Advertisement
ಗಂಟೆಗೆ 70 ಸೆಂಟ್ಸ್ ವಿಸ್ತೀರ್ಣದ ಕಳೆ ತೆಗೆಯುವುದುಈ ಕಳೆ ತೆಗೆಯುವ ಯಂತ್ರ ( ಪವರ್ ವೀಡರ್) ದ ಬೆಲೆ ರೂ.29 ಸಾವಿರ ಮೌಲ್ಯವನ್ನು ಹೊಂದಿದೆ. ಪೆಟ್ರೋಲ್ ಚಾಲಿತ ಪವರ್ ಮೆಶಿನ್‌ಗಳನ್ನು ಅಳವಡಿಸಲಾಗಿದ್ದು ಪ್ರತಿ ಗಂಟೆಗೆ ಸರಿ ಸುಮಾರು 70 ಸೆಂಟ್ಸ್ ವಿಸ್ತೀರ್ಣದ ಕೃಷಿ ಭೂಮಿಯಲ್ಲಿ ಬೆಳೆದಿರುವ ಕಳೆ ತೆಗೆಯ ಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಸುಮಾರು 9 ಇಂಚು ಅಂತರದಲ್ಲಿ ಸಾಲು ನಾಟಿ ಅಥವಾ ಮುಂಗಾರು ಮಳೆಯ ಆಗಮನಕ್ಕೂ ಮುನ್ನ ಬೀಜ ಬಿತ್ತನೆ ಮಾಡಿರುವ ಕೃಷಿ ಭೂಮಿಗಳಲ್ಲಿ ಸಸಿಗಳ ನಡುವಿನ ಅಂತರದಲ್ಲಿ ಬೆಳೆದಿರುವ ಕಳೆ ಗಿಡಗಳ ಬೇರು ಸಹಿತ ತೆಗೆಯಬಲ್ಲದು .
ಕರಾವಳಿಯ ಪರಿಸರದ ಹೊಯ್ಗೆ ಕೃಷಿ ಭೂಮಿಗೆ ಉಪಯುಕ್ತವಾಗುವ ರೀತಿಯಲ್ಲಿ ಈ ಪವರ್ ವೀಡರ್‌ನ್ನು ಆವಿಷ್ಕರಿಸಲಾಗಿದೆ. ಕೃಷಿ ಭೂಮಿಯ ವಾಸ್ತವ ಸ್ಥಿತಿಯನ್ನು ಅಧ್ಯಯನ ಮಾಡಿ ಅನಂತರ ಯಂತ್ರದ ವೇಗವನ್ನು ನಿರ್ಧರಿಸಿ ಕಳೆ ತೆಗೆಯಲಾಗುವುದು. ಮಾನವ ಶಕ್ತಿಯ ಬಳಕೆ ಕಡಿಮೆಯಾಗುವುದಾದರೂ ಕೂಡಾ ಯಂತ್ರಗಳ ಕಾರ್ಯನಿರ್ವಹಣೆಗೆ ಎರಡು ಮಂದಿ ಅನಿವಾರ್ಯತೆ ಇದೆ ಎನ್ನುವುದು ಭರತ್ ಗಾಣಿಗ ಬಾರಿಕೆರೆ ಅವರ ಅಭಿಪ್ರಾಯ. ಕೃಷಿ ಚಟುವಟಿಕೆಗೆ ಮೂಲವಾಗಿ ಬೇಕಾಗುವ ಗೊಬ್ಬರ, ಸಸಿ(ಅಗೆ), ಉಳುವೆ ಯಂತ್ರ, ನಾಟಿ ಹಾಗೂ ಕಳೆ ತೆಗೆಯುವ ಕಾರ್ಯದ ಸಂಪೂರ್ಣ ಜವಾಬ್ದಾರಿಯನ್ನು ಬಾಡಿಗೆ ಆಧಾರದ ಮೇಲೆ ನಿರ್ವಹಿಸುತ್ತಾರೆ.
ಸಂಪರ್ಕ: ಕಾಳಿದಾಸ್ 9448657112
Related Articles
ಕಾಲಕ್ಕೆ ತಕ್ಕಂತೆ ಕೃಷಿ ಪದ್ಧªತಿಯನ್ನು ಮುಂದು ವರಿಸಿಕೊಂಡು ಹೋಗಬೇಕಾದ ಅನಿವಾರ್ಯ ಇದೆ. ಪ್ರಸ್ತುತ ಸಾಲು ನಾಟಿ ಹಾಗೂ ಬಿತ್ತನೆ ಪದ್ಧತಿಯಿಂದಾಗಿ ಅಗೆ (ಸಸಿ) ತೆಳುವಾಗಿ ನೆಡುವುದರಿಂದ ಇಳುವರಿ ಹೆಚ್ಚಾಗುತ್ತಿದೆ. ಆವಿಷ್ಕೃತಗೊಂಡಿರುವ ಈ ಪವರ್ ವೀಡರ್ ಬೆಲೆ ದುಬಾರಿಯಾಗಿರುವುದರಿಂದ ಗ್ರಾಮೀಣ ರೈತರು ಈ ಯಂತ್ರವನ್ನು ಖರೀದಿಸುವುದು ಕಷ್ಟ ಸಾಧ್ಯ.
– ರಾಮಚಂದ್ರ ಭಟ್ ಶಾನಾಡಿ ,
ಹಿರಿಯ ಸಾವಯವ ಕೃಷಿಕರು
Advertisement
35 ಮಂದಿ ತಂಡಕಳೆದ ಎಂಟು ವರ್ಷಗಳಿಂದಲೂ ಯಾಂತ್ರಿಕ ಕೃಷಿ ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು, ಕಳೆದ ಒಂದುವರೆ ತಿಂಗಳಿನಿಂದ ಸರಿ ಸುಮಾರು 50 ಎಕರೆಗೂ ಅಧಿಕ ವಿಸ್ತೀರ್ಣದ ಕೃಷಿ ಭೂಮಿ ನಾಟಿ ಕಾರ್ಯವನ್ನು ಮುಗಿಸಿದ್ದೇವೆ. ಅಲ್ಲದೆ 23 ಎಕರೆಗೂ ಅಧಿಕ ವಿಸ್ತೀರ್ಣದ ಕೃಷಿ ಭೂಮಿ ಬಾಡಿಗೆ ಆಧಾರದ ಮೇಲೆ ಪಡೆದುಕೊಂಡು ಸಂಪೂರ್ಣವಾಗಿ ಸುಮಾರು 35 ಮಂದಿ ತಂಡ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ.
– ಕಾಳಿದಾಸ್ ಸಾಗರ,
ಯಂತ್ರಗಳ ಮಾಲಕರು – ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ