Advertisement
ಲಾಕ್‌ಡೌನ್ ವೇಳೆ ಸಂಘ ಸಂಸ್ಥೆಗಳು ನಿರಾಶ್ರಿತರು, ವಲಸೆ ಕಾರ್ಮಿಕರಿಗೆ ಊಟದ ವ್ಯವಸ್ಥೆಗಳನ್ನು ಮಾಡಿದ್ದು ಇದಕ್ಕೆ ಅಗತ್ಯವಿರುವ ತರಕಾರಿಗಳನ್ನು ಹಲವು ದಿನಗಳಿಂದ ಬಸವರಾಜ್ ನೀಡುತ್ತಿದ್ದಾರೆ. ಮೂಲತಃ ರಾಣೆಬೆನ್ನೂರಿನವರಾದ ಇವರು 25 ವರ್ಷಗಳಿಂದ ಉಡುಪಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದು, ಪ್ರತಿ 2 ದಿನಕ್ಕೊಮ್ಮೆ ತರಕಾರಿಗಳನ್ನು ಸಂಘ ಸಂಸ್ಥೆಗೆ ನೀಡುತ್ತಿದ್ದಾರೆ. 3 ಕ್ವಿಂಟಲ್‌ಗೂ ಹೆಚ್ಚು ತರಕಾರಿ ಈಗಾಗಲೇ ನೀಡಿದ್ದಾರೆ. ಕೆಲವು ಕೂಲಿಕಾರ್ಮಿಕರು, ನಿರಾಶ್ರಿತರಿಗೆ ಉಚಿತ ಮತ್ತು ಕಡಿಮೆ ದರದಲ್ಲಿಯೂ ತರಕಾರಿಗಳನ್ನು ನೀಡುತ್ತಿದ್ದಾರೆ.
ವ್ಯಾಪಾರದಲ್ಲಿ ಹಾಕಿದ ಹಣದ ಅಸಲು ಬಂದ ಬಳಿಕ ನನ್ನಲ್ಲಿರುವ ತರಕಾರಿಯನ್ನು ಹಸಿದ ಹೊಟ್ಟೆಗಳಿಗೆ, ಊಟ ತಯಾರಿಸುವ ಸಂಘ ಸಂಸ್ಥೆಗಳಿಗೆ ನೀಡುತ್ತಿದ್ದೇನೆ. ಇದೊಂದು ಅಳಿಲು ಸೇವೆ.
-ಬಸವರಾಜ್, ತರಕಾರಿ ವ್ಯಾಪಾರಿ