Advertisement

ಚಿತ್ತ ರಂಜಿಸಿದ ಏಕವ್ಯಕ್ತಿ ಯಕ್ಷಗಾನ

12:00 PM Oct 26, 2018 | |

ಸವಣೂರು ವಿನಾಯಕ ಸಭಾಭವನದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಕಲಾ ಕಾವ್ಯ ಸಮ್ಮೇಳನ ದ ಕಾರ್ಯ ಕ್ರಮದಲ್ಲಿ ಚಿತ್ತರಂಜನ್‌ ಕಡಂದೇಲು ಇವರ ಏಕವ್ಯಕ್ತಿ ಪ್ರದರ್ಶನ ಜರಗಿತು.

Advertisement

ಸುದರ್ಶನ ವಿಜಯ ಪ್ರಸಂಗವನ್ನು ಸಬ್ಬಣಕೋಡಿ ರಾಂ ಭಟ್‌ನಿರ್ದೇಶನದಲ್ಲಿ ಪ್ರದರ್ಶಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಸುಧೀಶ್‌ ಪಾಣಾಜೆ ಮತ್ತು ಮದ್ದಳೆಯಲ್ಲಿ ರಾಘವ ಬಲ್ಲಾಳ್‌ ಕಾರಡ್ಕ ,ಚೆಂಡೆಯಲ್ಲಿ ಅಂಬೆಮೂಲೆ ಶಿವಶಂಕರ ಭಟ್‌, ಚಕ್ರತಾಳದಲ್ಲಿ ಬಾಲಕೃಷ್ಣ ಏಳ್ಕಾನ ಸಹಕರಿಸಿದರು. 

ಉತ್ತಮ ಹೆಜ್ಜೆಗಾರಿಕೆ ನಾಟ್ಯಗಳೊಂದಿಗೆ ಸುದರ್ಶನನ ವೀರತ್ವವನ್ನು ಸುಂದರವಾಗಿ ಪ್ರತಿಬಿಂಬಿಸಿದ ಬಾಲಕನ ಪ್ರತಿಭೆಯನ್ನು ಗಣ್ಯರು ಶ್ಲಾ ಸಿದರು. ವಿಷ್ಣು ವಿನ ಆಯುಧ ಸುದರ್ಶನ ಚಕ್ರ. ಜಂಭದಿಂದ ತಾನಿರುವ ಕಾರಣ ಮಾತ್ರವೇ ವಿಷ್ಣುವಿಗೆ ಶತ್ರುಗಳನ್ನು ಸಂಹರಿಸಲು ಸಾಧ್ಯವಾದದ್ದು ಎಂದು ಹೇಳುತ್ತಾ ಕೊನೆಗೆ ದಾನವ ಶತ್ರುಪ್ರಸೂದನನನ್ನು ವಿಷ್ಣುವಿನ ಪರವಾಗಿ ವಧಿಸಿ ವಿಜಯ ಸಾಧಿಸುವುದು ಇದು ಕಥೆ. ವಿಷ್ಣುವಿನ ಬೇರೆ ಬೇರೆ ಅವತಾರಗಳಲ್ಲಿ ಸುದರ್ಶನ ಹೇಗೆ ವಿಷ್ಣುವಿಗೆ ಬೆನ್ನೆಲುಬಾಗಿದ್ದ ಎಂಬುದನ್ನು ತನ್ನ ನಾಟ್ಯ ಹೆಜ್ಜೆಗಾರಿಕೆಯ , ಅಭಿನಯ, ಮಾತುಗಾರಿಕೆಗಳ ಮೂಲಕ ಉತ್ತಮವಾಗಿ ಅಭಿನಯಿಸಿದ ಚಿತ್ತರಂಜನ್‌ರ ಕಲಾ ಪ್ರತಿಭೆ ಶ್ಲಾಘನೆಗೆ ಪಾತ್ರವಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next