Advertisement
ಅಲ್ಲಿಯ ತನಕ ಮಗು ತನ್ನಪಾಡಿಗೆ ತಾನು ಆಡುತ್ತಲೇ ಇತ್ತು. ಅದೇನಾಯಿತೋ! ಈಗ ನಿಂತಲ್ಲೇ ಸುಮ್ಮನೆ ನಿಂತುಬಿಟ್ಟಿದೆ, ಗೊಮ್ಮಟನ ಹಾಗೆ. ಹೆಬ್ಬೆರಳನ್ನು ಚೀಪುತ್ತಾ, ತಾನೇನೋ ತಪ್ಪು ಮಾಡಿದ್ದೇನೋ ಎನ್ನುವ ಚಿಂತೆಯಲ್ಲಿದೆ ಆ ಪುಟಾಣಿ. “ಬಾರೋ ಕಂದಾ…’ ಅಂದರೂ ಅದಕ್ಕೆ ತೊದಲು ಮಾತಿರಲಿ, ಮಗುಳು ನಗುವಿನ ಉತ್ತರವನ್ನೂ ನೀಡುತ್ತಿಲ್ಲ. ಅಂಥದ್ದೇನಾಯ್ತು?
Related Articles
ಪುಟಾಣಿಗೆ “ಠು’ ಒತ್ತಡ ಬರುವಾಗ, ಅದು ಕೆಲವು ಸಂಜ್ಞೆಯನ್ನು ಹೊರಹಾಕುತ್ತದೆ. ಮುಖವನ್ನು ಹಿಂಡುತ್ತದೆ, ಏನಾದರೂ ಆಡುತ್ತಿದ್ದರೆ ಅದನ್ನು ತತ್‌ಕ್ಷಣ ನಿಲ್ಲಿಸುತ್ತದೆ, ಮುಖ ಬಾಡಿಸಿಕೊಳ್ಳುತ್ತದೆ, ಒಂದೂ ಹೆಜ್ಜೆ ಕದಲದೇ ಅಲ್ಲೇ ಇರುತ್ತದೆ… ಇವುಗಳಲ್ಲಿ ಯಾವಾದರೂ ಒಂದು ಸಂಜ್ಞೆಯನ್ನು ಅದು ಪ್ರತಿ ಬಾರಿ ಇಂಥ ವೇಳೆ ಪ್ರತಿಪಾದಿಸುತ್ತಲೇ ಇರುತ್ತದೆ. ಆ ಸಿಗ್ನಲ್ ಯಾವುದು ಎಂದು ನಿಮಗೆ ತಿಳಿದುಬಿಟ್ಟರೆ, ಅದು ಎಲ್ಲೆಂದರಲ್ಲಿ “ಠು’ ಮಾಡುವುದನ್ನು ತಪ್ಪಿಸಬಹುದು.
Advertisement
ಬಿಗು ಉಡುಪು ಬೇಡಪುಟಾಣಿಗಳಿಗೆ “ಠು’ ಒತ್ತಡ ಬಂದಾಗ, ಅವು ಉಡುಪು ತೆಗೆಯಲು ಯತ್ನಿಸುತ್ತವೆ. ಆದರೆ, ಉಡುಪು ಬಿಗಿಯಾಗಿ, ಭದ್ರವಾಗಿ ಇದ್ದಾಗ ಅದನ್ನು ತೆಗೆಯುವುದು ಅವಕ್ಕೆ ಕಷ್ಟವಾಗಬಹುದು. ಅಥವಾ ಹಾಗೆ ತೆಗೆಯುವ ಪ್ರಯತ್ನಕ್ಕೆ ಅವು ಮುಂದಾಗದೆಯೂ ಇದ್ದುಬಿಡಬಹುದು. ಈ ಕಾರಣದಿಂದ, ಇಂಥ ಮಕ್ಕಳಿಗೆ ಡಂಗ್ರೀಸ್ ಮುಂತಾದ ಬಿಗು ಉಡುಪನ್ನು ಹಾಕದಿರುವುದೇ ಒಳ್ಳೆಯದು. ಬೆಚ್ಚಿ ಬೀಳದೇ ಇರಲಿ…
ಪುಟಾಣಿಗಳಿಗೆ ಟಾಯ್ಲೆಟ್‌ನಲ್ಲಿ ನಿತ್ಯಕರ್ಮ ಮಾಡಿಸುವಾಗ, ಅಲ್ಲಿನ ವಾತಾವರಣ ಅದಕ್ಕೆ ಹೆದರಿಕೆ ಹುಟ್ಟಿಸದೇ ಇರಲಿ. ಗಾಢ ಕತ್ತಲೆ, ಶುಚಿಯಿಲ್ಲದೇ ಅತಿಯಾದ ಜಾರುವಿಕೆ, ಜೋರು ಸದ್ದು… ಇಂಥ ವಾತಾವರಣ ಇಲ್ಲದಿರುವಂತೆ ನೋಡಿಕೊಳ್ಳಿ. ಹೀಗೆ ಮಾಡಿದ್ದ ಆದಲ್ಲಿ “ಠು’ ಬರೋವಾಗ, ಕಡೇಪಕ್ಷ ಅವು ಟಾಯ್ಲೆಟ್ ಬಾಗಿಲಿನತ್ತವಾದರೂ ಧಾವಿಸುತ್ತವೆ. ಪ್ರೋತ್ಸಾಹಿಸಿ…
ಬಹುತೇಕ ಪುಟಾಣಿಗಳಿಗೆ ಇಂಥ ವೇಳೆ ಪಶ್ಚಾತ್ತಾಪ ಕಾಡುತ್ತದೆ. ತಾವೇನೋ ತಪ್ಪು ಮಾಡಿಬಿಟ್ಟಿದ್ದೇವೆ ಎಂದು ಮುಖವನ್ನು ಕೆಳಕ್ಕೆ ಮಾಡುತ್ತವೆ. ಅವುಗಳ ಈ ಆತಂಕಭರಿತ, ದುಃಖತಪ್ತ ಭಾವವನ್ನು ಆದಷ್ಟು ಶಮನಗೊಳಿಸಲು ಯತ್ನಿಸಿ. ಅವುಗಳು “ಠು’ ಬಂದಾಗ ಹೇಳಿದರೆ, ಅವತ್ತು ಪೂರಾ ಪುಟಾಣಿಯ ನಡತೆಯನ್ನು ಪ್ರೋತ್ಸಾಹಿಸುವ ಮಾತನಾಡಿ.