Advertisement

ರಾಜ್ಯ ಸರಕಾರದಿಂದ ಜನತೆಗೆ ಮೋಸ: ಈಶ್ವರಪ್ಪ

06:40 AM Jul 15, 2018 | Team Udayavani |

ಶಿವಮೊಗ್ಗ: ರಾಜ್ಯ ಸರಕಾರ ಎರಡು ಅಂಶಗಳಲ್ಲಿ ಜನರಿಗೆ ಮೋಸ ಮಾಡಿದೆ. ಅಕ್ಕಿ ಕಡಿತಗೊಳಿಸಿದ್ದು ಹಾಗೂ ವಿದ್ಯಾರ್ಥಿಗಳ ಬಸ್‌ಪಾಸ್‌ ಸೌಲಭ್ಯ ಕಿತ್ತುಕೊಂಡಿದ್ದು ಸರಿಯಲ್ಲ ಈ ಬಗ್ಗೆ ರಾಜ್ಯ ಸರಕಾರ ಕ್ರಮಕೈಗೊಳ್ಳಬೇಕು ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ಆಗ್ರಹಿಸಿದರು.

Advertisement

ರಾಜ್ಯ ಸರಕಾರ ಜನರಿಗೆ ಮೋಸ ಮಾಡೋದರಲ್ಲೇ ನಿರತವಾಗಿದೆ. ಬಜೆಟ್‌ ಸಮಯದಲ್ಲಿ ಬಡವರಿಗೆ 7 ಕೆಜಿ ಅಕ್ಕಿ ಕೊಡಲಾಗುವುದು ಎಂದು ಘೋಷಿಸಿದರು. ಆದರೆ ಕೊನೆಗೆ ಉಲ್ಟಾ ಹೊಡೆದು 5 ಕೆಜಿ ಅಕ್ಕಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಇದು ರಾಜ್ಯದ ಬಡವರಿಗೆ ಹಾಕಿರುವ ದೊಡ್ಡ ಬರೆ ಎಂದರು.

ಕೇಂದ್ರ ಸರಕಾರ ಕೊಟ್ಟಿರುವ ಅಕ್ಕಿ ಜತೆ ರಾಜ್ಯ ಸರಕಾರದ್ದೂ ಸೇರಿಸಿ 7 ಕೆಜಿಗಿಂತ ಹೆಚ್ಚಿಗೆ ಅಕ್ಕಿ ಕೊಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದರು.

ರೈತರಿಗೆ ಅನ್ಯಾಯ: ಇತ್ತ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಾಲಮನ್ನಾ ವಿಚಾರದಲ್ಲಿ ರಾಜ್ಯ ಸರಕಾರ ರೈತರಿಗೆ ಅನ್ಯಾಯ ಮಾಡಿರುವುದಲ್ಲದೆ, ಸಾಲಮನ್ನಾ ಹೆಸರಿನಲ್ಲಿ ರಾಜ್ಯದ 6.50ಕೋಟಿ ಜನರ ಮೇಲೆ ಹೆಚ್ಚಿನ ಹೊರೆ ಹೊರಿಸಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next