Advertisement

ಗಾಯಕ ರಘು ದಿಕ್ಷೀತ್‌ ಕಟ್ಟಡದಲ್ಲಿ ಕಳವು

11:42 AM Apr 08, 2017 | Team Udayavani |

ಬೆಂಗಳೂರು: ಕಿಟಕಿಯ ಸರಳು ಮುರಿದು ಖಾಸಗಿ ಸಂಸ್ಥೆಯೊಂದರ ಕಚೇರಿಯೊಳಗೆ ನುಗ್ಗಿದ ಆರೋಪಿಗಳು ಅಮೆರಿಕಾ, ಆಸ್ಟ್ರೇಲಿಯಾ ಸೇರಿ ವಿದೇಶಿ ಕರೆನ್ಸಿ ದೋಚಿ ಪರಾರಿಯಾಗಿರುವ ಘಟನೆ ಇಂದಿರಾನಗರದಲ್ಲಿ ನಡೆದಿದೆ.

Advertisement

ಸಂಗೀತ ನಿರ್ದೇಶಕ ರಘು ದಿಕ್ಷೀತ್‌ ಅವರಿಗೆ ಸೇರಿದ ಕಟ್ಟಡದಲ್ಲಿ ಘಟನೆ ನಡೆದಿದ್ದು, ಹೈಗ್ರೌಂಡ್ಸ್‌ ನಿವಾಸಿ ಖಾಸಗಿ ಸಂಸ್ಥೆ (ಕಾರ್ಯಕ್ರಮ ಆಯೋಜನೆ) ಮುಖ್ಯಸ್ಥೆ ನಳಿನಿ ಉಪಾಧ್ಯಾ ಎಂಬುವರು ದೂರು ನೀಡಿದ್ದಾರೆ. ಈ ಕಟ್ಟಡದ ಮೊದಲನೇ ಮಹಡಿಯಲ್ಲಿದ್ದ ಕಚೇರಿಗೆ ನುಗ್ಗಿದ ಚೋರರು ಈ ಕೃತ್ಯ ಎಸಗಿದ್ದು ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಘಟನೆ ನಡೆದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಹೈಗ್ರೌಂಡ್ಸ್‌ನಲ್ಲಿ ವಾಸವಿರುವ ನಳಿನಿ ಅವರು ಕಳೆದ ಕೆಲ ವರ್ಷಗಳಿಂದ ಇವೆಂಟ್‌ ಮ್ಯಾನೆಜ್‌ಮೆಂಟ್‌ ಕಚೇರಿ ನಡೆಸುತ್ತಿದ್ದು, ಕಚೇರಿಯ ಭದ್ರತೆಗಾಗಿ ಇಬ್ಬರು ನೌಕರರನ್ನು ನೇಮಿಸಿದ್ದು, ಬುಧವಾರ ರಾತ್ರಿ ಈ ನೌಕರರು ಊಟ ಮುಗಿಸಿ ಮಲಗಿದ್ದರು.  ಇದೇ ಸಂದರ್ಭದಲ್ಲಿ ಕಿಟಕಿಯ ಸರಳು ಮುರಿದು ಒಳ ಪ್ರವೇಶಿಸಿಸಿದ ಆರೋಪಿಗಳು  ಕಬೋರ್ಡ್‌ನಲ್ಲಿದ್ದ ಅಮೆರಿಕಾ, ಆಸ್ಟ್ರೇಲಿಯಾದ ಕರೆನ್ಸಿ  ಹಾಗೂ  ಎಲೆಕ್ಟ್ರಾನಿಕ್‌ ವಸ್ತು ಸೇರಿ ಸುಮಾರು 10 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಅಂದಾಜು ಮಾಡಲಾಗಿದೆ.

ಆದರೆ, ವಿದೇಶಿ ಕರೆನ್ಸಿ ಮೌಲ್ಯ ಎಷ್ಟೆಂದು ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಕಚೇರಿಯಲ್ಲಿದ್ದ ಇಬ್ಬರು ನೌಕರರನ್ನು ವ‌ಶಕ್ಕೆ ಪಡೆದಿದ್ದು, ವಿಚಾರಣೆ ನಡೆಯುತ್ತಿದೆ. ಅಲ್ಲದೇ ಕಳವು ಆರೋಪಿಗಳು  ಸಂಗೀತ ನಿರ್ದೇಶಕ ರಘು ದಿಕ್ಷೀತ್‌ ಅವರಿಗೆ ಸೇರಿದ್ದ ಸ್ಟುಡಿಯೋಗೂ ಪ್ರವೇಶಿಸಲು ಯತ್ನಿಸಿದ್ದು, ಅಲ್ಲಿಯ ಕಿಟಕಿಯ ಸರಳನ್ನು ಬಿಚ್ಚಲು ಯತ್ನಿಸಿದ್ದಾರೆ. ಆದರೆ. ಸಾಧ್ಯವಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next