Advertisement

ಸ್ಪಿರಿಟ್‌ ಆಫ್ ಇಂಡಿಯಾ ಮೂಲ ಹ್ಯುಮಾನಿಟಿಯಲ್ಲಿದೆ: ಸಿಎಂ ಬೊಮ್ಮಾಯಿ

11:56 PM Dec 25, 2022 | Team Udayavani |

ಬೆಂಗಳೂರು: ಭಾರತೀಯತೆ ಎಂದರೆ ಮಾನವೀಯತೆ. ನಮ್ಮ ಸಂಸ್ಕೃತಿ, ಪರಂಪರೆಯಿಂದ ಪ್ರತಿಯೊಬ್ಬ ಭಾರತೀಯನಲ್ಲೂ ಮಾನವೀಯತೆ ಅಡಗಿಕೊಂಡಿದೆ. ಅದನ್ನು ಎಷ್ಟರಮಟ್ಟಿಗೆ ಜಾರಿಗೆ ತರುತ್ತೇವೆ ಎನ್ನುವುದು ತುಂಬಾ ಮುಖ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಅಟಲ್‌ ವಿಷನ್‌ ಫೌಂಡೇಶನ್‌ ಹಾಗೂ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ನಗರದ ಬಸವ ಸಮಿತಿ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾಗಿದ್ದ ಸ್ಪಿರಿಟ್‌ ಆಫ್ ಇಂಡಿಯಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪಾಶ್ಚಿಮಾತ್ಯ ದೇಶಗಳಲ್ಲಿ ಶಕ್ತಿ ಇದ್ದವನು ಮಾತ್ರ ಬದುಕಬಲ್ಲ ಎಂಬ ಪರಿಕಲ್ಪನೆಯಿದೆ. ಆದರೆ, ಭಾರತದಲ್ಲಿ ಅತ್ಯಂತ ಶಕ್ತಿಹೀನನೂ ಬದುಕಬಲ್ಲ ಎನ್ನುವುದನ್ನು ನಮ್ಮ ಸಂಸ್ಕೃತಿ ತಿಳಿಸುತ್ತದೆ ಎಂದರು.

ಇಡೀ ವಿಶ್ವ ಮಾನವರಲ್ಲಿ ಪ್ರತ್ಯೇಕವಾಗಿ ಅಥವಾ ಮಾರ್ಗದರ್ಶಿಯಾಗಿ ನಿಲ್ಲುವ ವಿಶೇಷ ಗುಣವಿರುವುದು ಕೇವಲ ಭಾರತೀಯರಲ್ಲಿ ಮಾತ್ರ. ಏಕೆಂದರೆ ನಮ್ಮಲ್ಲಿ ಪಾಪ ಪುಣ್ಯದ ಪ್ರಜ್ಞೆ ಇದ್ದರೆ, ಪಾಶ್ಚಿಮಾತ್ಯರಲ್ಲಿ ಲಾಭ-ನಷ್ಟದ ಪ್ರಜ್ಞೆ ಇದೆ. ಸತ್ಯವನ್ನು ಹೇಳುವ ಮತ್ತು ಕೇಳುವಂತಹ ಸಮಾಜವನ್ನು ನಿರ್ಮಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

21ನೇ ಶತಮಾನದ ಜ್ಞಾನದ ಶತಮಾನ. ಸ್ಟಾರ್ಟ್‌ ಅಪ್‌, ತಂತ್ರಜ್ಞಾನವು ಕರ್ನಾಟಕದಲ್ಲಿ ಮುಂದಿದೆ. ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಅತೀದೊಡ್ಡ ಸ್ಟೀಲ್‌ ಉತ್ಪಾದನೆ ಮಾಡಲಿದ್ದೇವೆ. ಸ್ಪಿರಿಟ್‌ ಆಫ್‌ ಇಂಡಿಯಾ ನಿರಂತರವಾಗಿ ಸಾಗುವಂತದು. ಇದರ ಬಗ್ಗೆ ಇಡೀ ವಿಶ್ವವೇ ಚರ್ಚಿಸುವಂತಾಗಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next