ಶೃಂಗೇರಿ: ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳ 71 ನೇ ವರ್ಧಂತಿ ಕಾರ್ಯಕ್ರಮದ ಅಂಗವಾಗಿ ಭಾನುವಾರ ಭಕ್ತಾದಿಗಳಿಂದ ಹೊರೆ ಕಾಣಿಕೆ ಉತ್ಸವ ಪಟ್ಟಣದ ಮುಖ್ಯ ರಸ್ತೆಯಲ್ಲಿ ನಡೆಯಿತು. ರಾಜ್ಯದ ವಿವಿಧ ಭಾಗದಿಂದ ಆಗಮಿಸಿದ್ದ ಭಕ್ತರು ವಿವಿಧ ವಸ್ತುಗಳನ್ನು ವಾಹನದ ಮೂಲಕ ತಂದರು.
ಪಟ್ಟಣದ ಪ್ರವೇಶದ್ವಾರ ಸಮೀಪ ಶ್ರೀ ಶಂಕರಾಚಾರ್ಯ ವೃತ್ತದಿಂದ ಆರಂಭಗೊಂಡ ಹೊರೆ ಕಾಣಿಕೆ ಉತ್ಸವಕ್ಕೆ ನೂರಾರು ವಾಹನದ ಮೂಲಕ ಶ್ರೀಮಠಕ್ಕೆ ತಲುಪಿಸಿದರು. ಉತ್ಸವದ ಅಂಗವಾಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ದೀಪಾಲಂಕಾರ ಮಾಡಲಾಗಿದೆ. ಪಟ್ಟಣವನ್ನು ಸ್ವತ್ಛಗೊಳಿಸಿ, ತಳಿರು ತೋರಣ ಹಾಕಲಾಗಿತ್ತು.
ವಿವಿಧ ವಾಹನಗಳ ಮೂಲಕ ಹೊರೆ ಕಾಣಿಕೆ:
ಲಾರಿ,ಮಿನಿ ಬಸ್, ಟ್ರ್ಯಾಕ್ಟರ್, ಪಿಕ್ ಆಪ್, ಆಟೋ, ಗೂಡ್ಸ್, ಪವರ್ ಟಿಲ್ಲರ್, ಬೈಕ್, ಜೀಪು,ಕಾರು ಮುಂತಾದ ವಾಹನದಲ್ಲಿ ಅಕ್ಕಿ, ತರಕಾರಿ, ತೆಂಗಿನಕಾಯಿ, ಹೋಮದ ಚಕ್ಕೆ, ಬಾಳೆಕಾಯಿ,ದಿನಸಿ ಸಾಮಾನು, ತುಪ್ಪ ಮತ್ತಿತರ ವಸ್ತುವನ್ನು ಸಂಗ್ರಹಿಸಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.
ಪಪಂ ಹಾಗೂ ತಾಲೂಕಿನ 9 ಗ್ರಾಪಂ ವ್ಯಾಪ್ತಿಯ ಭಕ್ತರು, ಭಟ್ಕಳದ ಕೊಂಕಣಿ ಖಾರ್ವಿ ಸಮಾಜ,ಧಾರವಾಡ, ಹುಬ್ಬಳ್ಳಿ, ವೈಶ್ಯ ಸಮಾಜ ಬೆಂಗಳೂರು, ಕುಂದಾಪುರದ ರûಾ ಚಾರಿಟೆಬಲ್ ಟ್ರಸ್ಟ್, ಶ್ರೀ ಯಕ್ಷ ಡೆಕೋರೇಟರ್, ಮಂಗಳೂರು, ಗೋಕರ್ಣ, ಮಹಾಕಾಳಿ ದೇವಸ್ಥಾನ ಉಡುಪಿ, ಶ್ರೀ ಶಾಂತಾಶ್ರಮ ಮಠ ಹೊನ್ನಾವರ ಹಳದಿಪುರ, ಬೆಳವಾಡಿ, ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಟಾರ ಬ್ರಾಹ್ಮಣ ಸಭಾ, ಕಿಕ್ರೆ, ಉಳುವಳ್ಳಿ, ಮೆಣಸೆ, ಕಾವಡಿ, ಕುಂಚಬೈಲು,ಅಡ್ಡಗದ್ದೆ ಮುಂತಾದೆಡೆಯಿಂದ ಭಕ್ತರು ವಿವಿಧ ವಸ್ತುವನ್ನು ವಾಹನದಲ್ಲಿ ತಂದಿದ್ದರು. ಹೊರೆ ಕಾಣಿಕೆ ಉತ್ಸವದ ಎದುರು ಮಹಿಳೆಯರು ಕಲಶವನ್ನು ಹಿಡಿದು ಸಾಗಿದರು.
ಆನೆ, ವಾದ್ಯಮೇಳ, ಚಂಡೆ, ಕೀಲುಕುದುರೆ, ಡೊಳ್ಳು ಕುಣಿತ, ತಟ್ಟಿರಾಯ, ಸ್ಥಬ್ಧಚಿತ್ರ ಮುಂತಾದವು ಮೆರವಣಿಗೆಗೆ ಮೆರಗು ಹೆಚ್ಚಿಸಿದ್ದದವು. ಮೆರವಣಿಗೆಯಲ್ಲಿ ಶ್ರೀಮಠದ ಆಡಳಿತಾ ಧಿಕಾರಿ ಡಾ| ವಿ.ಆರ್. ಗೌರಿಶಂಕರ್, ಅ ಧಿಕಾರಿಗಳಾದ ಶ್ರೀಪಾದರಾವ್, ರಾಮ ಕೃಷ್ಣಯ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್, ತಾಪಂ ಅಧ್ಯಕ್ಷೆ ಜಯಶೀಲ, ಪಪಂ ಅಧ್ಯಕ್ಷ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಪ್ರಕಾಶ್ ಮತ್ತಿತರರು ಇದ್ದರು.