Advertisement

Singapore Open ಬ್ಯಾಡ್ಮಿಂಟನ್: ಜಾಲಿ-ಗಾಯತ್ರಿ ಓಟ ಸೆಮಿಯಲ್ಲಿ ಅಂತ್ಯ

10:57 PM Jun 01, 2024 | Team Udayavani |

ಸಿಂಗಾಪುರ್‌: ಸಿಂಗಾಪುರ್‌ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಭಾರತದ ಟ್ರೀಸಾ ಜಾಲಿ-ಗಾಯತ್ರಿ ಗೋಪಿ ಚಂದ್‌ ಅವರ ಗೆಲುವಿನ ಓಟ ಸೆಮಿಫೈನಲ್‌ನಲ್ಲಿ ಕೊನೆಗೊಂಡಿದೆ. ಶನಿವಾರದ ವನಿತಾ ಡಬಲ್ಸ್‌ ಪಂದ್ಯದಲ್ಲಿ ವಿಶ್ವದ 4ನೇ ರ್‍ಯಾಂಕ್‌ ಆಟಗಾರ್ತಿಯರಾದ ಜಪಾನಿನ ನಾಮಿ ಮತ್ಸುಯಾಮಾ-ಚಿಹಾರು ಶಿಡಾ ಸೇರಿಕೊಂಡು ಭಾರತದ ಜೋಡಿ ವಿರುದ್ಧ 47 ನಿಮಿಷಗಳ ಹೋರಾಟದಲ್ಲಿ 23-21, 21-11 ಅಂತರದ ಗೆಲುವು ಸಾಧಿಸಿದರು.

Advertisement

ಟಾಪ್‌-10 ಜೋಡಿಗಳ ವಿರುದ್ಧ ಹ್ಯಾಟ್ರಿಕ್‌ ಗೆಲುವು ಸಾಧಿಸಲು ಹೊರಟಿದ್ದ ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್‌ ಈ ಕೂಟದಲ್ಲಿ ಯಾವುದೇ ಶ್ರೇಯಾಂಕ ಹೊಂದಿರಲಿಲ್ಲ. ಜಪಾನ್‌ ಜೋಡಿ ವಿರುದ್ಧ ಮೊದಲ ಗೇಮ್‌ನಲ್ಲಿ ದಿಟ್ಟ ಹೋರಾಟ ತೋರಿದರೂ ಅನಂತರ ಇದೇ ಲಯ ಕಾಯ್ದುಕೊಳ್ಳುವಲ್ಲಿ ವಿಫ‌ಲರಾದರು. ಇದರೊಂದಿಗೆ ಫೆಬ್ರವರಿಯಲ್ಲಿ ನಡೆದ ಏಷ್ಯಾ ಟೀಮ್‌ ಚಾಂಪಿಯನ್‌ಶಿಪ್‌ನಲ್ಲಿ ಟ್ರೀಸಾ-ಗಾಯತ್ರಿ ವಿರುದ್ಧ ಅನುಭವಿಸಿದ ಸೋಲಿಗೆ ಮತ್ಸುಯಾಮ-ಶಿಡಾ ಸೇಡು ತೀರಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next