ಟಿ  ತಿಳಿಸಿದರು. 

Advertisement

ಅವರು ಬಡಗನ್ನೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬಡಗನ್ನೂರು ಹಾಗೂ ಪಡುವನ್ನೂರು ಗ್ರಾಮದ 94ಸಿ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದರು.   

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಚುನಾವಣಾ ಸಂದರ್ಭದಲ್ಲಿ ಪ್ರಕಟಿಸಿದ ಪ್ರಣಾಳಿಕೆಯಲ್ಲಿ 165ರಲ್ಲಿ 155 ಹೇಳಿಕೆಗಳು ಈಡೇರಿ ಜನರಿಗೆ ತಲುಪಿವೆ. ಪ್ರಣಾಳಿಕೆಯಲ್ಲಿ ಹೇಳದಿದ್ದರೂ ರೈತರ 50ಸಾವಿರ ರೂ. ಸಾಲ ಮನ್ನಾ ಮಾಡಿದ್ದಾರೆ ಎಂದರು.  

ಮೈಂದನಡ್ಕ-ಪದಡ್ಕ -ಸುಳ್ಯಪದವು ರಸ್ತೆಗೆ  ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ  ಕೆಲಸ ಪ್ರಾರಂಭ ಆಗಿದೆ. ಆ. 15ರ ಅನಂತರ ಮುಡಿಪಿನಡ್ಕದಿಂದ ಮೈಂದನಡ್ಕ ರಸ್ತೆಗೆ ಒನ್‌ ಟೈಮ್‌ ಯೋಜನೆ ಗುದ್ದಲಿ ಪೂಜೆ ಮಾಡಿ ಕೆಲಸ ಪ್ರಾರಂಭ ಮಾಡಲಾಗುವುದು. ಮುಡಿಪಿನಡ್ಕ-ಪದಡ್ಕ- ಈಶ್ವರಮಂಗಲ- ಕರ್ನೂರು-ಗಾಳಿಮುಖ ರಸ್ತೆಯನ್ನು ಎಮ…. ಡಿ.ಆರ್‌.ಟಿ.ಗೆ ಪತ್ರ ಬರೆಯಲಾಗಿದೆ. ಎಂದರು.

ಈ ಸಂದರ್ಭದಲ್ಲಿ ಬಡಗನ್ನೂರಿನ 17 ಕುಟುಂಬಕ್ಕೆ ಹಾಗೂ ಪಡುವನ್ನೂರಿನ 71ಕುಟುಂಬದ ಸದಸ್ಯರಿಗೆ ಒಟ್ಟು 88ಕುಟುಂಬದ ಸದಸ್ಯರಿಗೆ ಹಕ್ಕು ಪತ್ರ ವಿತರಣೆ ಮಾಡಲಾಯಿತು.

Advertisement

ಕಾರ್ಯಕ್ರಮವು ಗ್ರಾ.ಪಂ. ಅಧ್ಯಕ್ಷ ಕೇಶವ ಗೌಡ ಕನ್ನಯ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಮುದಾಯ ಭವನದ ಜುಲೈ 19ರಂದು ನಡೆಯಿತು.

ವೇದಿಕೆ  ಪುತ್ತೂರು ತಹಶೀಲ್ದಾರ್‌  ಅನಂತ ಶಂಕರ್‌, ಕಂದಾಯ ನಿರೀಕ್ಷಕ ದಯಾನಂದ ಹೆಗಡೆ,  ನಗರಾಭಿವೃದ್ಧಿಪ್ರಾಧಿಕಾರದ ಅಧ್ಯಕ್ಷ ಪ್ರಸಾದ್‌ ಕೌಶಲ್ಯ ಶೆಟ್ಟಿ, ಈಶ್ವರಮಂಗಲ ಮಂಡಲ ಪಂಚಾಯತ್‌ ಮಾಜಿ ಉಪಾಪ್ರಧಾನ ಬಾಲಕೃಷ್ಣ ರೈ ಕುದಾRಡಿ., ಗ್ರಾ.ಪಂ.ಉಪಾಧ್ಯಕ್ಷೆ ಬೇಬಿ ಎಸ್‌., ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಶಾರದಾ ಕೆ. ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ  ಕಾಂಗ್ರೆಸ್‌ ಕಿಸಾನ್‌ ಸಂಘದ ಜಿÇÉಾ ಅಧ್ಯಕ್ಷ ಉಮಾನಾಥ ಶೆಟ್ಟಿ, ಉÇÉಾಸ್‌ ಕೋಟ್ಯಾನ್‌, ಬಡಗನ್ನೂರು ಗ್ರಾಮಕರಣಿಕ ಪೃಥ್ವಿರಾಜ…, ಪಡುವನ್ನೂರು ಗ್ರಾಮಕರಣಿಕೆ ಸ್ವಾತಿ, ಗ್ರಾಮ ಸಹಾಯಕರಾದ ಕೇಶವ ಗೌಡ, ರಘನಾಥ ಪಾಟಾಳಿ, ಗ್ರಾ.ಪಂ. ಸದಸ್ಯರಾದ  ರವಿರಾಜ ರೈ ಸಜಂಕಾಡಿ, ಗೋಪಾಲಕೃಷ್ಣ ಸುಳ್ಯಪದವು, ರೋಹಿಣಿ ಕಜಮೂಲೆ, ವಿಜಯಲಕ್ಷ್ಮೀ ಮೇಗಿನಮನೆ, ಸವಿತಾ ಮಂಡ್ಯಲಮೂಲೆ  ಗ್ರಾಮಸ್ಥರು ಭಾಗವಹಿಸಿದರು.
ಪುತ್ತೂರು ತಾಲೂಕು ಪಂಚಾಯತ್‌ ಮಾಜಿ ಅಧ್ಯಕ್ಷ ಮಹಮ್ಮದ್‌ ಬಡಗನ್ನೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಪಂಚಾಯತ್‌ ಸದಸ್ಯ ಗುರುಪ್ರಸಾದ್‌ ಕುದಾRಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next