Advertisement

ಗುಬ್ಬಿ ಮೊಗದಲ್ಲಿ ನಗು

06:01 PM Aug 06, 2019 | Lakshmi GovindaRaj |

ಸಿನಿಮಾವೊಂದರ ಟ್ರೇಲರ್‌ ಹಿಟ್‌ ಆದರೆ, ಆಯಾ ಚಿತ್ರತಂಡಕ್ಕೆ ಒಂದು ವಿಶ್ವಾಸ ಬರುತ್ತದೆ. ಅದು ಸಿನಿಮಾ ಹಿಟ್‌ ಆಗುವ ಮೂಲಕ. ಟ್ರೇಲರ್‌ ಅನ್ನು ಇಷ್ಟಪಟ ಮಂದಿ ಸಿನಿಮಾವನ್ನು ಗೆಲ್ಲಿಸುತ್ತಾರೆಂಬ ನಂಬಿಕೆ ಇರುತ್ತದೆ. ಈಗ “ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರತಂಡ ಕೂಡಾ ಇಂತಹ ನಂಬಿಕೆಯೊಂದಿಗೆ ಎದುರು ನೋಡುತ್ತಿದೆ. ಅದಕ್ಕೆ ಕಾರಣ ಟ್ರೇಲರ್‌ ಹಿಟ್‌ ಆಗಿರೋದು.

Advertisement

ಈ ಹಿಂದೆ ಹಲವು ಸಿನಿಮಾಗಳಲ್ಲಿ ಹಾಸ್ಯ ಪಾತ್ರದ ಮೂಲಕ ಗಮನ ಸೆಳೆದಿದ್ದ ಸುಜಯ್‌ ಶಾಸ್ತ್ರಿ “ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಒಂದು ಔಟ್‌ ಅಂಡ್‌ ಔಟ್‌ ಕಾಮಿಡಿ ಸಿನಿಮಾವಾಗಿ ಪ್ರೇಕ್ಷಕರಿಗೆ ಇಷ್ಟವಾಗುವ ಸೂಚನೆಯನ್ನು ಟ್ರೇಲರ್‌ ನೀಡಿದೆ. ಪರಿಣಾಮವಾಗಿ ಬಿಡುಗಡೆಯಾದ ಮೊದಲ ದಿನವೇ 5ಲಕ್ಷಕ್ಕೂ ಅಧಿಕ ಮಂದಿ ಟ್ರೇಲರ್‌ ವೀಕ್ಷಿಸಿದ್ದಾರೆ.

ಟ್ರೇಲರ್‌ನಲ್ಲಿ ಇರುವ ಕಾಮಿಡಿ ಪಂಚಿಂಗ್‌ನಿಂದ ಎಲ್ಲರ ಗಮನ ಸೆಳೆಯುತ್ತಿದ್ದು, ಇದನ್ನು ನೋಡಿ ನೆಟ್ಟಿಗರು ಕಾಮೆಂಟ್‌ ಹಾಕುತ್ತಿದ್ದಾರೆ. ಪ್ರಮೋದ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಾಫ್ಟ್ವೇರ್‌ ಯುವಕನಾಗಿ ರಾಜ್‌ ಬಿ.ಶೆಟ್ಟಿ ನಟಿಸಿದ್ದು, ನಾಲ್ವರು ಸ್ನೇಹಿತರ ಸ್ಟೋರಿ ಚಿತ್ರದಲ್ಲಿದೆ. ಚಿತ್ರದಲ್ಲಿ ಕವಿತಾ ಗೌಡ ನಾಯಕಿ. ಈ ಚಿತ್ರವನ್ನು ಟಿ.ಆರ್‌. ಚಂದ್ರಶೇಖರ್‌ ತಮ್ಮ ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ನಡಿ ನಿರ್ಮಿಸುತ್ತಿದ್ದಾರೆ. ಚಿತ್ರ ಆಗಸ್ಟ್‌ 15 ರಂದು ತೆರೆಕಾಣುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next