Advertisement
ನಗರದ ನೌಕರರ ಭವನದಲ್ಲಿ ಅಖೀಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯು ಹಮ್ಮಿಕೊಂಡಿದ್ದ ಎರಡನೇ ರಾಜ್ಯಮಟ್ಟದ ರೈತ ಕೃಷಿ ಕಾರ್ಮಿಕರ ಸಮ್ಮೇಳನದ ಎರಡನೇ ದಿನದ ಪ್ರತಿನಿಧಿ ಅಧಿವೇಶನದಲ್ಲಿ ಅವರು ಮಾತನಾಡಿದರು.
ಶಿವದಾಸ್ ಘೋಷ್ ಭಾವಿಸಿದ್ದರು. ಸಂಘಟನಾಕಾರರಿಗೆ ಕ್ರಾಂತಿಕಾರಿ ದಿಟ್ಟತನ ಬೇಕು. ಪ್ರತಿಕೂಲ ಸನ್ನಿವೇಶವನ್ನೂ ಅನುಕೂಲಕರವಾಗಿ ಬದಲಾಯಿಸುವ ಛಾತಿ ದುಡಿಯುವ ಜನರ ಶಕ್ತಿಯನ್ನು ಅರಿತಾಗ ಬರುತ್ತದೆ. ಅದಕ್ಕಾಗಿ ಕಾರ್ಮಿಕ ವರ್ಗದ ಶಕ್ತಿಯನ್ನು ಒಗ್ಗೂಡಿಸಿ ಸಮಾಜದ ಆಮೂಲಾಗ್ರ ಬದಲಾವಣೆಗೆ ಶ್ರಮಿಸಬೇಕು ಎಂದರು.ದೆಹಲಿ ರೈತ ಹೋರಾಟವನ್ನು ನಮ್ಮ ಸಂಘಟನೆ ಮುನ್ನಡೆಸಿಲ್ಲ.
Related Articles
Advertisement
ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಕೆ.ಉಮಾ ಮಾತನಾಡಿ, ಕಮ್ಯೂನಿಸ್ಟ್ ಸರ್ಕಾರದ ಹೆಸರಿನಲ್ಲಿ ನಕಲಿ ಕಮ್ಯುನಿಸ್ಟರು ಜಾಗತೀಕರಣ ನೀತಿಗಳನ್ನು ಬಂಗಾಳ ಮತ್ತು ಕೇರಳಗಳಲ್ಲಿ ಜಾರಿಗೊಳಿಸಲು ಪ್ರಯತ್ನಿಸಿದರು. ನಂದಿಗ್ರಾಮ, ಸಿಂಗೂರ್‌ಗಳಲ್ಲಿ ಸಲೀಮ್ ಮತ್ತು ಟಾಟಾದಂತಹ ಕಾರ್ಪೊರೇಟ್ ಕಂಪನಿಗಳಿಗೆ ರೈತರ ಫಲವತ್ತಾದ ಭೂಮಿ ಧಾರೆಯೆರೆಯಲು ಹೊರಟಿದ್ದರು.ಆದರೆ ಇದರ ವಿರುದ್ಧ ರಕ್ತಸಿಕ್ತ ಹೋರಾಟ ನಡೆಯಿತು. ಕಾರ್ಪೊರೇಟ್ ದೈತ್ಯರು ಜನತೆಯ ಶಕ್ತಿಯ ಮುಂದೆ ನಿಲ್ಲದೇ ಓಡಿಹೋಗಬೇಕಾಯಿತು.
ಈ ಹೋರಾಟದ ನೇತೃತ್ವ ವಹಿಸಿದ್ದು ನಮ್ಮ ಏಐಕೆಕೆಎಂಎಸ್ ಸಂಘಟನೆ ಎಂಬುದು ಹೆಮ್ಮೆಯ ಸಂಗತಿ ಎಂದರು. ಅಧಿವೇಶನದಲ್ಲಿ ಸಂಘಟನಾತ್ಮಕ ವರದಿ, ಕೋಮು ಸೌಹಾರ್ದ ಕಾಪಾಡುವ ಕುರಿತು ಗೊತ್ತುವಳಿ ಮಂಡಿಸಲಾಯಿತು. ಸಂಘಟನೆಯ ಹೊಸ ರಾಜ್ಯ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಎಚ್.ವಿ. ದಿವಾಕರ, ಉಪಾಧ್ಯಕ್ಷರಾಗಿ ಭಗವಾನ್‌ರೆಡ್ಡಿ, ವಿ. ನಾಗಮ್ಮಾಳ್, ಎಚ್.ಪಿ. ಶಿವಪ್ರಕಾಶ, ಲಕ್ಷ್ಮಣ ಜಡಗನ್ನವರ, ಶರಣಗೌಡ ಗೂಗಲ್, ಕಾರ್ಯದರ್ಶಿಯಾಗಿ ಎಂ.ಶಶಿಧರ, ಸಹ ಕಾರ್ಯದರ್ಶಿಗಳಾಗಿ ಎಸ್.ಬಿ. ಮಹೇಶ್, ವಿ. ದೀಪಾ, ಗೋವಿಂದ ಬಳ್ಳಾರಿ, ಕಚೇರಿ ಕಾರ್ಯದರ್ಶಿಯಾಗಿ ಎಸ್.ಎನ್. ಸ್ವಾಮಿ ಮತ್ತು ಖಜಾಂಚಿಯಾಗಿ ಗಣಪತ್ ರಾವ್ ಮಾನೆ ಆಯ್ಕೆಯಾದರು. 20 ಜನ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು 107 ಜನ ಕೌನ್ಸಿಲ್ ಸದಸ್ಯರನ್ನೂ ಆಯ್ಕೆ ಮಾಡಲಾಯಿತು. ಎಸ್ ಯುಸಿಐ (ಸಿ) ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ, ಗಂಗಾಧರ ಬಡಿಗೇರ ಇದ್ದರು.