Advertisement
ವರ್ಜೀನಿಯಾದಲ್ಲಿರುವ ಅಮೆ ರಿಕ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ನಾಸಾ)ದ ವ್ಯಾಲಾಪ್ಸ್ ಫ್ಲೈಟ್ ಫೆಸಿಲಿಟಿ ಕೇಂದ್ರದ ಮೂಲಕ “ಅಸ್ಗಾಡಿಯಾ 1 – ದ ಸ್ಪೇಸ್ ಕಿಂಗ್‌ಡಂ’ ಎಂಬ ಉಪ ಗ್ರಹವನ್ನು ಯಶಸ್ವಿ ಯಾಗಿ ಉಡಾವಣೆ ಮಾಡ ಲಾಗಿದೆ. ಈ ಉಪಗ್ರಹ ಬಾಹ್ಯಾ ಕಾಶದಲ್ಲಿ ಸುತ್ತುತ್ತಾ, ಅಸ್ಗಾಡಿಯಾ ದೇಶ ಇರಬಹುದಾದ ಗಡಿಯನ್ನು ಗುರುತಿಸಲಿದೆ! ಈಗಾಗಲೇ, ಈ ದೇಶದ ಪೌರತ್ವಕ್ಕಾಗಿ ಸುಮಾರು 3 ಲಕ್ಷ ಮಂದಿ ಆನ್‌ಲೈನ್ ಮೂಲಕ ಅರ್ಜಿಯನ್ನೂ ಹಾಕಿದ್ದಾರೆ.
ದೇಶಗಳು, ಗಡಿಗಳು, ಯುದ್ಧಗಳು, ನೂರಾರು ಕಾಯ್ದೆ ಕಟ್ಟಲೆಗಳು, ತೆರಿಗೆಗಳು ಇತ್ಯಾದಿ ಜಂಜಾಟಗಳನ್ನು ಬಿಟ್ಟು ಹಾಯಾಗಿ ಭೂಮಿಯಿಂದಲೇ ದೂರ ಹೋಗಿ ಜೀವಿಸುವ ಸಂಕಲ್ಪ- ಪರಿಕಲ್ಪನೆ ಗಳೊಂದಿಗೆ ಅಸಾYಡಿಯಾ ದೇಶವನ್ನು ಸ್ಥಾಪಿಸಲು ಐಗರ್ ಅಶುರ್ಬೆಲಿ ಎಂಬ ಆಸ್ಟ್ರಿಯಾದ ವಿಜ್ಞಾನಿಯ ನೇತೃತ್ವದ ತಂಡವೊಂದು ಈ ಪ್ರಯತ್ನಕ್ಕೆ
ಕೈಹಾಕಿದೆ. ಮುಂದಿನ ಯೋಜನೆ!
ಬಾಹ್ಯಾಕಾಶದಲ್ಲಿ ಹೋಗಿ ಮನುಷ್ಯ ಆಯುಷ್ಯ ಪೂರ್ತಿ ಜೀವಿಸುವುದು ಸದ್ಯದ ಮಟ್ಟಿಗೆ ಅಸಾಧ್ಯದ ಸಂಗತಿಯಾಗಿದೆ. ಆದರೂ ಮುಂದೊಂದು ದಿನ ಇದು ಸಾಧ್ಯವಾದರೆ ಆಗ ಅಸ್ಗಾಡಿಯಾ ದೇಶದ ಅಸ್ತಿತ್ವಕ್ಕೆ ಮಾನ್ಯತೆ ಸಿಗುತ್ತದೆ ಎಂಬುದು ಅದರ ಸೃಷ್ಟಿಕರ್ತರ ನಂಬಿಕೆ.