Advertisement
ಇದೀಗ ಅಮೆರಿಕದ ಕಾಂಗ್ನಿಜೆಂಟ್ ಕಂಪನಿ ಚೆನ್ನೈ ಶಾಖೆಯಲ್ಲಿರುವ ಅಗತ್ಯಕ್ಕಿಂತ ಹೆಚ್ಚಿಗೆ ಇರುವ ಮತ್ತು ನಿರೀಕ್ಷೆಯಂತೆ ಕೆಲಸ ಮಾಡದ 6,000ದಿಂದ 10,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಲೆಕ್ಕಾಚಾರದಲ್ಲಿದೆ. ಉದ್ಯೋಗಿಗಳ ಕಾರ್ಯನಿರ್ವಹಣೆ, ಸೇವಾ ಸಾಮರ್ಥ್ಯಗಳನ್ನು ಒರೆಗೆ ಹಚ್ಚುವ ವಾರ್ಷಿಕ ಮೌಲ್ಯಮಾಪನ (ಆ್ಯನ್ಯುವಲ್ ಅಪ್ರೈಸಲ್) ಸಂದರ್ಭದಲ್ಲಿಯೇ ಕಂಪನಿಗಳು ತನ್ನ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡಲು ಹೊರಟಿವೆ. ಇನ್ಫೋಸಿಸ್, ವಿಪ್ರೋ ಮತ್ತು ಟಿಸಿಎಸ್ ಕಂಪನಿಗಳೂ ಇದರಿಂದ ಹೊರತಾಗಿಲ್ಲ. ಇದು ಹೀಗಾದರೆ ಅಮೆರಿಕದಲ್ಲಿ ಅಲ್ಲಿನವರಿಗೆ ಕೆಲಸ ನೀಡಬೇಕೆಂಬ ಒತ್ತಾಯ, ಎಚ್-1ಬಿ ವೀಸಾ ಮೇಲೆ ಆ ರಾಷ್ಟ್ರದ ಸಂಸತ್‌ನಲ್ಲಿ ಆರು ವಿಧೇಯಕಗಳ ಮಂಡನೆ ವಿಚಾರಗಳೂ ಭಾರತೀಯರಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗವೆಂದರೆ ಕೊಂಚ ಯೋಚನೆ ಮಾಡುವಂತಾಗಿದೆ.
ಅಷ್ಟಕ್ಕೂ ಉದ್ಯೋಗಿಗಳ ಪ್ರಮಾಣ ಕಡಿಮೆ ಮಾಡಲು ಇನ್ನೂ ಕೆಲ ಕಾರಣಗಳಿವೆ. ಐಟಿ ಸೇವೆಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದು, ಆಧುನಿಕ ತಂತ್ರಜ್ಞಾನ ಮತ್ತು ಯಾಂತ್ರೀಕೃತ (ಸ್ವಯಂಚಾಲಿತ) ವ್ಯವಸ್ಥೆಗಳ ಕಡೆ ಕಂಪನಿಗಳು ಹೆಚ್ಚಿನ ಒಲವು ಹೊಂದುತ್ತಿರುವುದೂ ಇದಕ್ಕೊಂದು ಕಾರಣವಾಗಿದೆ. ಇವೆಲ್ಲದರ ಜತೆಗೆ ಬಹುತೇಕ ಐಟಿ ಕಂಪನಿಗಳ ಆದಾಯದ ಶೇ.20ರಷ್ಟು ಆದಾಯ ಯಾಂತ್ರೀಕೃತ ಮತ್ತು ಡಿಜಿಟಲ್ ಸೇವೆಗಳನ್ನೇ ಅವಲಂಬಿಸಿದೆ. ಹೀಗಾಗಿ ಕಂಪನಿಗಳು ಇದರತ್ತ ಹೆಚ್ಚಿನ ಒಲವು ಹೊಂದಿವೆ ಎಂದೇ ಹೇಳಲಾಗುತ್ತಿದೆ. ಇವೆಲ್ಲದರ ಜತೆಗೆ ನೋಟುಗಳ ಅಪನಗದೀಕಣ ಅನೇಕ ಸಣ್ಣ-ಪುಟ್ಟ ಕಂಪನಿಗಳ ಆದಾಯದ ಮೇಲೆ ಪರಿಣಾಮ ಬೀರಿದ್ದು, ಹೀಗಾಗಿ ಉದ್ಯೋಗಕ್ಕೆ ಕುತ್ತು ಬಂದಿದೆ ಎನ್ನುವುದೂ ಅಷ್ಟೇ ಸತ್ಯ.
Related Articles
ವರದಿಯ ಪ್ರಕಾರ 2017ರಲ್ಲಿ ಎಂಜಿನಿಯರಿಂಗ್ ಪದವೀಧರ ಉದ್ಯೋಗಿಗಳ ಜತೆಗಿನ ಒಪ್ಪಂದ ಪ್ರಕ್ರಿಯೆಯಲ್ಲಿ ಇಳಿಮುಖ ಕಂಡುಬಂದಿದ್ದು, ಐಟಿ ಕ್ಷೇತ್ರದ ದಿಗ್ಗಜ ಕಂಪನಿಗಳು ಶೇ.40ರಷ್ಟು ಎಂಜಿನಿಯರಿಂಗ್ ಪದವೀಧರ ಉದ್ಯೋಗಿಗಳನ್ನು ಕಡಿತಗೊಳಿಸುವ ನಿರ್ಧಾರಕ್ಕೆ ಬಂದಿವೆ ಎನ್ನಲಾಗುತ್ತಿದೆ.
Advertisement
“ಯಾಂತ್ರೀಕೃತ ಮತ್ತು ಡಿಜಿಟಲ್ ಸೇವೆ ಸೇರಿ ಒಟ್ಟಾರೆ ತಂತ್ರಜ್ಞಾನ ಕ್ಷೇತ್ರದಲ್ಲಾದ ಕ್ರಾಂತಿಯಿಂದಾಗಿ 2025ರ ವೇಳೆಗೆ ದೇಶದಲ್ಲಿ 20 ಕೋಟಿ ಮಧ್ಯಮ ವರ್ಗದ ಯುವಕರು ಉದ್ಯೋಗವಿಲ್ಲದೇ ಅಥವಾ ಉದ್ಯೋಗ ಕಳೆದುಕೊಂಡು ಪರದಾಡಬೇಕಾದ ಸ್ಥಿತಿ ಬಂದೊದಗಬಹುದು’ ಎಂದು ಕಳೆದ ವರ್ಷ ಕರ್ನಾಟಕ ಐಟಿ ತಜ್ಞ ಮೋಹನದಾಸ್ ಪೈ ಹೇಳಿರುವ ಹೇಳಿಕೆ ಈಗ ಇಲ್ಲಿ ಸಾಕಷ್ಟು ಪ್ರಸ್ತುತವೆನಿಸಿದೆ.
ಯಾವೆಲ್ಲ ಕಂಪನಿಗಳು?* ಸಿಸ್ಕೊ: 2017ನೇ ಸಾಲಿನಲ್ಲಿ ಶೇ.7ರಷ್ಟು ಉದ್ಯೋಗಿಗಳ ವಜಾ ಪ್ರಕಟಣೆ
* ಐಬಿಎಂ: 5000 ಉದ್ಯೋಗಿಗಳ ಕಡಿತಕ್ಕೆ ಮುಂದು
* ಮೈಕ್ರೋಸಾಫ್ಟ್ : 2800 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿ, ಸ್ಮಾರ್ಟ್‌ಫೋನ್ ಬಿಸಿನೆಸ್ ಆರಂಭಿಸಲು ಮುಂದು
* ಸ್ನ್ಯಾಪ್‌ಡೀಲ್, ಕ್ರಾಫ್ಟ್ಸ್ವಿಲ್ಲಾ, ಸ್ಟೇಝಿಲ್ಲಾ, ಯೆಪ್‌ಮೀ, ಟೊಲೆಕೊÕà ಸೇರಿ ಇನ್ನೂ ಕೆಲ ಕಂಪನಿಗಳಲ್ಲಿ ವೇತನ ಕಡಿತಗೊಳಿಸಿದೆ. ಕೆಲಸದಿಂದ ತೆಗೆಯುತ್ತಿರುವ ಬಗ್ಗೆ ಪಿಂಕ್ ಸ್ಲಿಪ್ ನೀಡಿವೆ.
* ಸ್ನ್ಯಾಪ್‌ಡೀಲ್ 600, ಯೆಪ್‌ಮೀ 30 ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿದೆ.