Advertisement
ಆರ್.ಟಿ.ನಗರ, ಶಿವಾಜಿನಗರ, ಹಲಸೂರು, ಶಾಂತಿನಗರ ಮತ್ತು ಇಂದಿರಾ ನಗರ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರದೇಶಗಳ ಮೂಲಕ ಬೆಳ್ಳಂದೂರನ್ನು ಸೇರುವ ಛಲ್ಲಘಟ್ಟ ಕಣಿವೆಯನ್ನ ವೈಜ್ಞಾನಿಕವಾಗಿ ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದಾರೆ. ನಗರದ ನಾಲ್ಕು ಕಣಿವೆಗಳ ಪೈಕಿ ಛಲ್ಲಘಟ್ಟ ಅತಿ ಸಣ್ಣ ಕಣಿವೆಯಾಗಿದೆ. ಕಣಿವೆಯು ಕೇವಲ 33 ಕಿ.ಮೀ.ಗಳಷ್ಟು ಉದ್ದ ಹರಿಯುತ್ತಿದ್ದರೂ ನಿರ್ವಹಣೆಗೆ ಮಹತ್ವ ನೀಡದಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
Related Articles
ವರೆಗೆ ಕೇವಲ 200 ಮೀಟರ್‌ನಷ್ಟು ಕಾಲುವೆ ಯಲ್ಲಿ ಹೂಳೆತ್ತಲಾಗಿದ್ದು, ಮಳೆಗಾಲದೊಳಗೆ 33 ಕಿ.ಮೀ. ವ್ಯಾಪ್ತಿಯಲ್ಲಿ ಹೂಳೆತ್ತುವುದು ಅಸಾಧ್ಯವಾಗಲಿದೆ. ಹೀಗಾಗಿ ಅನಾಹುತ ಸಂಭವಿಸುವ ಸ್ಥಳಗಳಲ್ಲಿ ಆದ್ಯತೆಯ ಮೇರೆಗೆ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ.
Advertisement
ಶಾಲಾ ಮಕ್ಕಳಿಗೂ ತೊಂದರೆ!ಶಿವಾಜಿನಗರದ ನಾಲಾ ರಸ್ತೆಯಲ್ಲಿ ಛಲ್ಲಘಟ್ಟ ಕಣಿವೆಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಸೇತುವೆಯನ್ನು ಬಳಸಿ ಮಕ್ಕಳು ಸಮೀಪದ ಬಿಕೆಎಎಂ ಶಾಲೆಗೆ ತೆರಳುತ್ತಾರೆ. ಕಾಲುವೆಯಲ್ಲಿ ಹೂಳು ತುಂಬಿರುವುದರಿಂದಾಗಿ ನೀರು ಈಗಲೇ ಸೇತುವೆಯವರೆಗೆ ಹರಿಯುತ್ತಿದ್ದು, ಮಳೆಗಾಲದಲ್ಲಿ ನೀರು ಸೇವೆಯ ಮೇಲ್ಭಾಗದಲ್ಲಿ ನೀರು ಹರಿಯುತ್ತದೆ. ಜತೆಗೆ ಸೇತುವೆ ಸಂಪೂರ್ಣವಾಗಿ ಶಿಥಿಲಗೊಂಡಿರುವುದರಿಂದಾಗಿ ಮಳೆಗಾದಲ್ಲಿ ಅನಾಹುತ ಸಂಭವಿಸುವ ಆತಂಕ ಎದುರಾಗಿದೆ. ಇದರೊಂದಿಗೆ ಸೇತುವೆ ಮೇಲೆ ಸಾರ್ವಜನಿಕರು ದ್ವಿಚಕ್ರ ವಾಹನಗಳ ಮೂಲಕ ಸಂಚರಿಸುತ್ತಾರೆ. ಪಾಲಿಕೆಯ ಅಧಿಕಾರಿಗಳು ಶೀಘ್ರ ಸೇತುವೆಯನ್ನು ಎತ್ತರಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ರಾಜಕಾಲುವೆಗಳಲ್ಲಿ ಮ್ಯಾನ್‌ಹೋಲ್!
ಮಳೆನೀರು ಸರಾಗವಾಗಿ ಹರಿದು ಹೋಗುವ ಉದ್ದೇಶದಿಂದ ನಿರ್ಮಿ ಸುವ ರಾಜಕಾಲುವೆಗಳಲ್ಲಿ ಯಾವುದೇ ರೀತಿಯ ಕಾಮಗಾರಿಯನ್ನು ನಡೆಸಬಾರದು ಎಂಬ ನಿಯಮವಿದೆ. ಆದರೆ, ಜಲಮಂಡಳಿಯ ಅಧಿ ಕಾರಿಗಳು ಛಲ್ಲಘಟ್ಟ ಕಣಿವೆಯ ಹಲವಾರು ಭಾಗಗಳಲ್ಲಿ ಕಾನೂನು ಭಾಹಿರವಾಗಿ ಮ್ಯಾನ್‌ಹೋಲ್‌ಗಳನ್ನು ನಿರ್ಮಾಣ ಮಾಡಿದ್ದಾರೆ. ಇದ
ರಿಂದಾಗಿ ಮ್ಯಾನ್‌ಹೋಲ್‌ಗಳು ಉಕ್ಕಿಹರಿದಾಗ ಒಳಚರಂಡಿ ನೀರು ಕಾಲುವೆಯನ್ನು ಸೇರುವುದರೊಂದಿಗೆ, ನೀರು ಹರಿಯಲು ಸಹ ತೊಂದ ರೆಯಾಗುತ್ತಿದ್ದರೂ, ಪಾಲಿಕೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ಛಲ್ಲಘಟ್ಟ ಹರಿಯುವ ಮಾರ್ಗ!
ಬೆಂಗಳೂರು ಅರಮನೆಯ ನಂದಿದುರ್ಗ ಭಾಗದಿಂದ ಆರಂಭವಾಗುವ ಛಲ್ಲಘಟ್ಟ ಕಾಲುವೆಯು ಆರ್.ಟಿ.ನಗರ, ಗಂಗೇನಹಳ್ಳಿ ಮೂಲಕವಾಗಿ ಶಿವಾಜಿನಗರ, ಹಲಸೂರು, ಶಾಂತಿನಗರ, ಇಂದಿರಾನಗರ, ಕೋಡಿಹಳ್ಳಿ, ಎಚ್‌ಎಎಲ್ ವಿಮಾನ ನಿಲ್ದಾಣ ಸಮೀಪ ಹರಿದು ಬೆಳ್ಳಂದೂರು ಕೆಂಪಾಪುರದ ಮೂಲಕ ನೇರವಾಗಿ ಬೆಳ್ಳಂದೂರು ಕೆರೆಯನ್ನು ಸೇರುತ್ತದೆ. * ವೆಂ.ಸುನೀಲ್ ಕುಮಾರ್