- ಭಾರತ, ಬಾಂಗ್ಲಾದೇಶ, ಲಂಕಾ, ಒಮಾನ್ ಸ್ಪರ್ಧಿಗಳು ಭಾಗಿ
- ಗುರುವಾರದಿಂದ ಸ್ಪರ್ಧೆ ಆರಂಭ; ಮಾ. 31ಕ್ಕೆ ಸಮಾರೋಪ
Advertisement
ಉಡುಪಿ: ಅಂಧರ ಚೆಸ್ ಕ್ರೀಡಾಳುಗಳಿಗೆ ಸರಕಾರ ಯಾವುದೇ ರೀತಿಯ ಸಹಕಾರ ನೀಡುತ್ತಿಲ್ಲ. ನಾವು ಕೂಡ ಪದಕ ಗೆದ್ದು ತರುತ್ತೇವೆ. ಭಾರತದ ಕೀರ್ತಿ ಪತಾಕೆಯನ್ನು ಎತ್ತರಕ್ಕೇರಿಸಿದರೂ ಯಾವುದೇ ಮನ್ನಣೆ ನೀಡುತ್ತಿಲ್ಲ. ಬೇರೆ ಕ್ರೀಡೆಗಳಲ್ಲಿ ಗೆದ್ದು ಬಂದರೆ ಭರ್ಜರಿ ಸ್ವಾಗತ ಸಿಕ್ಕರೆ, ನಮ್ಮವರನ್ನು ಕಣ್ಣೆತ್ತಿ ನೋಡುವುದೂ ಇಲ್ಲ ಎಂದು ಅಖೀಲ ಭಾರತ ಅಂಧರ ಚೆಸ್ ಒಕ್ಕೂಟದ ಅಧ್ಯಕ್ಷ ಚಾರುದತ್ತ ಜಾಧವ್ ಹೇಳಿದ್ದಾರೆ.
Related Articles
ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡಿ, ಚೆಸ್ ಒಂದು ಅದ್ಭುತ ಕ್ರೀಡೆ. ಉದ್ಯಮ, ವ್ಯವಹಾರ ಕ್ಷೇತ್ರವೂ ಒಂದು ರೀತಿಯ ಚೆಸ್ ಆಟ ಇದ್ದಂತೆ. ಇಲ್ಲಿಯೂ ಸವಾಲು, ಸಂಕಷ್ಟಗಳಿರುತ್ತವೆ. ಅಂಧರ ಚೆಸ್ ಟೂರ್ನಿ ಆಯೋಜಿಸಿರುವುದು ಒಂದು ಒಳ್ಳೆಯ ಆಲೋಚನೆ. ಮುಂದೆಯೂ ಮಣಿ ಪಾಲ ವಿ.ವಿ. ಜತೆ ಎಲ್ಲ ಕಾರ್ಯಕ್ರಮಗಳಿಗೂ ಯುಪಿಸಿಎಲ್‌ನಿಂದ ನಿರಂತರ ಸಹಭಾಗಿತ್ವ ನೀಡುತ್ತೇವೆ ಎಂದರು.
Advertisement
ಬೇರೆ ಕ್ರೀಡೆಗಳಿಗಿಂತ ಚೆಸ್ ಭಿನ್ನಅಧ್ಯಕ್ಷತೆ ವಹಿಸಿ ಮಾತನಾಡಿದ ಮಣಿಪಾಲ ವಿ.ವಿ. ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಚೆಸ್ ಒಂದು ಮಾನಸಿಕ ಕ್ಷಮತೆಗೆ ಸಂಬಂಧಿಸಿದ ಸ್ಪರ್ಧೆ. ಬೇರೆಲ್ಲ ಕ್ರೀಡೆಗಳಿಗಿಂತ ಚೆಸ್ ಭಿನ್ನ ಆಟ. ಈ ಕ್ರೀಡೆಗೂ ಇನ್ನಷ್ಟು ಉತ್ತೇಜನ ಕೊಡುವ ಮೂಲಕ ಶ್ರೇಷ್ಠ ಮಟ್ಟದ ಆಟಗಾರರನ್ನು ತಯಾರು ಮಾಡಬೇಕಿದೆ. ಕ್ರಿಕೆಟ್ ಹೊರತಾಗಿ ಇತರ ಕ್ರೀಡೆಗಳ ಬೆಳವಣಿಗೆ ಯತ್ತ ವಿ.ವಿ. ದೃಷ್ಟಿ ನೆಟ್ಟಿದ್ದು, ಎಲ್ಲರೂ ಮಹಿಳಾ ಕ್ರಿಕೆಟ್, ಅಂಧರ ಕ್ರಿಕೆಟ್, ಕಬಡ್ಡಿ, ಚೆಸ್ ಸಹಿತ ಇನ್ನಿತರ ಕ್ರೀಡಾಳುಗಳನ್ನು ಪ್ರೋತ್ಸಾಹಿಸಬೇಕಿದೆ ಎಂದು ಹೇಳಿದರು. ಟೂರ್ನಿಯಲ್ಲಿ ಭಾರತದ ಜತೆಗೆ ಬಾಂಗ್ಲಾ ದೇಶ, ಶ್ರೀಲಂಕಾ, ಫಿಲಿಪ್ಪೀನ್ಸ್, ಒಮಾನ್ ದೇಶದ ಸ್ಪರ್ಧಾಳುಗಳೂ ಪಾಲ್ಗೊಂಡಿದ್ದಾರೆ. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಮಿಂಚಿದ ಅಂಧರ ಕ್ರಿಕೆಟ್ ತಂಡದ ಆಟಗಾರ ಪ್ರಕಾಶ್ ಜಯರಾಮಯ್ಯ ಹಾಗೂ ವಿಶೇಷ ಪ್ರತಿಭೆಯುಳ್ಳ ಚೆಸ್ ತಾರೆ ಸಮರ್ಥ್ ಜೆ. ರಾವ್ ಅವರನ್ನು ಸಮ್ಮಾನಿಸಲಾಯಿತು.
ಅಂತಾರಾಷ್ಟ್ರೀಯ ಅಂಧರ ಚೆಸ್ ಒಕ್ಕೂಟದ ಖಜಾಂಚಿ ಸಮಯೋ ಅರ್ನಾದನ್, ರಾಜ್ಯ ಅಂಧರ ಚೆಸ್ ಒಕ್ಕೂಟದ ಅಧ್ಯಕ್ಷ ಅಧ್ಯಕ್ಷ ಅನಂತ್ ಡಿ. ಪಿ., ಉಜ್ವಲ್ ಡೆವಲಪರ್ನ ಪುರುಷೋತ್ತಮ್ ಶೆಟ್ಟಿ, ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಶನ್ ಉಪಾಧ್ಯಕ್ಷ ಡಾ| ಕೆ. ರಾಜಗೋಪಾಲ… ಶೆಣೈ ಉಪಸ್ಥಿತರಿದ್ದರು.
ವಿ. ವಿ. ಕ್ರೀಡಾ ಸಮಿತಿ ಕಾರ್ಯದರ್ಶಿ ಡಾ| ವಿನೋದ್ ಸಿ. ನಾಯಕ್ ಸ್ವಾಗತಿಸಿದರು. ಸುಗಂಧಿನಿ ಕಾರ್ಯಕ್ರಮ ನಿರ್ವಹಿಸಿದರು.