Advertisement

Tamil Nadu: ರಾಜ್ಯಪಾಲದ ಜಾತ್ಯತೀತತೆ ಹೇಳಿಕೆಗೆ ಕಿಡಿ

12:25 AM Sep 25, 2024 | Team Udayavani |

ಚೆನ್ನೈ: “ಜಾತ್ಯತೀತತೆಯು ಐರೋಪ್ಯ ಪರಿಕಲ್ಪನೆಯಾಗಿದ್ದು, ಭಾರತಕ್ಕೆ ಅದರ ಅಗತ್ಯವಿಲ್ಲ’ ಎಂಬ ತಮಿಳುನಾಡು ರಾಜ್ಯಪಾಲ ಆರ್‌.ಎನ್‌.ರವಿ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಇಂತಹ ವ್ಯಕ್ತಿಯನ್ನು ಕೇಂದ್ರ ಸರಕಾರವು ಸಾಂವಿಧಾನಿಕ ಹುದ್ದೆಗೆ ನೇಮಿಸಿದ್ದು ಹೇಗೆಂದು ವಿಪಕ್ಷಗಳು ಪ್ರಶ್ನಿಸಿವೆ.

Advertisement

ರವಿ ಹೇಳಿಕೆಗೆ ಆಕ್ಷೇಪಿಸಿರುವ ಸಿಪಿಎಂ ನಾಯಕಿ ಬೃಂದಾ ಕಾರಟ್‌, ಈ ವ್ಯಕ್ತಿ ಸಂವಿಧಾನದ ಹೆಸರಿನಲ್ಲೇ ಪ್ರಮಾಣವಚನ ಸ್ವೀಕರಿಸಿದ್ದಾರೆಂದು ನಾನು ಭಾವಿಸುತ್ತೇನೆ. ಮನುಸ್ಮತಿ ಜಾರಿಗೊಳಿಸುವ ಆರ್‌ಎಸ್‌ಎಸ್‌ ಮನಃಸ್ಥಿತಿಯನ್ನು ಬಿಂಬಿಸುವ ಇಂಥವರು ಮುಂದೊಂದು ದಿನ ಸಂವಿಧಾನವನ್ನೇ ವಿದೇಶಿ ಪರಿಕಲ್ಪನೆ ಎನ್ನಬಹುದು ಎಂದು ಟೀಕಿಸಿದ್ದಾರೆ.

“ಅಂಬೇಡ್ಕರ್‌ ದೇವಪ್ರಭುತ್ವ ಪರಿಕಲ್ಪನೆಯನ್ನು ತಿರಸ್ಕರಿಸಿದ್ದರು. ಜಾತ್ಯತೀತತೆ ಎಂದರೆ ಧರ್ಮ ಮತ್ತು ರಾಜಕಾರಣವನ್ನು ಪ್ರತ್ಯೇಕಿಸುವುದಾಗಿದ್ದು, ಚುನಾವಣ ಉದ್ದೇಶಗಳಿಗಾಗಿ ದೇವರನ್ನು ಎಳೆದು ತರಬೇಡಿ’ ಎಂದು ಸಿಪಿಐ ನಾಯಕ ಡಿ.ರಾಜಾ ಹೇಳಿದ್ದಾರೆ.

ರಾಜ್ಯಪಾಲರ ಹೇಳಿಕೆ ಒಪ್ಪುವುದೇ ಆದರೆ ಒಕ್ಕೂಟ ವ್ಯವಸ್ಥೆಯೂ ಐರೋಪ್ಯ ವಲ್ಲವೇ? ಹಾಗೆಂದು ಅದನ್ನು ಕಿತ್ತೂಗೆ ಯ­ಲಾಗುತ್ತದೆಯೇ ಎಂದು ಕಾಂಗ್ರೆಸ್‌ ನಾಯಕ ಚಿದಂಬರಂ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next