Advertisement

ಬಸವ ತತ್ವದಲ್ಲಿದೆ ಸಮಸ್ಯೆಗೆ ಪರಿಹಾರ

01:26 PM Jan 22, 2018 | |

ಬಿದರ್: ಬಸವಣ್ಣನವರು ಸಮಾನತೆ ಸಮಾಜ ನಿರ್ಮಿಸಲು ಶ್ರಮಿಸಿದ್ದರು ಎಂದು ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್‌ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.

Advertisement

ನಗರದ ರಾಂಪುರೆ ಕಾಲೊನಿಯಲ್ಲಿ ವಚನ ವಿಜಯೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಬಸವ ಜ್ಯೋತಿ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಬಸವಣ್ಣ ಜಾತಿ, ವರ್ಣ, ವರ್ಗ ರಹಿತ, ಧರ್ಮಸಹಿತ ಕಲ್ಯಾಣ ರಾಜ್ಯ ಕಟ್ಟಲು ಹೋರಾಟ ನಡೆಸಿದ್ದರು.

ಬಡವ-ಬಲ್ಲಿದ, ಮೇಲು-ಕೀಳು ಎನ್ನುವ ಭೇದ ಭಾವ ಹೋಗಲಾಡಿಸಲು ಪ್ರಯತ್ನಿಸಿದ್ದರು. ಜಾತೀಯತೆ, ಮೂಢನಂಬಿಕೆ ವಿರುದ್ಧ ಜನಜಾಗೃತಿ ಮೂಡಿಸಿದ್ದರು. ಸ್ತ್ರೀಯರಿಗೆ ಸ್ವಾತಂತ್ರ್ಯ ಕಲ್ಪಿಸಿದ್ದರು. ಅನುಭವ ಮಂಟಪ ಸ್ಥಾಪಿಸುವ ಮೂಲಕ ಜಗತ್ತಿಗೆ ಮೊಟ್ಟ ಮೊದಲ ಬಾರಿಗೆ ಸಂಸತ್ತಿನ ಪರಿಕಲ್ಪನೆ ಪರಿಚಯಿಸಿದ್ದರು ಎಂದು ಹೇಳಿದರು.

ಬಸವ ತತ್ವದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ. ಬಸವ ತತ್ವದಂತೆ ನಡೆದರೆ ಜೀವನದಲ್ಲಿ ನೆಮ್ಮದಿ, ಸಂತೃಪ್ತಿ
ಕಾಣಬಹುದಾಗಿದೆ. ಈಗಿನ ಸಮಾಜಕ್ಕೆ ಬಸವಾದಿ ಶರಣರ ತತ್ವಗಳು ಅವಶ್ಯಕವಾಗಿವೆ ಎಂದು ಹೇಳಿದರು. ಅಕ್ಕ ಅನ್ನಪೂರ್ಣ ಅವರು ಪ್ರತಿ ವರ್ಷ ವಚನ ವಿಜಯೋತ್ಸವ ಆಚರಿಸುವ ಮೂಲಕ ಬಸವಾದಿ ಶರಣರ ವಿಚಾರಗಳನ್ನು
ಜನಮನಕ್ಕೆ ತಲುಪಿಸಲು ಶ್ರಮಿಸುತ್ತಿದ್ದಾರೆ. ಬಸವ ತತ್ವ ಪ್ರಚಾರಕ್ಕಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು
ಆಯೋಜಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಡಾ| ಗಂಗಾಂಬಿಕೆ ಅಕ್ಕ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ರಾಜಕುಮಾರ ಮಂಗಲಗಿ, ರಾಜಕುಮಾರ ಪಾಟೀಲ, ವೀರಶೆಟ್ಟಿ ಖ್ಯಾಮಾ, ಧೂಳಪ್ಪ ಬೆಲ್ದಾಳೆ, ರಾಮಶೆಟ್ಟಿ ಹಾವಶೆಟ್ಟಿ, ಸುರೇಶ, ಅನೀಲ, ಕರಬಸಪ್ಪ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next