Advertisement

“ಮೈ ಅಟಲ್‌ ಹೂಂ'” ಚಿತ್ರೀಕರಣ ಆರಂಭ

11:50 PM May 07, 2023 | Pranav MS |

ಮುಂಬಯಿ: ಮಾಜಿ ಪ್ರಧಾನಿ ದಿ| ಅಟಲ್‌ ಬಿಹಾರಿ ವಾಜಪೇಯಿ ಅವರ ಜೀವನಾಧಾರಿತ ಸಿನೆಮಾ ” ಮೈ ಅಟಲ್‌ ಹೂಂ” ಚಿತ್ರೀಕರಣ ಆರಂಭಗೊಂಡಿದ್ದು, ಖ್ಯಾತ ನಟ ಪಂಕಜ್‌ ತ್ರಿಪಾಠಿ ತಾವು ಚಿತ್ರೀಕರಣದಲ್ಲಿ ತೊಡಗಿರುವುದಾಗಿ ರವಿವಾರ ತಿಳಿಸಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತರಾದ ರವಿ ಜಾಧವ್‌ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ, ವಾಜಪೇಯಿ ಅವರ ಪಾತ್ರವನ್ನು ತ್ರಿಪಾಠಿ ನಿರ್ವಹಿಸಲಿದ್ದಾರೆ. ಈ ಕುರಿತಂತೆ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡಿರುವ ಅವರು, ಸಿನೆಮಾ ಮುಹೂರ್ತದ ಚಿತ್ರಪಟಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಪಾತ್ರಕ್ಕೆ ನ್ಯಾಯ ಒದಗಿಸುವ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವರ್ಷದ ಡಿಸೆಂಬರ್‌ನಲ್ಲಿ ಸಿನೆಮಾ ತೆರಕಾರಣುವ ನಿರೀಕ್ಷೆಯೂ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next