ಬೆಳಕಿನ ಹಬ್ಬ ದೀಪಾವಳಿಗೆ ಕ್ಷಣಗಣನೆ ಆರಂಭ ವಾಗಿರುವಂತೆಯೇ ರಾಜ್ಯ¬ ಸರಕಾರವು ವಾಯು ಹಾಗೂ ಶಬ್ದಮಾಲಿನ್ಯ ಉಂಟಾಗ ದಂತೆ ತಡೆಯಲು ಮುನ್ನೆಚ್ಚ ರಿಕೆ ಕ್ರಮವಾಗಿ ಈ ಮಾರ್ಗಸೂಚಿ ಹೊರಡಿಸಿದೆ.
Advertisement
ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಳೆದ ತಿಂಗಳಲ್ಲೇ ಸುತ್ತೋಲೆ ಹೊರಡಿ ಸಿದ್ದು, ಗುರುವಾರ (ನ. 2) ಪೌರಾಡಳಿತ ನಿರ್ದೇಶನಾ ಲಯವು ಆದೇಶ ಹೊರಡಿಸಿದೆ. ಅದರಂತೆ ರಾತ್ರಿ 2 ತಾಸು ಮಾತ್ರ ಪಟಾಕಿ ಹೊಡೆಯಲು ಅವ ಕಾಶ ಕಲ್ಪಿಸಲಾಗಿದೆ. ಉಳಿದ ಅವಧಿಯಲ್ಲಿ ಪಟಾಕಿಗೆ ನಿಷೇಧ ಇರಲಿದೆ. ಅಷ್ಟೇ ಅಲ್ಲ, ಯಾವುದೇ ಹಸುರು ಪಟಾಕಿಗಳನ್ನು ರ್‍ಯಾಂಡಮ್ ಆಗಿ ಸಂಗ್ರಹಿಸಿ, ಶಬ್ದದ ಪ್ರಮಾಣ ಮಾಪನ ಮಾಡಬೇಕು ಹಾಗೂ ನಿಗದಿತ ಗುಣಮಾಪನಗಳಿಗೆ ಸರಿಹೊಂದದಿದ್ದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲು ಸೂಚಿಸಲಾಗಿದೆ.ಹಸುರು ಪಟಾಕಿ ಮಾತ್ರ ಬಳಸಬೇಕು ಹಾಗೂ ಬಳಸುವಾಗ ಪ್ರಾಣಿ, ಪಕ್ಷಿಗಳು, ಮಕ್ಕಳು ಮತ್ತು ವೃದ್ಧರಿಗೆ ತೊಂದರೆಯಾಗದಂತೆ ನೋಡಿ ಕೊಳ್ಳಬೇಕು. ಆಸ್ಪತ್ರೆ, ಶಿಕ್ಷಣ ಸಂಸ್ಥೆ ಗಳ ಸುತ್ತ ಮತ್ತು ಯಾವುದೇ ನಿಷೇ ಧಿತ ಪ್ರದೇಶದಲ್ಲಿ ಪಟಾಕಿ ಸಿಡಿಸು ವಂತಿಲ್ಲ ಎಂದು ನಿರ್ದೇಶನ ನೀಡಲಾಗಿದೆ.
ಪರಿಸರಸ್ನೇಹಿ ದೀಪಾವಳಿ ಕುರಿತು ಸಾರ್ವಜನಿಕ ಸ್ಥಳಗಳಾದ ಮೆಟ್ರೋ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣ, ಮಾಲ್‌ಗಳಲ್ಲಿ ಕರಪತ್ರ, ಭಿತ್ತಿಪತ್ರಗಳನ್ನು ಹಂಚುವ ಮೂಲಕ, ವೀಡಿಯೋ ಮತ್ತು ಆಡಿಯೋ ಮೂಲಕ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕು. ಸ್ಥಳೀಯ ಟಿವಿ, ರೇಡಿಯೋ ಮೂಲಕ ಪರಿಸರಸ್ನೇಹಿ ದೀಪಾವಳಿ ಕುರಿತು ಜಾಗೃತಿ ಮೂಡಿಸಬೇಕು.