Advertisement

Politics: ಸೈಟ್ ವಾಪಸ್ ನೀಡಿದ್ದು,ಪಾರ್ವತಿಯವರ ತ್ಯಾಗ ಮನೋಭಾವನೆ ತೋರಿಸುತ್ತೆ: ಡಿ. ಸುಧಾಕರ್

05:23 PM Oct 02, 2024 | Team Udayavani |

ಚಿತ್ರದುರ್ಗ: ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಾರೆ. ಅವರ ಅಧಿಕಾರಾವಧಿಯಲ್ಲಿ ಆಗಿದ್ದನ್ನು ಬಿಜೆಪಿಯವರು ಮರೆತಿದ್ದಾರೆ ಎಂದು ಸಚಿವ ಡಿ. ಸುಧಾಕರ್ ಹೇಳಿದರು.

Advertisement

ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಕೆಟ್ಟ ಮೇಲೆ ಬುದ್ದಿ ಬಂತು ಎಂಬ ಬಿ.ವೈ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

ಮುಂದುವರೆದು ಮಾತನಾಡಿ, ಅವರ ಅಧಿಕಾರದಲ್ಲಿ ಎಷ್ಟೋ ಕಡೆ ಲಂಚಾವತಾರ ತಾಂಡವ ಆಡುತ್ತಿತ್ತು. ಪತಿಗೆ ಚ್ಯುತಿ ಬರಬಾರದು ಅಂತಾ ಪಾರ್ವತಮ್ಮ ಸೈಟ್ ಹಿಂದಿರುಗಿಸಿದ್ದಾರೆ. ಅವರ ಭಾವನೆಗೆ ಬೆಲೆ ಕೊಡುವ ಕೆಲಸ ಕಾಂಗ್ರೆಸ್ ನಾಯಕರು‌ ಮಾಡ್ತೀವಿ ಎಂದರು.

ತಪ್ಪು ಮಾಡದ ಸಿದ್ದರಾಮಯ್ಯ ಸೈಟ್ ಯಾಕೆ ವಾಪಸ್ ಕೊಟ್ಟರು ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆಪಾದನೆ ಬಂದ ಹಿನ್ನೆಲೆ ಸೈಟ್ ಹಿಂದಿರುಗಿಸಿದ್ದಾರೆ. ಯಾರದ್ದೋ ಮಾತು ಕೇಳಿ ಸೀತಾ ಮಾತೆಯನ್ನು ವನವಾಸಕ್ಕೆ ಕಳಿಸಿದ್ದರು. ಆದರೆ ಸತ್ಯವನ್ನು ಯಾವತ್ತೂ ಮರೆಮಾಚಲು ಆಗಲ್ಲ ಎಂದು ಹೇಳಿದರು.

ಈಗ ಆಸ್ತಿ ಯಾವುದೂ ಬೇಡ ಎಂದು ಪಾರ್ವತಿಯವರೇ ಹೇಳಿದ್ದಾರೆ. ಮೂಡಾ ಕೇಸಲ್ಲಿ ಸಿದ್ದರಾಮಯ್ಯಮವರಿಗೆ ಏನೇನೂ ಆಗಲ್ಲ, ಸತ್ಯ ಯಾವತ್ತೂ ಬಾಳುತ್ತೆ, ಸತ್ಯ ಅಸತ್ಯವನ್ನು ಹೊಡೆದು ಹಾಕುತ್ತೆ. ಬಿಜೆಪಿಯವರು ದಿನಾಲೂ ಅಸತ್ಯ ಮಾತನಾಡ್ತಾರೆ, ಸತ್ಯ ಅದನ್ನೆಲ್ಲ ಹೊಡೆದು ಹಾಕುತ್ತೆ ಎಂದರು.

Advertisement

ಬಿಜೆಪಿಯವರು ಇಷ್ಟೆಲ್ಲ ಆಸ್ತಿ ಹೊಡೆದ್ರಲ್ಲ, ಒಂದು ದಿನ ವಾಪಸ್ ಕೊಟ್ರಾ..? ಜೈಲಿಗೆಲ್ಲಾ ಹೋದ್ರಲ್ಲ ಅಂತಾ ಮಾಜಿ ಸಿಎಂ ಯಡಯೂರಪ್ಪ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಸಚಿವ ಡಿ. ಸುಧಾಕರ್ ಸೈಟ್ ವಾಪಸ್ ನೀಡಿದ್ದು, ಪಾರ್ವತಿಯವರ ತ್ಯಾಗ ಮನೋಭಾವನೆ ತೋರಿಸುತ್ತೆ ಎಂದು ಹೇಳಿದರು.

ದಸರಾ ಒಳಗೆ ಸಿಎಂ ರಾಜಿನಾಮೆ ನೀಡಿ, ಅರೆಸ್ಟ್ ಆಗ್ತಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಅದು ಬಿಜೆಪಿ ನಾಯಕರ ತಿರುಕನ ಕನಸು ಎಂದರು.

ಮುಡಾದಲ್ಲಿ  4 ಸಾವಿರ ಸೈಟ್ ಅಕ್ರಮ ವರ್ಗಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಂಪೂರ್ಣ ತನಿಖೆಯಾಗಲಿ, ಸತ್ಯ ಹೊರ ಬರಲಿ ಎಂದು ಪಾರ್ವತಮ್ಮ ಹೇಳಿದ್ದಾರೆ. ಎಲ್ಲವೂ ಹೊರಬರಲಿ ಎಂದು ರೈಟಿಂಗ್ ನಲ್ಲಿ ಕೊಟ್ಟಿದ್ದಾರೆ ಎಂದು ಹೇಳಿದರು.

ದಲಿತ ಶಾಸಕರು ರಾತ್ರಿ ವೇಳೆ  ಸಭೆ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಡಿ. ಸುಧಾಕರ್, ಯಾವುದೂ ಏನೂ ಆಗಲ್ಲ. ಕಾಂಗ್ರೆಸ್ ನಲ್ಲಿ ದಲಿತ, ಮೈನಾರಿಟಿ, ಜನರಲ್ ಎಲ್ಲಾ ಒಂದೇ. ದಲಿತ ಸಿಎಂ ವಿಚಾರ ಸತ್ಯಕ್ಕೆ ದೂರವಾಗಿದ್ದು, ಹೈ ಕಮಾಂಡ್ ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next