Advertisement

ರೈತರ ಆತ್ಮಹತ್ಯೆ ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ವಿಫಲ

05:48 PM May 08, 2018 | Team Udayavani |

ಧರ್ಮಪುರ: ರೈತರ ಸರಣಿ ಆತ್ಮಹತ್ಯೆ ಹಾಗೂ ಸುಳ್ಳು ಭರವಸೆ ಕಾಂಗ್ರೆಸ್‌ ಸರ್ಕಾರದ ಕೊಡುಗೆ ಎಂದು ಹಿರಿಯ ಬಿಜೆಪಿ ಮುಖಂಡ ನಾಗರಾಜ ಆರೋಪಿಸಿದರು.  ಹೋಬಳಿಯ ಕೋಡಿಹಳ್ಳಿ, ವೇಣುಕಲ್ಲುಗುಡ್ಡ, ಬ್ಯಾಡರಹಳ್ಳಿ, ಮಸ್ಕಲ್‌ ಮತ್ತಿತರ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್‌ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು.

Advertisement

ಕಾಂಗ್ರೆಸ್‌ ಸರ್ಕಾರ ರೈತರ ಕಲ್ಯಾಣಕ್ಕೆ ಗಮನ ನೀಡಲಿಲ್ಲ. ಇದರಿಂದ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಆದರೂ ರೈತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆ, ಆತ್ಮಹತ್ಯೆ ತಡೆಗಟ್ಟುವ ಮಾರ್ಗೋಪಾಯಗಳ ಬಗ್ಗೆ ಗಂಭೀರ ಚಿಂತನೆ ನಡೆಸಲಿಲ್ಲ.
ಬದಲಾಗಿ ಬದಲಾಗಿ ರೈತ ವಿರೋಧಿ ನೀತಿ  ಅನುಸರಿಸಿದೆ. ಆತ್ಮಹತ್ಯೆ ಮಾಡಿಕೊಂಡ ರೈತ್ರ ಕುಟುಂಬದವರಿಗೆ ಸಾಂತ್ವನವನ್ನೂ ಹೇಳಲಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್‌ ಮಾತನಾಡಿ, ಇನ್ನು ಕೆಲವೇ ದಿನಗಳಲ್ಲಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಆಗ ರೈತ ಪರ ಆಡಳಿತ ನೀಡಲಾಗುವುದು. ನನ್ನನ್ನು ಗೆಲ್ಲಿಸಿದರೆ ಧರ್ಮಪುರ ಫಿಡರ್‌ ಚಾನಲ್‌, ತಾಲೂಕು ಕೇಂದ್ರ ಘೋಷಣೆ, ಸಕ್ಕರೆ ಕಾರ್ಖಾನೆ ಪುನರಾರಂಭ ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಹೇಳಿದರು.

ಮಾಜಿ ಶಾಸಕ ಆರ್‌. ರಾಮಯ್ಯ, ತಾಲೂಕು ಬಿಜೆಪಿ ಅಧ್ಯಕ್ಷ ದ್ಯಾಮೇಗೌಡ, ಜಿಲ್ಲಾ ಕಾರ್ಯದರ್ಶಿ ಡಿ.ಆರ್‌. ತಿಪ್ಪೇಸ್ವಾಮಿ,
ಬಿಜೆಪಿ ಮುಖಂಡರಾದ ಡಿ.ಟಿ. ಶ್ರೀನಿವಾಸ್‌, ವೆಂಕಟೇಶ್‌ ಚಲಪತಿ, ನಾಗರಾಜ ರಾವ್‌, ಪಿ.ಡಿ. ಕೋಟೆ ಮುರಳಿ, ಕೃಷ್ಣಾಪುರ ಹನುಮಂತರಾಯ, ರಾಕೇಶ್‌ ಯಾದವ್‌, ವೀರಭದ್ರಪ್ಪ, ತಿಮ್ಮರಾಜ್‌, ಭೋಜರಾಜ್‌, ಬೆನಕನಹಳ್ಳಿ ಶಿವಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next