Advertisement
ಅಂದಹಾಗೆ ಇನ್ನೇನು ಬಿಡುಗಡೆಯ ನಿರೀಕ್ಷೆಯಲ್ಲಿರುವ ಎರಡು ಸಿನೆಮಾಗಳಾದ “ಪೆಪ್ಪೆರೆರೆ ಪೆರೆರೆರೆ’ ಹಾಗೂ “ಇಂಗ್ಲೀಷ್’ ಸಿನೆಮಾದ ಹಾಡುಗಳು ಇದೀಗ ಕೋಸ್ಟಲ್‌ವುಡ್ ಅಂಗಳದಲ್ಲಿ ಸಾಕಷ್ಟು ಫೇಮಸ್ ಆಗಿದೆ. ಎಲ್ಲರ ಬಾಯಲ್ಲಿಯೂ ಈ ಸಿನೆಮಾದ ಹಾಡುಗಳು ಗುನುಗುನಿಸುತ್ತಿದೆ.
ನಿಶಾನ್ ಹಾಗೂ ವರುಣ್ ನಿರ್ಮಾಣದ, ಯುವ ನಿರ್ದೇಶಕ ಶೋಭರಾಜ್ ಪಾವೂರು ನಿರ್ದೇಶನದ “ಪೆಪ್ಪೆರೆರೆ ಪೆರೆರೆರೆ’ ಸಿನೆಮಾದ ಇತ್ತೀಚೆಗೆ ಬಿಡುಗಡೆಯಾದ ರೊಮ್ಯಾಂಟಿಕ್ ಹಾಡು ಸಾಕಷ್ಟು ಸದ್ದುಮಾಡುತ್ತಿದೆ. ಖಾಸಗಿ ಹೊಟೇಲ್‌ನಲ್ಲಿ ಯುವಜೋಡಿಗಳು ಸೇರಿಕೊಂಡು ಈ ಹಾಡಿನ ಬಿಡುಗಡೆ ಮಾಡಿದ್ದಾರೆ. ಶಶಿರಾಜ್ ರಾವ್ ಕಾವೂರು ಬರೆದಿರುವ ಶಮೀರ್ ಮುಡಿಪು ಹಾಡಿರುವ “ಕಥೆಯೊಂಜಿ ಮೋಕೆದ ಶುರುವಾಂಡ್… ಕನವೊಂಜಿ ರಂಗ್‌ದ ಮೊಡೆದಾಂಡ್’ ಹಾಡು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿದೆ. ಓಲಾ ರಾಪಿನ ಚಿಟ್ಟೆ.. ಒವ್ವಾ ಪೂಬನ ತೋಟಾ.. ಎಂಚಿನ ಸೋಜಿಗ ಒಂಜಾವೊಂದುಂಡೂ’ ಎಂಬ ಹಾಡಿನ ಲೈನ್ ಮನ ಸೆಳೆಯುತ್ತಿದೆ. ಗುರು ಬಾಯಾರ್ ಸಂಗೀತ ನಿರ್ದೇಶನ ಮತ್ತೆ ಸಕ್ಸಸ್ ಬರೆದಿದೆ. ಅಂದಹಾಗೆ, ಇದೇ ಸಿನೆಮಾದ “ಅತಳ ವಿತಳ ಶೂರ, ಮರ್ವಾಯಿ ಮಗಧೀರಾ…ಉಗುರುಡು ನೆಲ ಕೀರ.. ಕುಲಶೇಖರ’ ಹಾಡಿನ ಸದ್ದು ಇನ್ನೂ ಕಡಿಮೆ ಆಗಿಲ್ಲ ಎಂಬುದು ವಿಶೇಷ. ಉಮೇಶ್ ಮಿಜಾರ್ (ಚೋಟು) ಬರೆದಿರುವ ಈ ಹಾಡಿಗೆ ಭೋಜರಾಜ್ ವಾಮಂಜೂರು ಅವರ ಕಂಠಸಿರಿ ಕೋಸ್ಟಲ್‌ವುಡ್‌ನಲ್ಲಿ ಹೊಸ ಸಾಧ್ಯತೆಗಳನ್ನು ತೆರೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. “ತಪಲೆ ಮಂಡೆದ ಕುಪುಲುಗು ಮದಿಮಾಲೊಂಜಿ ಬೋಡುಗೆ’ ಎಂಬ ಧ್ವನಿಯೊಂದಿಗೆ ಆರಂಭವಾಗುವ ಈ ಹಾಡಿನಲ್ಲಿ ಅರವಿಂದ ಬೋಳಾರ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಸಾಯಿಕೃಷ್ಣ ಮುಂತಾದವರು ನೃತ್ಯ ಮಾಡಿದ್ದಾರೆ.
Related Articles
ತುಳು ಸಿನೆಮಾಗಳ ಪಾಲಿಗೆ ಮುಂದಿನ ತಿಂಗಳು ತೆರೆಕಾಣಲಿರುವ “ಇಂಗ್ಲೀಷ್’ ಸಿನೆಮಾ ಹೊಸ ನಿರೀಕ್ಷೆ ಮೂಡಿಸಿದ ಸಿನೆಮಾ ಅನಂತ್‌ನಾಗ್ ಸೇರಿದಂತೆ ಕರಾವಳಿಯ ಎಲ್ಲಾ ಕಲಾವಿದರು ಅಭಿನಯಿಸಿದ ಈ ಸಿನೆಮಾದ ಹಾಡು ಕೂಡ ಈಗಾಗಲೇ ಕೋಸ್ಟಲ್‌ವುಡ್‌ನಲ್ಲಿ ಸೌಂಡ್ ಮಾಡುತ್ತಿದೆ. ಮಂಗಳೂರು ದಸರಾ ಮೆರವಣಿಗೆ ಸಂದರ್ಭದಲ್ಲಿ ಒಂದು ಹಾಡಿನ ಬಿಡುಗಡೆ ನಡೆದಿತ್ತು. ಇದೀಗ ಮೊನ್ನೆ ತಾನೆ ಬಿಡುಗಡೆಯಾದ ಇನ್ನೊಂದು ಹಾಡು ರೊಮ್ಯಾಂಟಿಕ್ ಲುಕ್‌ನೊಂದಿಗೆ ಸೌಂಡ್ ಮಾಡುತ್ತಿದೆ.
Advertisement
ಲೋಕು ಕುಡ್ಲ ಬರೆದಿರುವ ಹಾಡಿಗೆ ಕದ್ರಿ ಮಣಿಕಾಂತ್ ಅವರ ಸಂಗೀತವಿದೆ. ಸುಪ್ರಿಯಾ ಲೋಹಿತ್ ಹಾಡಿರುವ “ರಂಗ್ ರಂಗೋಲಿ… ಲವ್ ಫುಲ್ ಲಾಲಿ’ ಎಂಬ ರೊಮ್ಯಾಂಟಿಕ್ ಹಾಡು ಸದ್ಯ ಕೋಸ್ಟಲ್‌ವುಡ್‌ನಲ್ಲಿ ಗುನುಗುನಿಸುತ್ತಿದೆ.
ಸೂರಜ್ ಶೆಟ್ಟಿ ಅವರ ನಿರ್ದೇಶನದ ಇಂಗ್ಲಿಷ್ ಸಿನೆಮಾವನ್ನು ಹರೀಶ್ ಶೇರಿಗಾರ್ ಹಾಗೂ ಶರ್ಮಿಳಾ ಶೇರಿಗಾರ್ ನಿರ್ಮಾಣ ಮಾಡಿದ್ದಾರೆ. ಭಾರಿ ಪ್ರಯತ್ನಪಟ್ಟು ಇಂಗ್ಲಿಷ್ ಕಲಿಯುವುದೇ ಈ ಸಿನೆಮಾದ ಪ್ರಮುಖ ವಿಷಯ. ಪರಿಶ್ರಮದಿಂದ ಏನನ್ನೂ ಮಾಡಬಹುದು ಎಂಬ ಸಂದೇಶವನ್ನೂ ಹೊಂದಿರುವ ಈ ಸಿನೆಮಾದಲ್ಲಿ ಆ ಯುವಕನು ಇಂಗ್ಲಿಷ್ ಕಲಿಯಲು ಪಡುವ ಪಾಡು, ಆಕೆಯ ಮನ ಗೆಲ್ಲುವುದು ಮತ್ತು ಆಕೆಯ ಮನೆಯವರನ್ನೂ ಮದುವೆಗೆ ಒಪ್ಪಿಸಲು ಸಫಲವಾಗುವವರೆಗೆ ಸಾಗುವ ಕಥೆ ಅತ್ಯಂತ ಕುತೂಹಲದಿಂದ ಕೂಡಿದೆ. ಮಾಲ್‌ನಲ್ಲಿ ವೇಷ ಹಾಕಿ ಗ್ರಾಹಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದ ಈತ ಏರುವ ಎತ್ತರ ಎಲ್ಲರನ್ನೂ ನಿಬ್ಬೆರಗಾಗಿಸುತ್ತದೆ.
ದಿನೇಶ್ ಇರಾ