Advertisement

ಕುರುಬ ಸಮುದಾಯ ಒಂದು ಪಕ್ಷಕ್ಕೆ ಸೀಮಿತವಲ್ಲ

01:50 PM May 12, 2018 | |

ದೇವನಹಳ್ಳಿ: ಕುರುಬ ಸಮಾಜ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಎಲ್ಲಾ ಪಕ್ಷಗಳಲ್ಲೂ ಕುರುಬ ಸಮುದಾಯದವರು ಇದ್ದಾರೆ. ಇಂಥವರಿಗೆ ಬೆಂಬಲಿಸಿ ಎನ್ನುವುದು ಸರಿಯಲ್ಲ ಎಂದು ತಾಲೂಕು ಜೆಡಿಎಸ್‌ ಮಹಾ ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ ತಿಳಿಸಿದರು.

Advertisement

ನಗರದ ಪ್ರಶಾಂತ ನಗರದಲ್ಲಿರುವ ತಾಲೂಕು ಜೆಡಿಎಸ್‌ ಭವನದಲ್ಲಿ ಜೆಡಿಎಸ್‌ ಕುರುಬ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿ, ಒಂದೇ ಪಕ್ಷಕ್ಕೆ ಯಾರೂ ಸೀಮಿತವಾಗಿಲ್ಲ. ಜೆಡಿಎಸ್‌ ಪಕ್ಷದಿಂದ ಹಲವಾರು ಹುದ್ದೆಗಳನ್ನು ಅನುಭವಿಸಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸದಸ್ಯರಾಗಿ ಇತರರು ಅಧಿಕಾರ ಅನುಭವಿಸಿ ಈಗ ಪಕ್ಷದ ವಿರುದ್ಧ ಟೀಕೆ ಮಾಡುತ್ತಾರೆ ಎಂದು ಕಾಂಗ್ರೆಸ್‌ನ ಕುಂದಾಣ ಹೋಬಳಿ ಅಧ್ಯಕ್ಷ ಕೋದಂಡರಾಮ್‌ ಮತ್ತಿತರರ
ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.  ದೇವನಹಳ್ಳಿ ಪುರಸಭೆ ಇತಿಹಾಸದಲ್ಲಿ ಕುರುಬ ಸಮುದಾಯದ ಯಾರೂ ಅಧ್ಯಕ್ಷರಾಗಿಲ್ಲ ಎಂದು ಹೇಳಿದರು.

ಒಗ್ಗಟ್ಟು ಒಡೆಯಲು ಕುತಂತ್ರ: ವಕೀಲ ಬೀರಪ್ಪಮಾತನಾಡಿ, ಕುರುಬ ಸಮುದಾಯದ ಎಲ್ಲಾ ಮುಖಂಡರು ಒಗ್ಗಟ್ಟಿನ ಜಪ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಆಗಿದೆ. ಮತದಾನ ಮತದ ಹಕ್ಕು ಅವರ ಇಚ್ಛೆಗೆ ಅನುಗುಣವಾಗಿರುತ್ತದೆ. ಇಂಥಹವರಿಗೆ ಮತಹಾಕಿ, ಅಂತವರಿಗೆ ಮತಹಾಕಿ ಎಂದು ಹೇಳುವುದು ವಿಪರ್ಯಾಸವಾಗಿದೆ. ಕುರುಬ ಸಮುದಾಯದ ಒಗ್ಗಟ್ಟನ್ನು ಒಡೆಯುವುದಕ್ಕಾಗಿ ಇಂತಹ ಕುತಂತ್ರಗಳನ್ನು ಮಾಡುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ವ್ಯಕ್ತಿಗೆ ಮತ ಹಾಕಬೇಕು. ಯಾರ ಒತ್ತಡಕ್ಕೂ ಮಣಿಯಬೇಡಿ.
 
ಅಂಥವರಿಗೆ ಇಂಥವರಿಗೆ ಮತವನ್ನು ಹಾಕಿ ಎಂದರೆ ಅದಕ್ಕೆ ಕಿವಿಗೊಡಬೇಡಿ ಎಂದು ಸಲಹೆ ಮಾಡಿದರು. ಪುರಸಭಾ ಸದಸ್ಯ ಬಿ.ದೇವರಾಜ್‌ ಮಾತನಾಡಿ, 1995ರಿಂದ ಪುರಸಭಾ ಚುನಾವಣೆಯಲ್ಲಿ ಪಕ್ಷೇತರನಾಗಿ ಗೆದ್ದುಬರುತ್ತಿದ್ದೇನೆ. ಕುಮಾರಸ್ವಾಮಿ ಅವರ ಜನಪ್ರಿಯ ಕಾರ್ಯಕ್ರಮಗಳನ್ನು ಮೆಚ್ಚಿ ಹಾಗೂ ನಿಸರ್ಗ ನಾರಾಯಣಸ್ವಾಮಿ ಅವರ ಸಮಾಜಸೇವೆ ಮೆಚ್ಚಿ ಜೆಡಿಎಸ್‌ಗೆ ಬಂದಿದ್ದೇನೆ ಎಂದು ಹೇಳಿದರು. 

ಜೆಡಿಎಸ್‌ ಅಭ್ಯರ್ಥಿ ನಿಸರ್ಗ ನಾರಾಯಣಸ್ವಾಮಿ ಮಾತನಾಡಿದರು. ಇದೇ ವೇಳೆ ಟೌನ್‌ ಜೆಡಿಎಸ್‌ ಅಧ್ಯಕ್ಷ ಮುನಿನಂಜಪ್ಪ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಪಿ.ರವಿಕುಮಾರ್‌, ಪುರಸಭಾ ಸದಸ್ಯ ಬೇಕರಿ ಮಂಜುನಾಥ್‌, ಎಪಿಎಂಸಿ ನಿರ್ದೇಶಕ ಕಂಚಿನಾಳ ಲಕ್ಷ್ಮೀನಾರಾಯಣ್‌, ಆವತಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ, ಗ್ರಾಪಂ ಸದಸ್ಯ ನಾರಾಯಣಸ್ವಾಮಿ, ಜಿಪಂ ಮಾಜಿ ಸದಸ್ಯ ಎಂ.ಬಸವರಾಜು, ಮಾಜಿ ಪುರಸಭಾ ಸದಸ್ಯ ಶ್ರೀನಿವಾಸ್‌ ಉತ್ತಮ್‌, ಮುಖಂಡ ಡಿ.ಎಸ್‌. ನಾಗರಾಜ್‌, ನಾಗರಾಜ್‌, ಶಿವಕುಮಾರ್‌, ಗೋಪಾಲ್‌, ಸುರೇಶ್‌, ನಾಗೇಶ್‌, ಹರೀಶ್‌, ಪ್ರಕಾಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next