ನೈರ್ಮಲ್ಯ ಕಾಪಾಡಿಕೊಳ್ಳುವ ಸಲುವಾಗಿ ಜನ ಸಮೂಹ ಸೇರುವ ಕಡೆ ಸೋಂಕು ನಿರೋಧಕ (ಡಿಸ್‌ಇನ್‌ಫೆಕ್ಟಂಟ್ ಟನ್ನಲ್) ದ್ವಾರ ಸಾಧನ ನಿರ್ಮಾಣ ಹೆಚ್ಚಾಗುತ್ತಿದೆ. ರಾಜಧಾನಿಯ ಯಶವಂತಪುರ ಎಪಿಎಂಸಿ ಮಾರುಕಟ್ಟೆ, ಎಪಿಎಂಸಿ ಮಾರುಕಟ್ಟೆ ಸೇರಿದಂತೆ ಹಲವೆಡೆ ಸೋಂಕು ನಿರೋಧಕ ದ್ವಾರ ಸಾಧನ ಅಳವಡಿಸಲಾಗುತ್ತಿದೆ. ಈ ಸಾಧನದಲ್ಲಿ ಸೋಡಿಯಂ ಹೈಪೋಕ್ಲೋರೈಟ್ ರಾಸಾಯನಿಕ ಬಳಸಲಾಗುತ್ತಿದ್ದು, ಇದರ ಮಿಶ್ರಣದಲ್ಲಿ ಏರುಪೇರಾದರೆ ಚರ್ಮಸಮಸ್ಯೆ, ಅಲರ್ಜಿ, ಕಣ್ಣಿಗೂ ಹಾನಿಕರವಾಗಿ ಪರಿಣಮಿಸುವ ಅಪಾಯವಿದೆ. ಹಾಗಾಗಿ ಸಾಧನ ಅಳವಡಿಕೆಗಳಿಗೆ ಕೆಲ ನಿರ್ದಿಷ್ಟ ಮಾನದಂಡ
ವಿಧಿಸಿ ಪಾಲಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಾಪಕವಾಗಿ ಕೇಳಿಬರುತ್ತಿದೆ.
Advertisement
ಲಾಕ್‌ಡೌನ್ ಜಾರಿಯಾದರೂ ಜನರಿಗೆ ದಿನನಿತ್ಯ ಬಳಸುವ ತರಕಾರಿ, ಆಹಾರ ಧಾನ್ಯ ಸೇರಿದಂತೆ ಎಪಿಎಂಪಿ ಮಾರುಕಟ್ಟೆ ವ್ಯಾಪಾರ- ವಹಿವಾಟಿಗೆ ಸರ್ಕಾರ ಅವಕಾಶ ಕಲ್ಪಿಸಿದೆ. ಮಾರುಕಟ್ಟೆಗೆ ಸಾಕಷ್ಟು ಮಂದಿ ಭೇಟಿ ನೀಡುವ ಕಾರಣ ಸಾಮಾಜಿಕ ಅಂತರ ಹಾಗೂ ನೈರ್ಮಲ್ಯತೆ ಕಾಪಾಡುವ ಸಲುವಾಗಿ ಸೋಂಕು ನಿರೋಧಕ ದ್ವಾರ ಸಾಧನಗಳ ಬಳಕೆಗೆ ಅನಿವಾರ್ಯವಾಗಿದೆ. ಈ ದ್ವಾರದಲ್ಲಿ ಹಾದು ಹೋದಾಗ ರಾಸಾಯನಿಕ ದ್ರಾವಣವು ಇಡೀ ದೇಹಕ್ಕೆ ಸಿಂಪಡಣೆಯಾಗಲಿದೆ. ಇದರಿಂದ ಒಂದು ಹಂತದ ನೈರ್ಮಲ್ಯ ಕಾಪಾಡಲು ಅನುಕೂಲ ವಾಗಲಿದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ. ದೊಡ್ಡ ಜನ ಸಮೂಹಕ್ಕೆ ಸರಳವಾಗಿ ನೈರ್ಮಲ್ಯ ಕಾಯ್ದುಕೊಳ್ಳಬಹುದಾದ ವಿಧಾನ ಎಂಬುದಾಗಿ ಬಳಸಲಾಗುತ್ತಿದೆ.
Related Articles
ಕೊರೊನಾ ಸೋಂಕು ಸಂಪೂರ್ಣ ನಿಯಂತ್ರಣದಲ್ಲಿದೆ. ಸರಳ ವಿಧಾನದಲ್ಲೇ ಸೋಂಕು ನಿರೋಧಕ ದ್ವಾರ ನಿರ್ಮಿಸಿದ್ದು, ಸಾವಯವ ದ್ರಾವಣವನ್ನೇ ಸಿಂಪಡಿಸಲಾಗುತ್ತಿದೆ. ಅಲ್ಲದೇ ಕಡಿಮೆ ವೆಚ್ಚದಲ್ಲಿ ಬಳಸಬಹುದಾಗಿದೆ.
Advertisement
ರಾಸಾಯನಿಕ ದ್ರಾವಣ ಬಳಸುವ ಸಾಧನದ ವೆಚ್ಚ ಒಂದು ಲಕ್ಷ ರೂ.ಗಳಾದರೆ ಸಾವಯವ ದ್ರಾವಣ ಬಳಸುವ ಸಾಧನದ ವೆಚ್ಚ 20ರಿಂದ 25 ಸಾವಿರ ರೂ. ಆಗಲಿದೆ. ಒಟ್ಟಾರೆ “ಮೇಕ್ ಇನ್ ಗೌರಿಬಿದನೂರು’ ಮಾದರಿಗೆ ಉತ್ತಮ ಸ್ಪಂದನೆ ಇದೆ ಎಂದು ಸೇವಾಸಿಂಧು ಯೋಜನಾ ನಿರ್ದೇಶಕ ವರಪ್ರಸಾದ ರೆಡ್ಡಿ ತಿಳಿಸಿದರು.
ಯಶವಂತಪುರ, ಕೋಲಾರ, ಮೈಸೂರು, ಹುಬ್ಬಳ್ಳಿ ಸೇರಿದಂತೆ ಹಲವು ಎಪಿಎಂಸಿ ಮಾರುಕಟ್ಟೆಗಳಲ್ಲಿ 20ಕ್ಕೂ ಹೆಚ್ಚು ಸೋಂಕು ನಿರೋಧಕ ಸಾಧನಗಳನ್ನು ಅಳವಡಿಸಲಾಗಿದೆ. ಇದರಿಂದ ಮಾರುಕಟ್ಟೆ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡಲು ಸಹಕಾರಿಯಾಗಿದೆ. ದ್ರಾವಣವನ್ನು ಸೂಕ್ತ ರೀತಿಯಲ್ಲೇ ಎಚ್ಚರಿಕೆಯಿಂದ ಬಳಸುವ ವ್ಯವಸ್ಥೆ ಕಲ್ಪಿಸಲಾಗಿದೆ.● ಕರೀಗೌಡ, ಕೃಷಿ ಮಾರುಕಟ್ಟೆ ನಿರ್ದೇಶಕ ಸೋಂಕು ನಿರೋಧಕ ದ್ವಾರ ಸಾಧನದಲ್ಲಿ ಬಳಸುವ ಸೋಡಿಯಂ ಹೈಪೋಕ್ಲೋರೈಟ್ ದ್ರಾವಣವನ್ನು ಶೇ.0.5ರಿಂದ ಶೇ. 1ರಷ್ಟು ದುರ್ಬಲ ದ್ರಾವಣವಾಗಿಸಿ
ಬಳಸುವುದು ಬಹಳ ಮುಖ್ಯ. ಈಚಿನ ದಿನಗಳಲ್ಲಿ ಈ ಸಾಧನಗಳ ಅಳವಡಿಕೆ ಹೆಚ್ಚಾಗಿದೆ. ಹಾಗಾಗಿ ಈ ಸಾಧನಗಳ ಬಳಕೆಗೆ ನಿರ್ದಿಷ್ಟ ಮಾನದಂಡ ರೂಪಿಸಿದರೆ
ಉಪಯುಕ್ತ.
● ಡಾ. ಶಶಿಧರ ಬುಗ್ಗಿ, ರಾಜೀವ್ ಗಾಂಧಿ ಸಂಸ್ಥೆಯ ಮಾಜಿ ನಿರ್ದೇಶಕ