ಎಂದು ಸ್ಪಷ್ಟಪಡಿಸಿದರು.
Advertisement
ಮೈಸೂರು ವಿವಿಗೆ ಸೇರಿದಂತೆ ನಗರದ ಕುರುಬರಹಳ್ಳಿಯಲ್ಲಿ 8 ಎಕರೆ, ವಿವಿಯ ಕ್ರಾಫರ್ಡ್ ಭವನದ ಉತ್ತರ ಭಾಗದಲ್ಲಿ 8 ಎಕರೆ ಹಾಗೂ ಕುಕ್ಕರಹಳ್ಳಿ ಕೆರೆ ಆವರಣದ 22 ಎಕರೆ ಜಾಗ ಒತ್ತುವರಿಯಾಗಿದೆ. ಇದರ ಮೊದಲೆರಡು ಪ್ರಕರಣ ನ್ಯಾಯಾಲಯದಲ್ಲಿ ದೆ ಎಂದರು. ಗುಲ್ಬರ್ಗ ವಿವಿ ಸ್ನಾತಕೋತ್ತರ ಕೇಂದ್ರ ಆವರಣದ ಹಾಲಿಹಳ್ಳಿಕೆ ಗ್ರಾಮದಲ್ಲಿ 4 ಎಕರೆ ಜಾಗ, ಚರ್ಚ್‌ಗೆಂದು ಹಾಗೂ ಸುಮಾರು 5 ಎಕರೆ ಜಾಗವನ್ನು ಯಲ್ಲಾಲಿಂಗ ಮಠಕ್ಕೆ ಅತಿಕ್ರಮಣ ಆಗಿದ್ದು, ಸ್ಥಳೀಯ ಠಾಣೆಗೆ ದೂರು ನೀಡಲಾಗಿದೆ. ಗಂಗೂಬಾಯಿ ಹಾನಗಲ್ ವಿವಿಯ ಹುಣಸೂರು ತಾಲೂಕಿನಲ್ಲಿ 12 ಎಕರೆ ಜಾಗ ಒತ್ತುವರಿ ಈ ಸಂಬಂಧ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಒತ್ತುವರಿಯಾಗಿದೆ ಎಂದರು. ಪ್ರತಿಧ್ವನಿಸಿದ ಅತಿಥಿ ಉಪನ್ಯಾಸಕರ ವೇತನ ವಿಳಂಬ
ವಿಧಾನಸಭೆ: ರಾಜ್ಯದಲ್ಲಿ ಅತಿಥಿ ಉಪನ್ಯಾಸಕರ ವೇತನ ವಿಳಂಬ ವಿಚಾರ ವಿಧಾನಸಭೆಯಲ್ಲಿ ಬುಧವಾರ ಪ್ರತಿಧ್ವನಿಸಿ, ಬಾಕಿ
ವೇತನವನ್ನು ಆದಷ್ಟು ಬೇಗ ಪಾವತಿ ಮಾಡಬೇಕೆಂದು ಪ್ರತಿಪಕ್ಷ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರು. ಕಾಂಗ್ರೆಸ್ ಶಾಸಕ ಜೆ.ಆರ್. ಲೋಬೋ ಸದನದಲ್ಲಿ ವಿಷಯ ಪ್ರಸ್ತಾಪಿಸಿ, ಕಳೆದ ಆರು ತಿಂಗಳಿಂದ ಹಲವು ಕಾಲೇಜುಗಳಲ್ಲಿ ಗುತ್ತಿಗೆ ಆಧಾರದಲ್ಲಿ
ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ ವೇತನ ಪಾವತಿಯಾಗಿಲ್ಲ ಎಂದು ಹೇಳಿದರು.
Related Articles
ಎದುರಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಆರು ತಿಂಗಳಿನಿಂದ ವೇತನ ಪಾವತಿಯಾಗದಿರುವುದು ಗಂಭೀರ ವಿಚಾರ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಕ್ರಮ ತೆಗೆದುಕೊಳ್ಳಬೇಕು. ಜತೆಗೆ, ಈ ವಿಚಾರದ ಬಗ್ಗೆ ಸದನದಲ್ಲಿ ವಿಸೃತ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
Advertisement
ಪ್ರತಿಪಕ್ಷದವರ ಕೋರಿಕೆ ಮನ್ನಿಸಿದ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅತಿಥಿ ಉಪನ್ಯಾಸಕರ ವೇತನ ಪಾವತಿ ವಿಳಂಬ ವಿಚಾರದ ಬಗ್ಗೆ ಚರ್ಚೆಗೆ ಅರ್ಧ ಗಂಟೆ ಕಾಲಾವಕಾಶ ನೀಡುವುದಾಗಿ ತಿಳಿಸಿದರು.
ಹೊರಗುತ್ತಿಗೆ ಡಾಟಾ ಎಂಟ್ರಿ ಆಪರೇಟರ್ಗೆ ಕೃಪಾಂಕವಿಧಾನಪರಿಷತ್ತು: ಗ್ರಾಮ ಪಂಚಾಯ್ತಿಗಳಲ್ಲಿ ಡಾಟಾ ಎಂಟ್ರಿ ಆಪರೇಟರ್‌ಗಳ ನೇರ ನೇಮಕಾತಿ ವೇಳೆ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಮತ್ತು ಇನ್ನೂ ಅನುಮೋದನೆಗೊಳ್ಳದ ಆಪರೇಟರ್ ಗಳ ಸೇವೆಗೆ ವಾರ್ಷಿಕ ಶೇಕಡಾವಾರು ಗುಣಾತ್ಮಕ
ಅಂಕಗಳನ್ನು ನೀಡಲಾಗುವುದು ಎಂದು ಗ್ರಾಮೀಣಾ ಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ. ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ನೇರ ನೇಮಕಾತಿ ವೇಳೆ ಈಗಾಗಲೇ ಸೇವೆ ಸಲ್ಲಿಸುತ್ತಿರುವ
ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ನ್ಯಾಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಡಾಟಾ ಎಂಟ್ರಿ ಆಪರೇಟರ್‌ಗಳು 1 ವರ್ಷ ಸೇವೆ ಪೂರ್ಣಗೊಳಿಸಿದ್ದರೆ ಅವರಿಗೆ ಶೇ.3ರಷ್ಟು ಗುಣಾತ್ಮಕ ಅಂಕ ನೀಡಲು
ತೀರ್ಮಾನಿಸಲಾಗಿದೆ. ಡಾಟಾ ಎಂಟ್ರಿ ಆಪರೇಟರ್ ಅದೇ ಪಂಚಾಯಿತಿ ವ್ಯಾಪ್ತಿಯ ನಿವಾಸಿ ಆಗಿದ್ದರೆ, ಅದಕ್ಕೆ ಶೇ.5ರಷ್ಟು ಗುಣಾತ್ಮಕ ಅಂಕ ನೀಡಲಾಗುವುದು. ಸೇವೆಗೆ ಕನಿಷ್ಠ ಶೇ. 5ರಷ್ಟು ಗುಣಾತ್ಮಕ ಅಂಕಗಳು ನೀಡಬೇಕು ಎಂಬ ಬೇಡಿಕೆ ಇದೆ ಎಂದರು.