Advertisement

Badminton ಆಡುತ್ತಿದ್ದಾಗಲೇ ಕುಸಿದು ಬಿದ್ದು  ಶಟ್ಲರ್‌ ಸಾವು

11:30 PM Jul 01, 2024 | Team Udayavani |

ಜಕಾರ್ತಾ: ಬ್ಯಾಡ್ಮಿಂಟನ್‌ ಪಂದ್ಯ ಆಡುತ್ತಿದ್ದಾಗಲೇ ಕುಸಿದುಬಿದ್ದು ಆಟಗಾರನೋರ್ವ ಮೃತಪಟ್ಟಿರುವ ದಾರುಣ ಘಟನೆ ಇಂಡೋನೇಷ್ಯಾದ ಅಂತಾರಾಷ್ಟ್ರೀಯ ಟೂರ್ನಿಯೊಂದರಲ್ಲಿ ನಡೆದಿದೆ. 17 ವರ್ಷದ ಚೀನ ಆಟಗಾರ ಝಾಂಕ್‌ ಝಿಜಿಯೆ ಈ ದುರ್ದೈವಿ.

Advertisement

ರವಿವಾರದ ಪಂದ್ಯದಲ್ಲಿ ಜಪಾನ್‌ ಕಸುಮ ಕವಾನೊ ವಿರುದ್ಧ ಝಿಜಿಯೆ ಸ್ಪರ್ಧಿಸುತ್ತಿದ್ದರು. ಮೊದಲ ಗೇಮ್‌ 1-1ರಲ್ಲಿದ್ದಾಗ ಝಿಜಿಯೆ ಇದ್ದಕ್ಕಿದ್ದಂತೆ ಕುಸಿದುಬಿದ್ದರು. ಅವರನ್ನು ಬದುಕಿಸುವ ಪ್ರಯತ್ನ ನಡೆಯಿತಾದರೂ ಅದು ಫ‌ಲ ನೀಡಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next